ಚೆಕ್ ಪೋಸ್ಟ್ ಗಳಲ್ಲಿ ಜನರ ಕಡ್ಡಾಯ ತಪಾಸಣೆ: ಮೈಸೂರು ಡಿಸಿ

ಮೈಸೂರು, ಮಾರ್ಚ್ 23: ಬೆಂಗಳೂರಿನಿಂದ ರಸ್ತೆ ಮೂಲಕ ಮೈಸೂರಿಗೆ ಬರುವ ಎಲ್ಲಾ ಚೆಕ್ ಪೋಸ್ಟ್ ಬಳಿ ಕಡ್ಡಾಯವಾಗಿ ಸಾರ್ವಜನಿಕರ ತಪಾಸಣೆ ಮಾಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದರು.

ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಹಾಗೂ ಮೈಸೂರು ಜಿಲ್ಲೆ ಲಾಕ್ ಡೌನ್ ಕುರಿತು ಇಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್‌ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.+

ಮೈಸೂರು ಜಿಲ್ಲೆಯ ಗಡಿ ಭಾಗಗಳ ಎಲ್ಲ ಚೆಕ್‌ ಪೋಸ್ಟ್‌ ಗಳ ಬಳಿ ಕಡ್ಡಾಯ ತಪಾಸಣೆ ಮಾಡಲಾಗುತ್ತಿದ್ದು, ಜನ ವಿನಾಕಾರಣ ರಸ್ತೆಗೆ ಬರಬೇಡಿ. ಜನತಾ ಕರ್ಫ್ಯೂಗೆ ನೀಡಿದ ರೀತಿಯಲ್ಲಿ ಲಾಕ್ ಡೌನ್ ಗೆ ಇಂದು ಬೆಂಬಲ ಸಿಕ್ಕಿಲ್ಲವೆಂದರು.

Mysuru DC Said Mandatory Inspection At Check Posts

ಅನವಶ್ಯಕವಾಗಿ ಓಡಾಡುವ ವ್ಯಕ್ತಿಗಳ ವಿರುದ್ದ ಕ್ರಿಮಿನಲ್ ಕೇಸ್ ಹಾಕಲಾಗುವುದು. ಅವಶ್ಯಕತೆ ಇದ್ದರೆ ನಾವೇ ತುರ್ತು ವಾಹನ ನಿಮ್ಮ ಮನೆ ಬಾಗಿಲಿಗೆ ಕಳುಹಿಸುತ್ತೇವೆ. ಇಂದಿನಿಂದ ಖಾಸಗಿ ಆಟೋ, ಓಲಾ, ಉಬರ್ ವಾಹನ ಸ್ಥಗಿತ ಗೊಳಿಸಲಾಗುವುದು. ಎಲ್ಲಾ ಖಾಸಗಿ ವಾಹನ ತಪಾಸಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+