ಮೈಸೂರು -ಬೆಂಗಳೂರು ನಡುವೆ ಮೇ 13ರಿಂದ ಹೊಸ ರೈಲು ಓಡಾಟ

ಬಹುಜನರ ಅದರಲ್ಲೂ ಪ್ರಮುಖವಾಗಿ ಕಾರ್ಮಿಕರ ಬೇಡಿಕೆಯ ಮೇರೆಗೆ ಮೈಸೂರು ಮತ್ತು ಬೆಂಗಳೂರು ನಡುವೆ ಮೇ 13ರಿಂದ ಹೊಸ ರೈಲು ಓಡಾಡಲಿದೆ.

ಮೈಸೂರು, ಮೇ 3: ಬಹುಜನರ ಅದರಲ್ಲೂ ಪ್ರಮುಖವಾಗಿ ಕಾರ್ಮಿಕರ ಬೇಡಿಕೆಯ ಮೇರೆಗೆ ಮೈಸೂರು ಮತ್ತು ಬೆಂಗಳೂರು ನಡುವೆ ಮೇ 13ರಿಂದ ಹೊಸ ರೈಲು ಓಡಾಡಲಿದೆ.

ಈ ರೈಲು ಮೈಸೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದು ಬೆಂಗಳೂರು ಮೂಲಕ ತೆರಳಲಿದೆ. ಇದರಿಂದ ಈ ರೈಲಿಗೆ ಮೈಸೂರು-ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲು ಎಂದು ಹೆಸರಿಡಲಾಗಿದೆ.

Mysuru-Bengaluru new train from this May 13

ಬೆಳಿಗ್ಗೆ 6 ಗಂಟೆಗೆ ಮೈಸೂರು ಬಿಡಲಿರುವ ರೈಲು 8.45ಕ್ಕೆ ಬೆಂಗಳೂರು ತಲುಪಲಿದೆ. ಇನ್ನು 10.38ಕ್ಕೆ ತುಮಕೂರು ತಲುಪಲಿರುವ ರೈಲು ಸಂಜೆ 7 ಗಂಟೆಗೆ ಹುಬ್ಬಳ್ಳಿಗೆ ಬರಲಿದೆ. [ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಭೈರಪ್ಪ ಬರಲಿ: ಪ್ರತಾಪ್ ಸಿಂಹ]

ಇನ್ನು ಹುಬ್ಬಳ್ಳಿಯಿಂದ ರೈಲು ಬೆಳಿಗ್ಗೆ 8.45ಕ್ಕೆ ಪ್ರಯಾಣ ಆರಂಭಿಸಲಿದ್ದು ಸಂಜೆ 4.17ಕ್ಕೆ ತುಮಕೂರಿಗೆ ಬರಲಿದೆ. ಬೆಂಗಳೂರಿಗೆ 5.45ಕ್ಕೆ ತಲುಪಲಿದೆ. ನಂತರ ಮೈಸೂರಿನತ್ತ ಪ್ರಯಾಣಿಸಲಿದ್ದು 8.40ಕ್ಕೆ ನಗರವನ್ನು ತಲುಪಲಿದೆ. ಹೊಸ ರೈಲು ಪ್ರಯಾಣದಿಂದ ಬೆಳಿಗ್ಗೆ ಮೈಸೂರಿನಿಂದ ಹೊರಡಲಿರುವ ಚಾಮುಂಡಿ ಎಕ್ಸ್ ಪ್ರೆಸ್ ರೈಲಿನ ಜನದಟ್ಟಣೆ ಕಡಿಮೆಯಾಗಲಿದೆ.

20 ಬೋಗಿಗಳಿರುವ ರೈಲು ಅಶೋಕಪುರಂ ರೈಲ್ವೇ ನಿಲ್ದಾಣದಿಂದ ಹೊರಡಲಿದ್ದು ಬೆಂಗಳೂರಿಗೆ ಹೋಗುವ ಮೊದಲು ಮೈಸೂರಿನಲ್ಲಿ ನಿಲ್ಲಲಿದೆ. ಹುಬ್ಬಳ್ಳಿ-ಮೈಸೂರು ರೈಲು ಆರಂಭವಾಗುವುದರೊಂದಿಗೆ ಬೆಂಗಳೂರು-ಮೈಸೂರು ನಡುವೆ ದಿನಕ್ಕೆ 25 ಜೋಡಿ ರೈಲುಗಳು ಓಡಾಡಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+