ಸುಂದರ ಜಂಬೂ ಸವಾರಿಯೊಂದಿಗೆ ಸರಳ ದಸರಾಗೆ ತೆರೆ

ಮೈಸೂರು, ಅಕ್ಟೋಬರ್. 23: ಲಕ್ಷಾಂತರ ಜನರ ಜಯಘೋಷಗಳೊಂದಿಗೆ ಚಿನ್ನದ ಅಂಬಾರಿಯಲ್ಲಿ ಹೊತ್ತ ಅರ್ಜುನ ಅಕ್ಟೋಬರ್ 23ರಂದು ಸಂಜೆ 5.30ರ ಸುಮಾರಿಗೆ ಬನ್ನಿ ಮಂಟಪ ತಲುಪಿದ. ಈ ಮೂಲಕ ಒಂಭತ್ತು ದಿನಗಳ ದಸರಾಕ್ಕೆ ವೈಭವೋಪೇತ ತೆರೆ ಬಿತ್ತು

ಬೆಳಗ್ಗೆ ಅಂಬಾರಿ ಮೇಲೆ ವಿರಾಜಮಾನಳಾಗಿದ್ದ ಚಾಮುಂಡೇಶ್ವರಿ ದೇವಿಗೆ ಪಪುಷ್ಪಾರ್ಷನೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಜಂಬೂಸವಾರಿಗೆ ವಿದ್ಯುಕ್ತ ಚಾಲನೆ ನೀಡಿದರು. ನಿಗದಿಗಿಂತ ತಡವಾಗಿ ಆರಂಭವಾದ ಜಂಬೂ ಸವಾರಿ ಸಂಜೆ 5.30 ರ ವೇಳೆಗೆ ಬನ್ನಿ ಮಂಟಪ ತಲುಪಿತು.[ದಸರಾ ಮೆರವಣಿಗೆಯ ಇಡೀ ದಿನದ ಚಿತ್ರಣ]

ಯದುವೀರ್ ಒಡೆಯರ್ ಸಹ ಅಂಚಾರಿಗೆ ಪುಷ್ಪಾರ್ಚನೆ ಮಾಡಿದ್ದು ಈ ಬಾರಿಯ ವಿಶೇಷ. ಮೇಯರ್ ಲಿಂಗಪ್ಪ, ಜಿಲ್ಲಾಧಿಕಾರಿ ಶಿಖಾ ಅವರು ಅಂಬಾರಿಯಲ್ಲಿ ವಿರಾಜಮಾನವಾದ ತಾಯಿ ಚಾಮುಂಡೇಶ್ವರಿಗೆ ನಮಿಸಿದರು. ಅರಮನೆಯಿಂದ ಹೊರಟ ಅರ್ಜುನನಿಗೆ ಉಳಿದ ದಸರಾ ಆನೆಗಳ ಸಾಥ್ ನೀಡಿದವು. ಹಾಗಾದರೆ ಜಂಬೂ ಸವಾರಿ ಸಂಭ್ರಮ ಈ ಬಾರಿ ಹೇಗಿತ್ತು ಎಂಬುದನ್ನು ಒಂದು ಸುತ್ತು ಹಾಕಿಕೊಂಡು ಬರೋಣ.....

ಆನೆ ಮೇಲೆ ಅಂಬಾರಿ

ಆನೆ ಮೇಲೆ ಅಂಬಾರಿ

ಜಂಬೂಸವಾರಿ ಮೆರವಣಿಗೆಯ ಮುಂಚೂಣಿಯಲ್ಲಿ ಸಿಂಗಾರಗೊಂಡ ಗಜಪಡೆ ಪೈಕಿ ನಿಶಾನೆ ಆನೆಯಾಗಿ ಬಲರಾಮ, ನೌಪಥ್ ಆನೆಯಾಗಿ ಅಭಿಮನ್ಯು, ಗೋಪಿ ಇನ್ನಿತರ ಆನೆಗಳು ಮುನ್ನಡೆದವು. ಜಂಬೂಸವಾರಿಯ ಆರಂಭದಲ್ಲಿ ಬಾವುಟ ಹಿಡಿದು ಬಲರಾಮ ಹೆಜ್ಜೆ ಹಾಕುತ್ತಿದ್ದರೆ ಅವನ ಮುಂದೆ ನಾಗಸ್ವರ ಮತ್ತು ವೀರಭದ್ರ ಕುಣಿತದ ತಂಡ ಪ್ರದರ್ಶನ ನೀಡುತ್ತಾ ಮುನ್ನಡಯಿತು.

ಕಲಾತಂಡಗಳು

ಕಲಾತಂಡಗಳು

ವೀರಗಾಸೆ, ಪೂಜಾಕುಣಿತ, ಡೊಳ್ಳುಕುಣಿತ, ಸುಗ್ಗಿ ಕುಣಿತ, ಕೊಡವರ ಉಮ್ಮತ್ತಾಟ್ ಆಟ, ಗಾರುಡಿಗೊಂಬೆ, ಗೊರವರ ಕುಣಿತ ಸೇರಿದಂತೆ ಸುಮಾರು 28 ಕಲಾತಂಡಗಳು ಮೆರವಣಿಗೆ ಉದ್ದಕ್ಕೂ ಹೆಜ್ಜೆ ಹಾಕಿದವು.

ಸ್ತಬ್ಧ ಚಿತ್ರಗಳು

ಸ್ತಬ್ಧ ಚಿತ್ರಗಳು

ಮತ್ತು ಕನ್ನಡ ಸಂಸ್ಕೃತಿ ಇಲಾಖೆ, ಕಾವೇರಿ ನೀರಾವರಿ ನಿಗಮ, ಪುರಾತತ್ವ ಮತ್ತು ಪರಂಪರೆ ಇಲಾಖೆ, ಮೈಸೂರು ನಗರಪಾಲಿಕೆ, ಮೈಸೂರು ಅಭಿವೃದ್ಧಿ ಪ್ರಾಧಿಕಾರ, ಮೈಸೂರು ಜಿಲ್ಲಾ ಪಂಚಾಯತ್ ಸ್ತಬ್ಧ ಚಿತ್ರಗಳು ಗಮನ ಸೆಳೆದವು.

ದೇವರಾಜ್ ಅರಸ್ ಗೆ ನಮನ

ದೇವರಾಜ್ ಅರಸ್ ಗೆ ನಮನ

ಸಾರ್ವಜನಿಕ ಶಿಕ್ಷಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ರಾಜ್ಯ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮಹಿಳಾ ಮತ್ತು ಮಕ್ಕಳ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ, ಆಯುಷ್ ಇಲಾಖೆ, ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ಮೃಗಾಲಯ ಸೇರಿದಂತೆ ಸುಮಾರು 23 ಸ್ತಬ್ಧ ಚಿತ್ರಗಳು ಪಾಲ್ಗೊಂಡಿದ್ದವು.

ಅಂಬಾರಿ ಏರಿಸಿದ್ದು ಹೇಗೆ?

ಅಂಬಾರಿ ಏರಿಸಿದ್ದು ಹೇಗೆ?

ಮೆರವಣಿಗೆಗೂ ಮುನ್ನ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿ ಬಳಿಕ ಅರ್ಜುನನಿಗೆ ಅರಮನೆಯ ಬಲಭಾಗದಲ್ಲಿರುವ ರಾಜರ ಖಾಸಗಿ ಅರಮನೆ ಆವರಣದಲ್ಲಿ ವಿಶೇಷ ಕ್ರೇನ್ ಮೂಲಕ ಸುಮಾರು 750ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಅರ್ಜುನನಿಗೆ ಕಟ್ಟಲಾಯಿತು.

ಅರ್ಜುನನಿಗೆ ಸಾಥ್ ನೀಡಿದ ಆನೆಗಳು

ಅರ್ಜುನನಿಗೆ ಸಾಥ್ ನೀಡಿದ ಆನೆಗಳು

ಕಾವೇರಿ ಹಾಗೂ ಚೈತ್ರ ಆನೆಯೊಂದಿಗೆ ಅಂಬಾರಿ ಹೊತ್ತು ಆಗಮಿಸಿದ ಸಂದರ್ಭ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಯುವರಾಜ ಯುದುವೀರ ಒಡೆಯರ್, ಮೇಯರ್ ಲಿಂಗಪ್ಪ, ಜಿಲ್ಲಾಧಿಕಾರಿ ಶಿಖಾ ಅವರು ಅಂಬಾರಿಯಲ್ಲಿ ವಿರಾಜಮಾನವಾದ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದರು.

 ಮೆರವಣಿಗೆ ಸಾಗಿದ ದಾರಿ

ಮೆರವಣಿಗೆ ಸಾಗಿದ ದಾರಿ

ಅರಮನೆ ಆವರಣದಿಂದ ಹೊರಟ ಜಂಬೂಸವಾರಿ ಬಲರಾಮ ದ್ವಾರದ ಮೂಲಕ ಹೊರಟು ಚಾಮರಾಜವೃತ್ತ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಬನ್ನಿಮಂಟಪದತ್ತ ತೆರಳಿದವು. ಸವಾರಿಗೆ ಅಶ್ವದಳ, ಪೊಲೀಸ್ ಕವಾಯತು ಜೀವ ತುಂಬಿತು.

ತಡವಾಗಿ ಹೊರಟ ಜಂಬೂಸವಾರಿ

ತಡವಾಗಿ ಹೊರಟ ಜಂಬೂಸವಾರಿ

ಈ ಬಾರಿ ಹಲವು ಕಾರಣಗಳಿಂದಾಗಿ ಈ ಬಾರಿ ಅರ್ಜುನನಿಗೆ ಅಂಬಾರಿ ಕಟ್ಟುವುದು ತಡವಾಗಿ ಆರಂಭವಾಯಿತು. ಆ ನಂತರ 2ಗಂಟೆ ಒಳಗೆ ಮಕರ ಲಗ್ನದಲ್ಲಿ ಅಂಬಾರಿಯ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಬೇಕಿತ್ತಾದರೂ ಸುಮಾರು 1ಗಂಟೆ ತಡವಾಗಿ ಆರಂಭವಾಯಿತು. ಇದೇ ಮೊದಲ ಬಾರಿಗೆ ಯುವರಾಜ ದಸರಾದಲ್ಲಿ ಪಾಲ್ಗೊಂಡು ಗಮನಸೆಳೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+