ಮೈಸೂರು ವಿಶ್ವವಿದ್ಯಾಲಯದ ವೆಬ್‌ಸೈಟ್ ಹ್ಯಾಕ್
ಮೈಸೂರು, ಆಗಸ್ಟ್ 28 : ಮೈಸೂರು ವಿಶ್ವವಿದ್ಯಾಲಯದ ವೆಬ್‍ಸೈಟ್‌ಅನ್ನು ಇಸ್ಲಾಮಿಕ್ ಸಂಘಟನೆಯ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಆ.26ರಂದು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೆಬ್‌ಸೈಟ್ ಹ್ಯಾಕ್ ಆಗಿದ್ದನ್ನು ನೆನಪು ಮಾಡಿಕೊಳ್ಳಬಹುದಾಗಿದೆ.
ಭಾನುವಾರ ಬೆಳಗ್ಗೆ ವೆಬ್ ಸೈಟ್ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಹ್ಯಾಕ್ ಮಾಡಿರುವ ಇಸ್ಲಾಮಿಕ್ ಸಂಘಟನೆಯ ಕಿಡಿಗೇಡಿಗಳು ಇಸ್ಲಾಮ್ ಒಂದೇ ಧರ್ಮ, ಬರ್ಮಾ ಮುಸ್ಲಿಂರನ್ನು ರಕ್ಷಿಸಿ. ಬೌದ್ಧ ಉಗ್ರತ್ವವನ್ನು ನಿಲ್ಲಿಸಿ ಎಂಬ ಘೋಷ ವಾಕ್ಯ ಹಾಕಿದ್ದರು.[ರಾಜೀವ್ ಗಾಂಧಿ ಆರೋಗ್ಯ ವಿವಿ ವೆಬ್ ಸೈಟ್ ಹ್ಯಾಕ್]

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿವಿಯ ಕುಲಸಚಿವರಾದ ಪ್ರೊ.ಸಿ.ಬಸವರಾಜು ಅವರು, 'ವೆಬ್‍ಸೈಟ್ ಹ್ಯಾಕ್ ಮಾಡಿರೋದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದ್ದು, ತಕ್ಷಣ ವಿವಿಯ ತಾಂತ್ರಿಕ ಅಧಿಕಾರಿಗಳು ಸರಿಪಡಿಸಿದ್ದಾರೆ' ಎಂದು ಸ್ಪಷ್ಟಪಡಿಸಿದರು.[ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆ ಹೇಗಿದೆ ಗೊತ್ತಾ?]
ಗೃಹ ಸಚಿವರ ಪ್ರತಿಕ್ರಿಯೆ : ಭಾನುವಾರ ಮೈಸೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, 'ವೆಬ್‍ಸೈಟ್ ಹ್ಯಾಕ್ ಆಗಿರುವ ಬಗ್ಗೆ ಸೈಬರ್ ಕ್ರೈಂ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವ ಸಂಘಟನೆ ಹ್ಯಾಕ್ ಮಾಡಿದೆ, ಯಾವ ಉದ್ದೇಶದಿಂದ ಹ್ಯಾಕ್ ಮಾಡಲಾಗಿದೆ? ಎಂದು ಮಾಹಿತಿ ಸಂಗ್ರಹಿಸಲಿದ್ದಾರೆ' ಎಂದರು.












Click it and Unblock the Notifications