ಮೈಸೂರು-ಚಾಮರಾಜನಗರ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ

ಮೈಸೂರು, ಫೆಬ್ರವರಿ 17; ಬಹುನಿರೀಕ್ಷಿತ ಮೈಸೂರು-ಚಾಮರಾಜನಗರ ನಡುವಿನ ರೈಲು ಮಾರ್ಗದ ವಿದ್ಯುದೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. 71 ಕಿ. ಮೀ. ಕಾಮಗಾರಿ ಪೂರ್ಣಗೊಂಡರೆ ಮೆಮು ರೈಲುಗಳ ಸಂಚಾರ ಆರಂಭಿಸಲು ಸಹಾಯಕವಾಗಲಿದೆ.

ಮೈಸೂರು-ಚಾಮರಾಜನಗರ ನಡುವಿನ ರೈಲು ಮಾರ್ಗದ ವಿದ್ಯುದೀಕರಣಕ್ಕೆ ಟೆಂಟರ್ ಅಂತಿಮಗೊಂಡಿದೆ. ಈ ಯೋಜನೆಗೆ ಸುಮಾರು 18.89 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ರೈಲ್ವೇ ವಿದ್ಯುದೀಕರಣ ವಿಭಾಗದ ಕಾಮಗಾರಿ ಮುಖ್ಯಸ್ಥ ಆರ್. ಎ. ಚೌಧರಿ ಈ ಕುರಿತು ಹೇಳಿಕೆ ನೀಡಿದ್ದಾರೆ. "ಫೆಬ್ರವರಿ 1ರಂದು ಮಂಡನೆ ಮಾಡಿದ ಬಜೆಟ್‌ನಲ್ಲಿ ಯೋಜನೆಗೆ ಅನುದಾನ ಮಂಜೂರಾಗಿದೆ. 12 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ" ಎಂದು ಹೇಳಿದ್ದಾರೆ.

Mysuru Chamarajanagara Railway Line Electrification Soon

ಮೈಸೂರು-ಚಾಮರಾಜನಗರ ನಡುವಿನ ರೈಲು ಮಾರ್ಗ ವಿದ್ಯುದೀಕರಣವಾದರೆ ರೈಲುಗಳ ವೇಗವನ್ನು ಹೆಚ್ಚಿಸಬಹುದು ಮತ್ತು ಮೆಮು ರೈಲು ಸಂಚಾರವನ್ನು ಆರಂಭಿಸಬಹುದು. ಇದರಿಂದಾಗಿ ಉಭಯ ನಗರಗಳ ನಡುವೆ ಪ್ರತಿದಿನ ಸಂಚಾರ ನಡೆಸುವವರಿಗೆ ಅನುಕೂಲವಾಗಲಿದೆ.

ಈ ಮಾರ್ಗದ ವಿದ್ಯುದೀಕರಣದಿಂದಾಗಿ ಕಡಕೊಳ ಬಳಿ ಸ್ಥಾಪನೆಯಾಗುತ್ತಿರುವ ಇನ್ಲ್ಯಾಂಡ್ ಕಂಟೇನರ್ ಟರ್ಮಿನಲ್ ಮತ್ತು ಮಲ್ಟಿ ಮೋಡಲ್ ಲಾಜಿಸ್ಟಿಕ್ ಪಾರ್ಕ್‌ಗೂ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+