ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವರಾತ್ರಿ 6ನೇ ದಿನ: ಮೈಸೂರು ಅರಮನೆಯಲ್ಲಿ ಸರಸ್ವತಿ ಪೂಜೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 12: ನಾಡಹಬ್ಬ ದಸರೆಯ ಸಂಭ್ರಮದ ನಡುವೆ ನವರಾತ್ರಿಯ ಆರನೇ ದಿನವಾದ ಮಂಗಳವಾರ ಮೈಸೂರು ಅರಮನೆಯಲ್ಲಿ ಸರಸ್ವತಿ ಪೂಜೆ ನೆರವೇರಿಸಲಾಯಿತು.

ಅರಮನೆಯ ಕರಿಕಲ್ಲು ತೊಟ್ಟಿ ಪ್ರಾಂಗಣದಲ್ಲಿ ನಡೆದ ಧಾರ್ಮಿಕ ಕೈಂಕರ್ಯದಲ್ಲಿ ರಾಜಮನೆತನದ ಗ್ರಂಥಗಳು, ತಾಳೆ ಗರಿಗಳು, ಸಂಗೀತ ಪರಿಕರಗಳಿಗೆ ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಕೊರೊನಾ ಭೀತಿಯ ಕಾರಣಕ್ಕೆ ಸರಸ್ವತಿ ಪೂಜೆಗೆ ಅರಮನೆಯ ಅರ್ಚಕರನ್ನು ಹೊರತುಪಡಿಸಿ, ಬೇರೆ ಯಾರಿಗೂ ಪ್ರವೇಶವಿರಲಿಲ್ಲ.

ಅತ್ತ ಅರಮನೆಯಲ್ಲಿ ನವರಾತ್ರಿಯ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದರೆ, ಇತ್ತ ಅರಮನೆಯ ಹೊರಗೆ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಮೆರವಣಿಗೆಗೆ ಕೊನೆಯ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜಂಬೂಸವಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಎರಡು ಸುತ್ತಿನಲ್ಲಿ ಜಂಬೂಸವಾರಿ ಮೆರವಣಿಗೆಯ ತಾಲೀಮು ನಡೆಸಲಾಯಿತು.

Mysuru Dasara 2021: Saraswati Puja Held At Mysuru Palace On 6th Day Of Navaratri

ಅರಮನೆಯ ಆವರಣದಲ್ಲಿ‌ ನಡೆದ ತಾಲೀಮಿನಲ್ಲಿ ಡಿಸಿಎಫ್ ಡಾ.ವಿ. ಕರಿಕಾಳನ್, ಗಜಪಡೆ ಕ್ಯಾಪ್ಟನ್ ಅಭಿಮನ್ಯುವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ತಾಲೀಮಿಗೆ ಚಾಲನೆ ನೀಡಿದರು. ಮರದ ಅಂಬಾರಿ ಕಟ್ಟದೆ ಆನೆಗಳಿಗೆ ನಡೆಸಲಾದ ತಾಲೀಮಿನಲ್ಲಿ ಕುಮ್ಕಿ ಆನೆಗಳಾಗಿ ಚೈತ್ರಾ, ಕಾವೇರಿ ಗಜಪಡೆ ಸಾರಥಿಗೆ ಸಾಥ್ ನೀಡಿದವು.

ರಾಷ್ಟ್ರಗೀತೆಗೆ ಅನುಗುಣವಾಗಿ ಸಿಎಆರ್ ಸಿಬ್ಬಂದಿ 21 ಸುತ್ತು ಕುಶಾಲತೋಪು ಸಿಡಿಸಿದರು. ಆನೆಗಳ ಜತೆ ಅಶ್ವಾರೋಹಿ ಪಡೆಯೂ ಭಾಗವಹಿಸಿದ್ದವು. ಇನ್ನು ಪೊಲೀಸರ ವಾದ್ಯ ವೃಂದದ ಹಿಮ್ಮೇಳದೊಂದಿಗೆ ಪೊಲೀಸ್ ಪಡೆಗಳು ಪಥ ಸಂಚಲನ ನಡೆಸಿದರು.

ಅ.13ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ
ಮೈಸೂರು, ಅಕ್ಟೋಬರ್ 12: ಕೊರೊನಾ ಕಾರಣದಿಂದ ಈ ಬಾರಿ ಮೈಸೂರು ದಸರಾ ಅದ್ಧೂರಿಯಲ್ಲದಿದ್ದರೂ, ಸರಳ ಹಾಗೂ ಸುಂದರವಾಗಿ ಆರಂಭವಾಗಿದೆ. ಮೈಸೂರು ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಕೆಲವೇ ಜನರಿಗೆ ಮಾತ್ರ ನೇರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಉಳಿದಂತೆ ಸಾಮಾಜಿಕ ಜಾಲತಾಣದಲ್ಲಿ ಜನರು ಕಣ್ತುಂಬಿಕೊಳ್ಳಬಹುದು.

ಇದೇ ಸಂದರ್ಭದಲ್ಲಿ ಮೊದಲ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 13ರಂದು (ಬುಧವಾರ) ಮೈಸೂರು ಅರಮನೆ ಆವರಣದಲ್ಲಿ ನಡೆಯಲಿದೆ.

ಮೈಸೂರು ಜಿಲ್ಲಾಡಳಿತವು ಜೂನ್ 4 ರಂದು ಮೈಸೂರು ಸಂಸ್ಥಾನದ ಆಡಳಿತಗಾರ ದಿವಂಗತ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನದ ಸಂದರ್ಭದಲ್ಲಿ ವಿಜೇತರ ಹೆಸರನ್ನು ಘೋಷಿಸಿದೆ.

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾದ 12 ವ್ಯಕ್ತಿಗಳಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಮಾಜಿ ಸಚಿವ ಹಾಗೂ ಕೃಷ್ಣರಾಜ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಎಸ್.ಎ. ರಾಮದಾಸ್ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಚಿಂತಕ ಹಾಗೂ ಹಾಸ್ಯ ಭಾಷಣಕಾರ ಪ್ರೊ. ಕೃಷ್ಣೇಗೌಡ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಿದ್ದಾರೆ. ಮೈಸೂರು ಜಿಲ್ಲೆಯ ಜನಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಡಳಿತದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿಜೇತರ ಪಟ್ಟಿ
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ವಿಜೇತರಲ್ಲಿ ಜಿ.ಎಸ್. ಜಯದೇವ (ಶಿಕ್ಷಣ, ಚಾಮರಾಜನಗರ), ಈಚನೂರು ಕುಮಾರ್ (ಆಡಳಿತಗಾರರ ಇತಿಹಾಸ, ಮೈಸೂರು), ಶಂಕರೇ ಗೌಡ (ಔಷಧ, ಮಂಡ್ಯ), ಸುಕನ್ಯಾ ಪ್ರಭಾಕರ್ (ಸಂಗೀತ), ಆಮ್ಶಿ ಪ್ರಸನ್ನ ಕುಮಾರ್ (ಪತ್ರಿಕೋದ್ಯಮ), ಹನಸೋಗೆ ಸೋಮಶೇಖರ್ (ನಾಲ್ವಡಿ ಸಾಹಿತ್ಯ), ಜೇನಹಳ್ಳಿ ಸಿದ್ದಲಿಂಗಪ್ಪ (ಜಾನಪದ), ಕಿರಗನೂರು ರಾಜಪ್ಪ (ರಂಗಭೂಮಿ), ಗುರುರಾಜ್ (ಮಹದೇಶ್ವರ ಮಂಟೇಸ್ವಾಮಿ ಗಾಯಕ), ಅರುಣ್ ಯೋಗಿರಾಜ್ (ಶಿಲ್ಪಕಲೆ), ರಾಜೇಂದ್ರ (ಅನ್ನ ದಾಸೋಹ) ಮತ್ತು ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ಸಂಘಟನೆ).

English summary
Mysuru Dasara 2021: Amidst the Dasara celebrations Saraswati Puja performed at Mysuru Palace on the sixth day of Navaratri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X