ಮೈಸೂರು ವಿವಿಗೆ ಜೋಡಿಯಾದ ಜಪಾನ್ ವಿವಿ
ಮೈಸೂರು, ಜ. 29: ಶೈಕ್ಷಣಿಕ, ಜೀವ ವಿಜ್ಞಾನ ಸಂಶೋಧನೆ, ಸಂಬಂಧಿಸಿದಂತೆ ಮೈಸೂರು ವಿಶ್ವ ವಿದ್ಯಾಲಯ ಹಾಗೂ ಜಪಾನಿನ ವಕಾಹಿಡೋ ವಿವಿ ಜೊತೆ ಒಡಂಬಡಿಕೆಗೆ ಗುರುವಾರ ಸಹಿ ಹಾಕಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ರಂಗಪ್ಪ ಹೇಳಿದ್ದಾರೆ.
ಕ್ರಾಫರ್ಡ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರಂಗಪ್ಪ ಅವರು ಈ ಸಂಶೋಧನೆಗಳಿಗೆ ಜಪಾನ್ ಹಣ ನೀಡಲಿದೆ. ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಇಥಿಯೋಪಿಯಾ ವಿವಿ ಜೊತೆಯೂ ಕೂಡ ಒಡಂಬಡಿಕೆಗೆ ಸಮ್ಮತಿ ಸೂಚಿಸಿದೆ ಎಂದರು.
ಜಪಾನಿನ ವಕಾಹಿಡೋ(Hokkaido) ವಿವಿ ಕುಲಪತಿ ಯಮಗುಚ್ಚಿ, ಲೈಫ್ ಸೈನ್ಸ್ ಪ್ರೊ. ಮಕಾಟೋ ಡೆನೂರ, ಪ್ರೊ. ಶಿನಿ ಚಿರೋ, ನಿಸ್ಸಿಮುರ ಹಾಗೂ ಕೆಂಜೆಮೊಡೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.

ಏನು ಲಾಭ: ಈ ಒಡಂಬಡಿಕೆಯಿಂದ ಹೊಸ ತಂತ್ರಜ್ಞಾನ ಬಳಕೆ ಮೈಸೂರು ವಿವಿ ಕಾಲೇಜುಗಳಿಗೆ ಸಿಗಲಿದೆ. ವಿವಿಯಿಂದ 25 ವಿದ್ಯಾರ್ಥಿಗಳನ್ನು ಪಿ.ಎಚ್.ಡಿ ವ್ಯಾಸಂಗ ಪಡೆಯಲು ಜಪಾನಿಗೆ ಕಳುಹಿಸಿ ಕೊಡಲಾಗುವುದು. ಕೋಟಾಕೋ ಪ್ರಾಜೆಕ್ಟ್ ನ್ನು ಇಂದಿನಿಂದಲೇ ಕಾರ್ಯಗತಗೊಳಿಸಲಾಗುತ್ತದೆ. ಡಯಾಬಿಟಿಸ್, ಕ್ಯಾನ್ಸರ್, ಇನ್ನಿತರ ಕಾಯಿಲೆಗಳ ನಿಯಂತ್ರಣಕ್ಕೆ ಸಂಶೋಧನೆ ಮತ್ತು ಪರಿಹಾರ ಕಂಡು ಹಿಡಿಯಲು ಈ ಯೋಜನೆ ಅನುಕೂಲವಾಗುತ್ತದೆ.
ವಕಾಹಿಡೋ ವಿವಿ ಜಪಾನ್ ನಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿದೆ. 2 ವರ್ಷಗಳಿಂದ ಈ ಪ್ರಾಜೆಕ್ಟ್ ಗೆ ಸಹಿ ಹಾಕಿಸಲು ಪ್ರಸ್ತಾವನೆ ಬಂದಿತ್ತು. ಅದು ಇಂದು ಕಾರ್ಯಗತವಾಗಿದೆ. ಇದು ನಮಗೆ ಹರ್ಷ ತಂದಿದೆ. ಭಾರತ ಸರ್ಕಾರ ಮಾನವ ಸಂಪನ್ಮೂಲಗಳ ಸಂಶೋಧನೆ ವಿವಿ ಸ್ಥಾಪಿಸಲು ಗುರುತಿಸುತ್ತಿದೆ. ಅದರಲ್ಲಿ ಕೆಲವು ವಿವಿಗಳು ಮುಂದೆ ಬಂದಿದ್ದು ಮೈಸೂರು ವಿವಿಯೂ ಸಹ ಆಕಾಂಕ್ಷಿಯಾಗಿದೆ. ವಕಾಹಿಡೋ ವಿವಿ 10 ವರ್ಷಗಳಿಂದ ಸಂಪರ್ಕದಲ್ಲಿದೆ.
ಆದ್ದರಿಂದ ಈ ಒಡಂಬಡಿಕೆಗೆ ಸಹಿ ಹಾಕಲು ಸುಲಭವಾಯಿತು. ವಿದ್ಯಾರ್ಥಿಗಳ ಜಾಣ್ಮೆ ಮತ್ತು ವಿವಿಗಳ ಗುಣಮಟ್ಟದ ಸಂಶೋಧನೆಗಳನ್ನು ಗಣನೆಗೆ ತೆಗೆದುಕೊಂಡು ಕೋಟಾಕೋ ಸ್ಥಾಪಿಸಲಾಗುವುದು ಎಂದು ತಿಳಿಸಿದರು.












Click it and Unblock the Notifications