ಮೈಸೂರು ದಸರಾ: ಗಜಪಯಣ ಆಗಸ್ಟ್ 14ರಿಂದ ಆರಂಭ
ಮೈಸೂರು , ಜುಲೈ 31: ಮೈಸೂರು , ಜುಲೈ 31: ಈ ಬಾರಿಯ ನಾಡಹಬ್ಬಕ್ಕಾಗಿ ನಡೆಯಲಿರುವ ಗಜಪಯಣದ ದಿನಾಂಕವು ಅಧಿಕೃತವಾಗಿ ತಾನೇ ಘೋಷಣೆ ಮಾಡಿದ ನಂತರ, ಕೇವಲ ಎರಡೇ ಗಂಟೆಗಳಲ್ಲಿ ಜಿಲ್ಲಾಡಳಿತ ಹೊಸ ದಿನಾಂಕ ಪ್ರಕಟಿಸಿದೆ.
ಮೊದಲಿಗೆ ನಡೆದ ಸುದ್ದಿಗೋಷ್ಠಿಯಲ್ಲಿ ಇದೇ ಆಗಸ್ಟ್ 10 ರಂದು ಗಜಪಯಣ ಆರಂಭವಾಗಲಿದೆ ಎಂದು ಮಾಹಿತಿ ನೀಡಲಾಯಿತು. ಆದರೆ, ಗಂಟೆಗಳಲ್ಲೇ ಹೊಸ ದಿನಾಂಕ ಪ್ರಕಟಿಸಿದ ಜಿಲ್ಲಾಡಳಿತ ಆಗಸ್ಟ್ 14ರಂದು ಗಜಪಯಣ ನಡೆಸುವುದಾಗಿ ಅದು ತಿಳಿಸಿತು.

ಆಗಸ್ಟ್ 14 ರಂದು ಬೆಳಿಗ್ಗೆ 11 ಗಂಟೆಗೆ ಗಜಪಯಣದ ಸಮಯ ನಿಗದಿಯಾಗಿದ್ದು, ಆಗಸ್ಟ್ 17 ರಂದು ಮಧ್ಯಾಹ್ನ 12: 05ಕ್ಕೆ ಗಜಪಡೆಯನ್ನು ಅರಮನೆಯಲ್ಲಿ ಸ್ವಾಗತಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ. ರಂದೀಪ್ ತಿಳಿಸಿದ್ದಾರೆ. ಹುಣಸೂರಿನ ವೀರನ ಹೊಸಹಳ್ಳಿಯಲ್ಲಿ ಗಜಪಯಣ ಪ್ರಾರಂಭವಾಗಲಿದೆ ಎಂದೂ ಅವರು ತಿಳಿಸಿದ್ದಾರೆ.












Click it and Unblock the Notifications