ಬೆಂಗಳೂರು: ಕಳಪೆ ಕಾಮಗಾರಿಗೆ ಬ್ರೇಕ್, ಗುಣಮಟ್ಟ ಸಹಿತ ಕಾಮಗಾರಿ ಪೂರ್ಣಗೊಳಿಸಲು ಖಡಕ್ ಸೂಚನೆ
ಬೆಂಗಳೂರು: ಬೆಂಗಳೂರಿನಲ್ಲಿ ನಿತ್ಯ ಒಂದಲ್ಲಾ ಒಂದು ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿರುತ್ತವೆ. ಆದರೆ ಯೋಜನೆ ಪೂರ್ಣಗೊಂಡರೂ ಸಹಿತ ಅದರಲ್ಲಿ ಗುಣಮಟ್ಟ ಕಾಯ್ದುಕೊಳ್ಳದೇ ಹಿನ್ನೆಲೆಯಲ್ಲಿ ಕೆಲವೇ ವಾರಗಳಲ್ಲಿ ರಸ್ತೆ, ರಸ್ತೆಗುಂಡಿಗಳು ಸುಧಾರಿಸದೇ ಮತ್ತದೇ ಹಳೆ ಸ್ಥಿತಿಗೆ ಮರಳುತ್ತಿವೆ. ಹೀಗಾಗಿದಂತೆ ತಡೆಯಲು ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಸೋಮವಾರ ಇಂಜಿನಿಯರಿಂಗ್ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರದ ವಿವಿಧ ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ ಅವರು ಕರ್ನಾಟಕ ಸರ್ಕಾರದ ಅನುದಾನದಡಿ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ದಿ ಕಾರ್ಯಕ್ರಮದಡಿ ಅನುಮೋದನೆಗೊಂಡಿರುವ ಎಲ್ಲಾ ಪ್ಯಾಕೇಜ್ ಕಾಮಗಾರಿಗಳನ್ನು ಕೂಡಲೇ ಆರಂಭಿಸಬೇಕು.

ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಬೇಡ
ಸಿವಿಲ್ ಕಾಮಗಾರಿ ಪೂರ್ಣಗೊಳಿಸಿದ ನಂತರವೇ ಡಾಂಬರೀಕರಣ ಕಾಮಗಾರಿ ಕೈಗೊಳ್ಳಬೇಕು. ಆದರೆ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದೇ ಕಾಮಗಾರಿಗಳನ್ನು ನಿಗಧಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿನ ರಸ್ತೆ ಅಗಲೀಕರಣಕ್ಕಾಗಿ ಮೀಸಲಿರಿಸಿರುವ ಎಲ್ಲಾ ಪರಿತ್ಯಾಜಿತ ಸ್ವತ್ತುಗಳನ್ನು ಈ ಕೂಡಲೇ ನಗರ ಪಾಲಿಕೆ ವಶಕ್ಕೆ ಪಡೆಯಲು ಅವರು ಆದೇಶಿಸಿದರು.
ಇನ್ನೂ ಹೂಡಿ ಜಂಕ್ಷನ್ ಬಳಿ ಪಾದಚಾರಿ ಒತ್ತುವರಿಯಾಗಿದ್ದು, ಗಮನಿಸಿ ಕೂಡಲೇ ತೆರವುಗೊಳಿಸಬೇಕು. ಸಾದರಮಂಗಲ ಗ್ರಾಮದ ಬಳಿ ಒಣ ಕಸ ಸಂಗ್ರಹಣ ಕೇಂದ್ರಕ್ಕೆ ಜಾಗ ಅಂತಿಮಗೊಳಿಸಲು ಸೂಚಿಸಿದರು. ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. ಹೊರ ವರ್ತುಲ ರಸ್ತೆಗಳಲ್ಲಿನ ಪ್ರವೇಶ ಮತ್ತು ನಿರ್ಗಮ ದ್ವಾರಗಳ ಸ್ಥಳಾಂತರವನ್ನು ಸಂಚಾರಿ ಪೊಪ್ರಮುಖ ರಸ್ತೆಗಳಲ್ಲಿ ಸ್ಕೈವಾಕ್
ಸಂಚಾರ ದಟ್ಟಣೆ ತಗ್ಗಿಸಲು ಬಸ್ ಶಲ್ಟರ್ ಗಳ ಸ್ಥಳಾಂತರಿಸುವ ಅಗತ್ಯವಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರಮುಖ ರಸ್ತೆಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸ್ಕೈವಾಕ್ ನಿರ್ಮಿಸಬೇಕು. ಇದರಿಂದ ಸಾರ್ವಜನಿಕ ಸಂಚಾರ ಸುಗಮವಾಗುತ್ತದೆ. ಸ್ವಚ್ಚ ಸರ್ವೇಕ್ಷಣ ಅಭಿಯಾನದಡಿ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ಸೌಂದರ್ಯೀಕರಣ ಗೊಳಿಸಲು ಸ್ವಯಂ ಸೇವಕರುಗಳು, ಎನ್ ಜಿ ಓ, ವಿದ್ಯಾರ್ಥಿಗಳು, ಸ್ವಚ್ಚತಾ ಕಾರ್ಮಿಕರನ್ನೊಳಗೊಂಡ ತಂಡ ರಚಿಸುವಂತೆ ತಿಳಿಸಿದರು. ಒಟ್ಟಾರೆ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ನಿರ್ದೇಶಿಸಿದರು.












Click it and Unblock the Notifications