Mysuru Dasara 2024: ದಸರಾಕ್ಕೆ ಸಜ್ಜಾಗುತ್ತಿರುವ ಐತಿಹಾಸಿಕ ಮೈಸೂರು ಅರಮನೆ..!

ಮೈಸೂರು, ಸೆಪ್ಟೆಂಬರ್‌ 24: ಐತಿಹಾಸಿಕ ಮೈಸೂರು ದಸರಾದಲ್ಲಿ ಅರಮನೆಯೇ ಪ್ರಮುಖ ಆಕರ್ಷಣೆಯಾಗಿದ್ದು, ನವರಾತ್ರಿ ವೇಳೆ ಒಂಬತ್ತು ದಿನಗಳ ಕಾಲ ಅರಮನೆಯಲ್ಲಿ ಸಾಂಪ್ರದಾಯಿಕ ಖಾಸಗಿ ದರ್ಬಾರ್ ನಡೆಯುವುದರೊಂದಿಗೆ ಇಡೀ ಅರಮನೆ ವಿದ್ಯುದ್ದೀಪದಿಂದ ಬೆಳಗುತ್ತದೆ. ಜತೆಗೆ ಅರಮನೆ ಆವರಣದಲ್ಲಿ ಪ್ರತಿದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳ ಕಂಪು ಪಸರಿಸಲಿದೆ. ಹೀಗಾಗಿ ದಸರಾಕ್ಕೆ ಅರಮನೆಗೆ ಸುಣ್ಣಬಣ್ಣ ಬಳಿದು, ಕೆಟ್ಟುಹೋದ ವಿದ್ಯುದ್ದೀಪಗಳನ್ನು ಬದಲಾಯಿಸುವುದು ಸೇರಿದಂತೆ ವಿವಿಧ ಕೆಲಸಗಳ ಮೂಲಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಅರಮನೆಯ ಪ್ರಮುಖ ಆಕರ್ಷಣೆಯೇ ವಿದ್ಯುದ್ದೀಪವಾಗಿದ್ದು, ವಿದ್ಯುದ್ದೀಪದಲ್ಲಿ ಬೆಳಗುವ ಅರಮನೆಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ ಹೀಗಾಗಿ ಅರಮನೆಗೆ ಅಳವಡಿಸಲಾಗಿರುವ ಬಲ್ಬ್ ಗಳಲ್ಲಿ ಕೆಟ್ಟುಹೋದ ಬಲ್ಬ್ ಗಳನ್ನು ತೆಗೆದು ಹೊಸ ಬಲ್ಬ್ ಗಳನ್ನು ಅಳವಡಿಸುವ ಕೆಲಸ ಶುರು ಮಾಡಲಾಗಿದೆ. ಕಳೆದ ಎರಡು ವಾರಗಳಿಂದ ಅರಮನೆ ಸಿಬ್ಬಂದಿ ಒಳಗೊಂಡಂತೆ ಎಲೆಕ್ಟ್ರಿಷಿಯನ್‌ಗಳು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅರಮನೆ ಮುಖ್ಯ ಕಟ್ಟಡ, ಪ್ರವೇಶದ್ವಾರ, ವಿವಿಧ ಗೋಡೆ ಮೇಲೆ ಅಳವಡಿಸಿರುವ ಒಟ್ಟು ಒಂದು ಲಕ್ಷ ಬಲ್ಬ್ ಗಳನ್ನು ಪರೀಕ್ಷೆ ಮಾಡಲಾಗುತ್ತದೆ.

Mysuru Dasara 2024 Historic Mysuru Palace Gearing Up For Dasara

ಪ್ರತಿವರ್ಷವೂ ಬಲ್ಬ್ ಗಳು ಪಾರಿವಾಳಗಳು ಹಾರಾಡುವಾಗ, ಜೋರಾಗಿ ಗಾಳಿ ಬೀಸಿದಾಗ, ದೀಪಾಲಂಕಾರದ ವೇಳೆ, ಮಳೆ ಬಂದಾಗ ಕೆಲವು ಬಲ್ಬ್ ಗಳು ಹಾಳಾಗುತ್ತವೆ. ಹೀಗಾಗಿ ಅವುಗಳನ್ನು ದಸರಾದ ವೇಳೆ ತೆಗೆದು ಸರಿಪಡಿಸಲಾಗುತ್ತದೆ. ಈ ವೇಳೆ ಇರುವ ಒಂದು ಲಕ್ಷ ಬಲ್ಬ್ ಗಳ ಪೈಕಿ ಕನಿಷ್ಟ ಹದಿನೈದರಿಂದ ಇಪ್ಪತ್ತು ಸಾವಿರದಷ್ಟು ಬಲ್ಬ್ ಗಳು ಬೇಕಾಗುತ್ತವೆ. ಇವುಗಳೆಲ್ಲವೂ ಬೆಳಗಿದರೆ ಮಾತ್ರ ಅರಮನೆಗೆ ಹೊಸ ಮೆರಗು ಬರುತ್ತದೆ. ಇಲ್ಲಿರುವ ಬಲ್ಬ್ ಗಳೆಲ್ಲವೂ ಸಾಮಾನ್ಯ ಬಲ್ಬ್ ಗಳಾಗಿದ್ದು ಅವು ಸ್ವರ್ಣ ಬಣ್ಣ ಹೊಂದಿದ್ದು ಅರಮನೆಯನ್ನು ಇಂದ್ರನ ಅಮರಾವತಿ ಮಾಡಲಿವೆ.

ಭರದಿಂದ ಸಾಗಿರುವ ದೀಪಾಲಂಕಾರ ಕಾರ್ಯ

ಇನ್ನು ಅರಮನೆ ಸುಂದರವಾಗಿ ಕಾಣುವಂತೆ ಮಾಡಲು ಮತ್ತು ಮದುವಣಗಿತ್ತಿಯಂತೆ ಕಾಣಲು ಸುಣ್ಣಬಣ್ಣ ಬಳಿಯುವ ಕೆಲಸ ಪ್ರಗತಿಯಲ್ಲಿದೆ. ಜತೆಗೆ ದಸರಾಕ್ಕೆ ಬೇಕಾದ ಸಿದ್ಧತೆಗಳನ್ನು ಅರಮನೆ ಮಂಡಳಿ ಮಾಡಿಕೊಳ್ಳುತ್ತಿದೆ. ಅರಮನೆ ಜಯಮಾರ್ತಾಂಡ ದ್ವಾರದ ಪಕ್ಕದ ತ್ರಿನೇಶ್ವರ ದೇಗುಲಕ್ಕೆ ಸುಣ್ಣ-ಬಣ್ಣ ಬಳಿಯುವಲ್ಲಿ ಕಾರ್ಮಿಕರು ನಿರತರಾಗಿದ್ದಾರೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ದೀಪಾಲಂಕಾರದ ಸಿದ್ಧತೆ ಭರದಿಂದ ಸಾಗುತ್ತಿದೆ. ಈ ಬಾರಿ ನಗರದಲ್ಲಿ 130ಕಿ.ಮೀ ದೀಪಾಲಂಕಾರ ಮಾಡಲಿದ್ದು, ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ವಿದ್ಯುದ್ದೀಪ ಅಳವಡಿಸುವ ಕೆಲಸ ನಡೆಯುತ್ತಿದ್ದು, ಅರಮನೆ ಸುತ್ತಮುತ್ತಲ ರಸ್ತೆ, ಜಂಬೂ ಸವಾರಿ ಸಾಗುವ ಸಯ್ಯಾಜಿರಾಜ್ ರಸ್ತೆ, ಮೈಸೂರು ನಂಜನಗೂಡು ರಸ್ತೆ ಸೇರಿದಂತೆ ನಗರದೆಲ್ಲೆಡೆ ದೀಪಾಲಂಕಾರ ಕಾರ್ಯ ಭರದಿಂದ ಸಾಗುತ್ತಿದೆ.

Mysuru Dasara 2024 Historic Mysuru Palace Gearing Up For Dasara

ವಿದ್ಯುದ್ದೀಪಗಳಿಂದ ಪ್ರಜ್ವಲಿಸುವ ಅರಮನೆ ದೀಪಾಲಂಕಾರದ ಬಗ್ಗೆ ನೋಡಿದ್ದೇ ಆದರೆ 1942ರ ಆಸುಪಾಸಿನಲ್ಲಿ ಯದುವಂಶದ ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್ ಅರಮನೆಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿದರು ಎಂದು ಹೇಳಲಾಗಿದೆ. ತೇಗದ ಮರದ ಪಟ್ಟಿಗಳ ಮೇಲೆ ವೋಲ್ಡರ್‌ಗಳನ್ನು ಜೋಡಿಸಿ ಸುಮಾರು ಒಂದು ಲಕ್ಷ ಕ್ಯಾಂಡಿಸೆಂಟ್ ಬಲ್ಬ್ ಗಳನ್ನು ಅಳವಡಿಸಿದ್ದರು. ಆರಂಭದಲ್ಲಿ 30 ವ್ಯಾಟ್‌ನ ಬಲ್ಬ್ ಗಳನ್ನು ಅಳವಡಿಸಲಾಗಿತ್ತು. ನಂತರದ ದಿನಗಳಲ್ಲಿ 20 ವ್ಯಾಟ್‌ಗೆ ಇಳಿಸಲಾಯಿತು. ಪ್ರಸ್ತುತ 15 ವ್ಯಾಟ್‌ನ ಬಲ್ಬ್ ಗಳನ್ನು ಅಳವಡಿಸಲಾಗಿದೆ.

ಅರಮನೆ ಹೊರಗೆ ಒಳಗೆ ದಸರಾ ಸಂಭ್ರಮ

ವಿದ್ಯುತ್ ಪೂರೈಕೆ ಜಬಾಬ್ದಾರಿಯನ್ನು ಜವಾಬ್ದಾರಿಯನ್ನು ಚೆಸ್ಕಾಂ ವಹಿಸಿಕೊಂಡಿದ್ದು, ದೀಪಾಲಂಕಾರದ ವ್ಯವಸ್ಥೆಗಾಗಿ ಹೆಚ್ಚು ಸಾಮರ್ಥ್ಯದ ಮೂರು ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸಲಾಗಿದೆ. ಪ್ರತಿ ತಿಂಗಳು 8 ರಿಂದ 10 ಲಕ್ಷ ರೂ.ಗಿಂತಲೂ ಹೆಚ್ಚು ವಿದ್ಯುತ್ ಬಿಲ್ ಬರುತ್ತದೆ ಎಂದು ಹೇಳಲಾಗುತ್ತದೆ. ತಿಂಗಳಿಗೆ ಸರಾಸರಿ 88 ಸಾವಿರ ಯೂನಿಟ್ ವಿದ್ಯುತ್ ಬಳಸಲಾಗುತ್ತದೆ. ದಸರಾ ಸಂದರ್ಭದಲ್ಲಿ 1.2 ಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗುತ್ತದೆ ಎನ್ನಲಾಗಿದೆ. ಈ ದೀಪಾಲಂಕಾರಗಳನ್ನು ನೋಡಿಕೊಳ್ಳಲೆಂದೇ ಅರಮನೆಯ ಪವರ್ ಹೌಸ್‌ನಲ್ಲಿ ಪ್ರತ್ಯೇಕ ಸಿಬ್ಬಂದಿಯಿದ್ದಾರೆ.

Mysuru Dasara 2024 Historic Mysuru Palace Gearing Up For Dasara

ಇನ್ನು ವಿದ್ಯುದ್ದೀಪಗಳನ್ನು ಉರಿಸಲು ಅರಮನೆ ಹಾಗೂ ಗೇಟ್‌ಗಳಿಗೆ ಪ್ರತ್ಯೇಕ ಮೂರು ಸ್ವಿಚ್ ಅಳವಡಿಸಲಾಗಿದ್ದು, ದೀಪಾಲಂಕಾರದ ವೇಳಾಪಟ್ಟಿಯಂತೆ ಇಲ್ಲಿರುವ ಸಿಬ್ಬಂದಿ ಇಂಜಿನಿಯರ್ ಅಣತಿಯಂತೆ ಸ್ವಿಚ್ ಆನ್ ಮಾಡುತ್ತಾರೆ. ಆಗ ಒಮ್ಮೆಲೆ ಅರಮನೆ ದೀಪದ ಬೆಳಕಿನಲ್ಲಿ ಮಿನುಗುತ್ತದೆ. ಒಟ್ಟಾರೆ ಮೈಸೂರು ಅರಮನೆ ದಸರಾಗೆ ಸರ್ವ ರೀತಿಯಲ್ಲಿ ಸಿದ್ಧಗೊಳ್ಳುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಅರಮನೆಯ ಹೊರಗೆ ಮತ್ತು ಒಳಗೆ ದಸರಾ ಸಂಭ್ರಮ ಮನೆ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+