ಮೈಸೂರು ದಸರಾ: ಪ್ರವಾಸಿಗರಿಗಾಗಿ ಸಿಂಗಲ್ ಟಿಕೇಟ್ ಸೌಲಭ್ಯ
ಮೈಸೂರು ಸೆಪ್ಟೆಂಬರ್ 22: ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಜಿಲ್ಲಾಡಳಿತ ಮೊದಲಿಗೆ ಸಿಂಗಲ್ ಟಿಕೇಟ್ ವ್ಯವಸ್ಥೆ ಅನುಷ್ಠಾನ ಮಾಡಲಾಗುತ್ತಿದ್ದು ಸೆಪ್ಟೆಂಬರ್ 22 ರಿಂದ ಸೆಪ್ಟೆಂಬರ್ 30 ರವರೆಗೆ ಪ್ರವಾಸಿಗರು ಅವಕಾಶ ಬಳಸಿಕೊಳ್ಳಬಹುದಾಗಿದೆ.
ದಸರಾ ವಿಶೇಷಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಿ. ರಂದೀಪ್ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಜಿಲ್ಲಾಧಿಕಾರಿಗಳು ಮಾತನಾಡಿ ಈ ವ್ಯವಸ್ಥೆ ಆಧುನಿಕ ಕ್ಯೂ ಅರ್ ಕೋಡ್ ಇರುತ್ತದೆ. ಈ ಬಗ್ಗೆ ದಸರಾ ಉನ್ನತ ಮಟ್ಟದ ಸಮಿತಿಯಲ್ಲಿ ಚರ್ಚೆ ಆಗಿತ್ತು ಅದರಂತೆ ಸಿಂಗಲ್ ಟಿಕೇಟ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಪ್ರವಾಸಿಗರಿಗೆ ಸರತಿ ಸಾಲಿನಲ್ಲಿ ನಿಲ್ಲುವ ಕಿರಿಕಿರಿ ಇರುವುದಿಲ್ಲ ಎಂದು ತಿಳಿಸಿದರು.

ಶುಕ್ರವಾರದಿಂದಲೇ ಜಿಲ್ಲಾಧಿಕಾರಿಗಳ ಕಚೇರಿಯ ಸ್ಪಂದನ ಕೇಂದ್ರದಲ್ಲಿ ಆನ್ ಲೈನ್ ಮೂಲಕ ಪಡೆಯಬಹುದಾಗಿದೆ ಎಂದು ತಿಳಿಸಿದರು. ಮೈಸೂರು ಅರಮನೆ, ಮೃಗಾಲಯ, ಕಾರಂಜಿಕೆರೆ, ಚಾಮುಂಡೇಶ್ವರಿ ದೇವಾಲಯ, ಕೆ.ಆರ್.ಎಸ್. ಹಾಗೂ ರಂಗನತಿಟ್ಟು ಪ್ರವಾಸಿ ತಾಣಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಪ್ರವಾಸಿಗರು ಬುಕ್ ಮೈ ಶೋ ವೆಬ್‍ನ ಮೂಲಕ ಆನ್‍ಲೈನ್‍ನಲ್ಲಿ ಪಡೆಯಬಹುದಾಗಿದೆ.
ಪ್ರವಾಸಿಗರು ಟಿಕೇಟ್ ಖರೀದಿ ಮಾಡಿದ 15 ದಿನಗಳವರೆಗೆ ಯಾವಾಗಬೇಕಾದರು ಭೇಟಿ ನೀಡಬಹುದಾಗಿದೆ. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಹೆಚ್.ಪಿ. ಜನಾರ್ಧನೆ ಅವರು ಟಿಕೇಟ್ ಖರೀದಿಗಾಗಿ www.bookmyshow.com (ಕೃಪೆ: ಕರ್ನಾಟಕ ವಾರ್ತೆ)












Click it and Unblock the Notifications