Ali Khamenei: ಇರಾನ್ ಸುಪ್ರೀಂ ನಾಯಕ ಖಮೇನಿ ಭೇಟಿ ನೀಡಿದ್ದ ಚಿಕ್ಕಬಳ್ಳಾಪುರದ ಅಲೀಪುರ ಗ್ರಾಮದ ವಿಶೇಷವೇನು
ಚಿಕ್ಕಬಳ್ಳಾಪುರ: ಇರಾನ್ ಹಾಗೂ ಇಸ್ರೇಲ್‌ನ ನಡುವೆ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಗ್ರಾಮವು ಗಮನ ಸೆಳೆದಿದೆ. ಇರಾನ್‌ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಮೃತಪಟ್ಟಿದ್ದು, ಕರ್ನಾಟಕದ ವಿವಿಧ ಪ್ರದೇಶ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಗ್ರಾಮವು ಗಮಕ್ಕೆ ಇರಾನ್‌ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು ಭೇಟಿ ನೀಡಿದ್ದರು ಎನ್ನುವ ಕಾರಣಕ್ಕೆ ಈ ಪ್ರದೇಶವು ಗಮನ ಸೆಳೆಯುತ್ತಿದೆ. ಕರ್ನಾಟಕದ ಈ ಭಾಗವು ಇರಾನ್ ಜೊತೆಗಿನ ನಂಟಿನ ಕಾರಣಕ್ಕೆ ಈಗ ಗಮನ ಸೆಳೆಯುತ್ತಿದೆ. 25,000 ಸಾವಿರ ಜನಸಂಖ್ಯೆ ಈ ಗ್ರಾಮದಲ್ಲಿದೆ. ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಬದಲಾಗುವ ಹಂತದಲ್ಲಿದೆ. ದೊಡ್ಡ ಜನಸಂಖ್ಯೆಯ ಪಟ್ಟಣವಾಗಿ ಬೆಳೆದಿರುವ ಅಲೀಪುರದಲ್ಲಿ ಈಗಲೂ ಒಂದೇ ಒಂದು ಮದ್ಯದ ಅಂಗಡಿ, ಚಿತ್ರಮಂದಿರವೂ ಇಲ್ಲ ಎನ್ನುವುದು ಅಚ್ಚರಿ ಮತ್ತು ವಿಶೇಷವಾಗಿದೆ.

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಪ್ರದೇಶಗಳಲ್ಲೂ ಮದ್ಯದ ಅಂಗಡಿಗಳು ಪ್ರಾರಂಭವಾಗುತ್ತಿವೆ. ದೊಡ್ಡಹಳ್ಳಿಗಳಲ್ಲಿ ಸಾಮಾನ್ಯವಾಗಿ ಮದ್ಯದ ಅಂಗಡಿಗಳು ಆರಂಭವಾಗುತ್ತಿವೆ. ಆದರೆ, ಅಲೀಪುರವು ಸಾಕಷ್ಟು ಅಭಿವೃದ್ಧಿಯಾಗಿದ್ದು, ಜನ ಸಂಖ್ಯೆಯೂ ಹೆಚ್ಚಳವಾಗಿದ್ದರೂ ಈ ಭಾಗದಲ್ಲಿ ಬಾರ್ ಪ್ರಾರಂಭಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಈ ಪ್ರದೇಶವು ಉಳಿದ ಪ್ರದೇಶಗಳಿಗೆ ತದ್ವಿರುದ್ಧವಾಗಿದೆ.
ಅಲೀಪುರದಲ್ಲಿ ಪೊಲೀಸ್ ಠಾಣೆಯೂ ಇಲ್ಲ
ಇನ್ನು ಅಲೀಪುರದಲ್ಲಿ ಪೊಲೀಸ್ ಠಾಣೆಯೂ ಇಲ್ಲ. ಗ್ರಾಮದ ಬಹುತೇಕ ಜನರು ಇರಾನ್ ಸೇರಿದಂತೆ ಅರಬ್ ದೇಶಗಳಲ್ಲಿ ಇದ್ದಾರೆ. ಜಗತ್ತಿನ ವಿವಿಧ ದೇಶಗಳೊಂದಿಗೆ ವ್ಯಾಪಾರ, ವಹಿವಾಟು, ಶಿಕ್ಷಣ ಸೇರಿದಂತೆ ವಿವಿಧ ಕಾರಣಕ್ಕೆ ಸಂಪರ್ಕ ಹೊಂದಿದ್ದಾರೆ. ಅಲ್ಲದೆ ಗ್ರಾಮದ ಕೆಲವರು ಹರಳುಗಳ ವ್ಯಾಪಾರ ಮಾಡುವುದು ಸಹ ಇದೆ. ಈ ಗ್ರಾಮದ ಮತ್ತೊಂದು ವಿಶೇಷವೆಂದರೆ ವಜ್ರದ ವ್ಯಾಪಾರ. ಇಲ್ಲಿ ವಜ್ರ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಕಾರಣಕ್ಕೆ ಈ ಪ್ರದೇಶವನ್ನು ವಜ್ರಗಳ ವ್ಯಾಪಾರಿಗಳ ಊರು ಎಂದು ಹೇಳುವುದು ಸಹ ಇದೆ. ಎಲ್ಲ ಇದ್ದರೂ ಈ ಗ್ರಾಮದಲ್ಲಿ ಪೊಲೀಸ್ ಠಾಣೆ ಇಂದಿಗೂ ಇಲ್ಲ. ಇಲ್ಲಿನ ಮಂಚೇನಹಳ್ಳಿ ಠಾಣೆ ವ್ಯಾಪ್ತಿಗೆ ಅಲೀಪುರ ಒಳಪಡುತ್ತದೆ.
ಪೊಲೀಸ್ ಠಾಣೆ ಇಲ್ಲದೆ ಹೇಗೆ ಸಮಸ್ಯೆ ಪರಿಹಾರ ?
ಇನ್ನು ಈ ಪ್ರದೇಶದಲ್ಲಿ ಪೊಲೀಸ್ ಠಾಣೆ ಇಲ್ಲದಿದ್ದರೂ, ಹೇಗೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಗುತ್ತದೆ ಎನ್ನುವುದು ಮತ್ತೊಂದು ಕುತೂಹಲವಾಗಿದೆ. ಈ ಪ್ರದೇಶದಲ್ಲಿ ಏನೇ ಸಮಸ್ಯೆಗಳು ಎದುರಾದರೂ ಅಂಜುಮನ್ ಜಾಫರಿಯಾ ಸಂಸ್ಥೆಯ ನೇತೃತ್ವ ವಹಿಸಲಾಗುತ್ತದೆ. ಅಂಜುಮನ್ ಜಾಫರಿಯಾ ಸಂಸ್ಥೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಗುತ್ತದೆ. ನಮ್ಮೂರಿನಲ್ಲಿ ಗಲಾಟೆ ಮಾಡಿಕೊಂಡು ಇಲ್ಲವೇ ಬೇರೆ ಕಾರಣಗಳಿಗೆ ಪೊಲೀಸ್ ಠಾಣೆ ಮೆಟ್ಟಿಲೇರುವುದು ತೀರ ಕಡಿಮೆ. ನಮ್ಮಲ್ಲಿಯೇ ನ್ಯಾಯ ಪಂಚಾಯಿತಿ ಆಗುತ್ತದೆ ಎನ್ನುವುದು ಗ್ರಾಮಸ್ಥರ ಮಾತು.
ಶಿಯಾ ಮುಸ್ಲಿಮರೇ ಬಹುಸಂಖ್ಯಾತರು
ಇನ್ನು ಈ ಪ್ರದೇಶದಲ್ಲಿ ಶಿಯಾ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಶಿಯಾ ಮುಸ್ಲಿಮರು ಹೆಚ್ಚಿರುವ ಗ್ರಾಮಗಳಲ್ಲಿ ಅಲೀಪುರವು ಪ್ರಮುಖವಾಗಿದೆ. ಗ್ರಾಮದಲ್ಲಿ ಅಂಜುಮನ್ ಜಾಫರಿಯಾ ಸಮಿತಿಯೇ ಕೇಬಲ್ ಚಾನಲ್‌ವೊಂದನ್ನು ಹೊಂದಿದೆ. ಅಲಿಪುರದಲ್ಲಿ ಶಿಯಾ ಮುಸ್ಲಿಮರು ಈ ಪ್ರದೇಶದಲ್ಲಿ ಹೆಚ್ಚಾಗಿದ್ದು, ಹಿಂದೂ ಧರ್ಮದ ವಿವಿಧ ಜಾತಿಯ ಜನರೂ ಸಹ ಇದ್ದಾರೆ.
ಹೆಸರು ಬದಲಾಗಿದ್ದು ಹೇಗೆ
ಇನ್ನು ಈ ಹಿಂದೆ ಈ ಪ್ರದೇಶದ ಹೆಸರು ಬೆಳ್ಳಿಕುಂಟೆ ಎಂದಾಗಿತ್ತು. ಕಾಲ ಬದಲಾದಂತೆ ಈ ಪ್ರದೇಶವು ಅಲೀಪುರವಾಯಿತು. ಅಲೀಪುರದ ಮೂಲ ಹೆಸರು ಬೆಳ್ಳಿಕುಂಟೆ ಆಗಿದೆ. ಈ ಹಿಂದೆ ಬಿಜಾಪುರ ಆದಿಲ್‌ಶಾಹಿಗಳ ಅವಧಿಯಲ್ಲಿ ಅಲ್ಲಿನ ಜನರು ಇಲ್ಲಿಗೆ ವಲಸೆ ಬಂದಿದ್ದರು. ಮುಸ್ಲಿಮರ ಸಂಖ್ಯೆ ಹೆಚ್ಚಿದಂತೆ ಬೆಳ್ಳಿಕುಂಟೆವು ಅಲೀಪುರವಾಗಿ ಬದಲಾಯಿತು ಎನ್ನುವುದು ಇತಿಹಾಸ.












Click it and Unblock the Notifications