ಇರಾನ್-ಇಸ್ರೇಲ್ ಸಂಘರ್ಷ: ತೈಲ ಟ್ಯಾಂಕರ್‌ಗೆ ಡ್ರೋನ್ ಬೋಟ್ ಡಿಕ್ಕಿ, ಓರ್ವ ಭಾರತೀಯ ಸಾವು
Oman Oil Tanker: ಒಂದು ಕಡೆ ಇರಾನ್-ಇಸ್ರೇಲ್ ಯುದ್ಧ ಮುಂದುವರಿದಿದೆ. ಅಮೆರಿಕ ಸಹ ಇರಾನ್ ಮೇಲೆ ತನ್ನ ಪರಾಕ್ರಮ ಮುಂದುವರಿಸಿದೆ. ಈ ಮಧ್ಯೆ ಇಂದು ಸೋಮವಾರ ಒಮಾನ್ ಕೊಲ್ಲಿಯಲ್ಲಿ ಮಾರ್ಷಲ್ ದ್ವೀಪಗಳ ಧ್ವಜ ಹೊತ್ತ ತೈಲ ಟ್ಯಾಂಕರ್‌ಗೆ ಬಾಂಬ್ ಹೊತ್ತೊಯ್ಯುತ್ತಿದ್ದ ತೈಲ ಟ್ಯಾಂಕರ್ ಮೇಲೆ ಡ್ರೋನ್ ಹಡಗಿನ ಮೂಲಕ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಓರ್ವ ನಾವಿಕ ಮೃತಪಟ್ಟ ಘಟನೆ ನಡೆದಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಘ್ನ ಸ್ಥಿತಿ ಇದೆ. ಅಮೆರಿಕದ ನೆಲೆಗಳ ಮೇಲೆ ಇರಾನ್ ಪ್ರತೀಕಾರ ನಡೆಸುವ ಹೊತ್ತಿನಲ್ಲಿ ಈ ದಾಳಿಗೆ ಕಾರಣ ಯಾರೆಂಬುದು ಪತ್ತೆಯಾಗಬೇಕಿದೆ.
ಮಸ್ಕತ್ ಕರಾವಳಿಯ ಓಮನ್ ಕೊಲ್ಲಿಯಲ್ಲಿ ನಡೆದ ದಾಳಿ ಇದಾಗಿದೆ. ಹಡಗನ್ನು MKD VYOM ಎಂದು ಗುರುತಿಸಲಾಗಿದೆ. ಮೃತ ನಾವಿಕ ಭಾರತ ಮೂಲದವರು ಎಂದು ಸರ್ಕಾರಿ ಓಮನ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹಡಗು ಓಮನ್ ಕರಾವಳಿಯಿಂದ ಹೊರಟಿತ್ತು. "ಮಾರ್ಚ್ 1 ರಂದು ಓಮನ್‌ನ ಮಸ್ಕತ್ ಕರಾವಳಿಯಲ್ಲಿದ್ದಾಗ ಹಡಗು ಡಿಕ್ಕಿ ಹೊಡೆದು ಸ್ಪೋಟಿದೆ ಎಂದು ಶಂಕಿಸಲಾಗಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಜ್ವಾಲೆ ಆವರಿಸಿತು. ಘಟನೆಯ ಸಮಯದಲ್ಲಿ ಎಂಜಿನ್ ಕೋಣೆಯಲ್ಲಿದ್ದ ಒಬ್ಬ ಸಿಬ್ಬಂದಿ ಹೊರ ಬರಲಾರದೇ ಸಾವನ್ನಪ್ಪಿದ್ದಾರೆ ಎಂದು ದೃಢವಾಗಿದೆ.

ಓಮನ್ ದಾಳಿ ಬಗ್ಗೆ ಇರಾನ್ ಕೊಟ್ಟ ಸ್ಪಷ್ಟನೆ ಏನು?
ಹಾರ್ಮುಜ್ ಜಲಸಂಧಿಯು ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿದೆ. ಇರಾನ್-ಇಸ್ರೇಲ್ ಯುದ್ಧ ಆರಂಭವಾದ ಬಳಿಕ ಈ ಜಲಸಂದಿಯನ್ನು ಬಂದ್ ಮಾಡಲಾಗಿತ್ತು. ಈ ಹಡುಗು ಅದೇ ಮಾರ್ಗದಲ್ಲಿ ಸಂಚಾರ ಮಾಡುವಾಗ ಇರಾನ್ ಬೆದರಿಕೆ ಹಾಕಿದೆ. ಅಲ್ಲದೇ ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಇಸ್ಲಾಮಿಕ್ ಗಣರಾಜ್ಯವನ್ನು ಗುರಿಯಾಗಿಸಿಕೊಂಡು ಪ್ರಮುಖ ವೈಮಾನಿಕ ದಾಳಿ ಕಾರ್ಯಾಚರಣೆ ವೇಳೆ ವಿವಿಧೆಡೆ ಇರಾನ್ ದಾಳಿ ನಡೆಸಿತ್ತು. ಆಗ ಈ ಹಡಗಿನ ಮೇಲೂ ದಾಳಿ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಇರಾನ್ ಒಪ್ಪಿದೆ ಎಂದು ವರದಿ ಆಗಿದೆ.
ಇರಾನ್ ವಿದೇಶಾಂಗ ಸಚಿವ ಹೇಳಿದ್ದೇನು?
ಇರಾನ್ ಟೆಹರಾನ್ ದಾಳಿಯಿಂದ ನಾಯಕ ಖಮೇನಿ ಸಾವಿನ ಸೇಡು ತೀರಿಸಿಕೊಳ್ಳಲು ದುಬೈ, ದೋಹಾ, ಮನಾಮ ಮತ್ತು ಒಮಾನಿಯ ಡುಕ್ಮ್ ಬಂದರುಗಳಲ್ಲಿ ಸತತ ದಾಳಿ ನಡೆಸಿತ್ತು. ಸತತ ಮೂರು ದಿನಗಳಿಂದ ಸ್ಫೋಟಗಳು ವರದಿ ಆಗುತ್ತಲೇ ಇವೆ. ಗಲ್ಫ್ ದೇಶಗಳಲ್ಲಿ ಇರಾನಿನ ದಾಳಿಗಳ ಕುರಿತ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಪ್ರತಿಕ್ರಿಯಿಸಿದ್ದಾರೆ. ಇರಾನ್ ಮತ್ತು ಯುಎಸ್-ಇಸ್ರೇಲ್ ನಡುವೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಒಮಾನ್‌ನ ಡುಕ್ಮ್ ಬಂದರಿನಲ್ಲಿ ನಡೆದ ದಾಳಿಯನ್ನು ವಿವರಿಸಿದ್ದಾರೆ. ಇದು ದಾಳಿ ಅಲ್ಲ ಸಾಮಾನ್ಯ ಸೂಚನೆಗಳ ಆಧಾರದ ಮೇಲೆ ಸಶಸ್ತ್ರ ಪಡೆಗಳು "ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿವೆ ಪರಿ ಇದು" ಎಂದಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ 15 ಭಾರತೀಯ ಪ್ರಜೆಗಳು ಇದ್ದ ಟ್ಯಾಂಕರ್ ಹಡಗಿನ ಮೇಲೂ ಸಣ್ಣ ಪ್ರಮಾಣದ ದಾಳಿ ಆಗಿದೆ. ತೈಲ ಟ್ಯಾಂಕರ್ ಒಮಾನ್‌ನ ಮುಸಂದಮ್ ಪರ್ಯಾಯ ದ್ವೀಪದಿಂದ ಹೊರಡುವಾಗ ದಾಳಿ ನಡೆದಿದೆ. ಅಮೆರಿಕ ಹಾಗೂ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಿದ ಸಂದರ್ಭದಲ್ಲಿ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ಆಗಿದೆ. ಅದರೆ ಇದನ್ನು ಇರಾನ್ ಒಪ್ಪಲು ಸಿದ್ಧವಿಲ್ಲ.
ಒಮಾನ್‌ನ ಕಡಲ ಭದ್ರತಾ ಕೇಂದ್ರವು ಹಡಗಿಗೆ ಏನು ಡಿಕ್ಕಿ ಹೊಡೆದಿದೆ ಎಂಬುದನ್ನು ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ. ಗಲ್ಫ ದೇಶದ ಬೇರೆಡೆ, ಅರೇಬಿಯನ್ ಸಮುದ್ರದ ಡುಕ್ಮ್ ವಾಣಿಜ್ಯ ಬಂದರಿನಲ್ಲಿ ಡ್ರೋನ್ ದಾಳಿಯ ನಂತರ ಈ ದಾಳಿ ಸಂಭವಿಸಿದೆ ಎಂದಷ್ಟೇ ವರದಿ ಆಗಿದೆ.












Click it and Unblock the Notifications