ಮೈಸೂರಲ್ಲಿ ವೇಶ್ಯಾವಾಟಿಕೆ ಜಾಲ : 2 ಯುವತಿಯರ ರಕ್ಷಣೆ

ಮೈಸೂರು, ಜ. 27: ನಗರ ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಅವರಿಂದ ಹಣ ವಶಪಡಿಸಿಕೊಳ್ಳಲಾಗಿದೆ.

ಮೈಸೂರು ನಗರ ಕೆ.ಆರ್. ಪೊಲೀಸ್ ಠಾಣೆ ಸರಹದ್ದಿನ ಕೆ.ಆರ್. ಮೊಹಲ್ಲಾದ ರಾಮಾನುಜ ರಸ್ತೆಯ 13ನೇ ಕ್ರಾಸ್‌ನಲ್ಲಿರುವ ಮನೆ ನಂ. 43/3 ರಲ್ಲಿನ ಔಟ್‌ಹೌಸ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

prost

ಉದಯಗಿರಿಯ ಪ್ರೇಮ್ (42), ಕೆ.ಆರ್. ಮೊಹಲ್ಲಾದ ಕಲಾವತಿ ಹಾಗೂ ಆಕೆಯ ಪತಿ ಚೇತನ್ ಜಿ. ಅವರನ್ನು ಬಂಧಿಸಲಾಗಿದೆ. ಕಲಾವತಿ ಹಾಗೂ ಚೇತನ್ ದಂಪತಿ ಮಹಿಳೆಯರನ್ನು ವೇಶ್ಯಾವಾಟಿಕೆ ದಂಧೆಗೆ ಕಳುಹಿಸುತ್ತಿದ್ದರು. ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೈಸೂರು ಪೊಲೀಸ್ ಆಯುಕ್ತರ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ. [ಮೈಸೂರಲ್ಲಿ ವೇಶ್ಯಾವಾಟಿಕೆ : ಐವರ ಬಂಧನ]

ಈಚೆಗೆಷ್ಟೇ ಮತ್ತೆರಡು ವೇಶ್ಯಾವಾಟಿಕೆ ಜಾಲವನ್ನು ಪೊಲೀಸರು ಬಯಲಿಗೆಳೆದು ಐವರನ್ನು ಬಂಧಿಸಿದ್ದರು. ಮೈಸೂರಿನಲ್ಲಿ ವಿಜಯನಗರದಂತಹ ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆಗಳನ್ನು ಬಾಡಿಗೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಹೆಚ್ಚುತ್ತಿರುವ ಕಾರಣ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+