ಮೈಸೂರು ಪಾಲಿಕೆ ಸದಸ್ಯೆಯ ಪತಿ ಮೇಲೆ ಗೂಂಡಾ ವರ್ತನೆಯ ಆರೋಪ
ಮೈಸೂರು, ಜುಲೈ 31: ಒಳಚರಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಆರ್ ಕ್ಷೇತ್ರ ವ್ಯಾಪ್ತಿಯ ನಗರಪಾಲಿಕೆ ಸದಸ್ಯೆ ಶಾರದಾ ಅವರ ಪತಿ ಈಶ್ವರ ಎಂಬುವವರು ನಮ್ಮ ಮನೆಗೆ ಬಂದು ವಿನಾಕಾರಣ ನಮ್ಮೊಡನೆ ಗೂಂಡಾ ವರ್ತನೆ ತೋರಿದ್ದಾರೆ ಎಂದು ಮಹಿಳೆಯೊಬ್ಬರು ಜೆ.ಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜೆ.ಪಿ ನಗರದ ನಿವಾಸಿ ಬಿ.ಎನ್ ದಾಕ್ಷಾಯಿಣಿ ದೂರು ನೀಡಿರುವ ಮಹಿಳೆಯಾಗಿದ್ದು, ಯುಜಿಡಿ ಕೆಲಸ ನಡೆಯುತ್ತಿದ್ದಾಗ ನಮ್ಮ ಮನೆಗೆ ಸಂಪರ್ಕಗೊಂಡಿರುವ ಎಲೆಕ್ಟ್ರಿಕಲ್ ಕೇಬಲ್ ಡ್ಯಾಮೇಜ್ ಆಗಿದೆ.

ಈ ವಿಚಾರವಾಗಿ ಕರೆ ಮಾಡಿ ಸಮಸ್ಯೆ ಹೇಳಿಕೊಂಡರೆ ನಮ್ಮ ಮೇಲೆಯೇ ದಬ್ಬಾಳಿಕೆ ನಡೆಸಲು ಮುಂದಾದರು. ಮನೆ ಬಳಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ನಮ್ಮೊಡನೆ ಗೂಂಡಾ ವರ್ತನೆ ತೋರಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ, ಈ ಗಲಾಟೆಗೆ ಸಂಬಂಧಿಸಿದ ವಿಡಿಯೋವನ್ನು ಚಿತ್ರೀಕರಿಸಿ ಪೊಲೀಸ್ ಠಾಣೆಗೆ ಒದಗಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications