ಮೈಸೂರಿನಲ್ಲಿ ಸೋಮಣ್ಣ ಬೆಂಬಲಿಗರ ದಿಢೀರ್ ಸಭೆ: ಸಚಿವರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವಂತೆ ಆಗ್ರಹ

ಮೈಸೂರು, ಮಾರ್ಚ್‌ 10: ಚಾಮರಾಜನಗರದ ಜನಸಂಕಲ್ಪ ಯಾತ್ರೆಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಗೈರಾದ ಬೆನ್ನಲ್ಲೇ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತು ಕೇಳಿ ಬಂದಿತ್ತು.

ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಮೈಸೂರು-ಚಾಮರಾಜನಗರ ಜಿಲ್ಲೆಯ ಸೋಮಣ್ಣ ಅಭಿಮಾನಿಗಳು, ಬೆಂಬಲಿಗರು ಗುರುವಾರ ದಿಢೀರ್ ಮಹತ್ವದ ಸಭೆ ನಡೆಸಿದ್ದಾರೆ.

Minister V Somanna Supporters Meeting In Mysuru

ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಿಸಿ ಅಧಿಕಾರಕ್ಕೆ ಬರಬೇಕಾದರೆ ಸರ್ವ ಜನಾಂಗವನ್ನೂ ಒಗ್ಗೂಡಿಸಿಕೊಂಡು ಸಾಗುವ ಸಂಘಟನಾ ಕೌಶಲ್ಯ ಹೊಂದಿರುವ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಬಿಜೆಪಿಯಲ್ಲಿಯೇ ಉಳಿಸಿಕೊಳ್ಳಬೇಕು ಎಂದು ವಿ.ಸೋಮಣ್ಣ ಬೆಂಬಲಿಗರು ಹಾಗೂ ಬಿಜೆಪಿ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಮಲ್ಲಿಕಾರ್ಜುನಪ್ಪ ಮಾತನಾಡಿ, ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸುವ ಜನಾನುರಾಗಿ ನಾಯಕರು ವಿ.ಸೋಮಣ್ಣ. ಬಿಜೆಪಿ ಪಕ್ಷಕ್ಕೆ ಚುನಾವಣೆ, ಅಭಿವೃದ್ಧಿಯ ದೃಷ್ಟಿಯಿಂದ ಅವರೊಂದು ದೊಡ್ಡ ಶಕ್ತಿ. ಅವರನ್ನು ಪಕ್ಷದಲ್ಲಿ ಉಳಿಸಿಕೊಂಡು ಆ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅವರೊಬ್ಬ ಬದ್ಧತೆಯಿರುವ, ಪ್ರಬುದ್ಧ ಮತ್ತು ಕ್ರಿಯಾಶೀಲ, ಜನರಿಗೆ ಸ್ಪಂದಿಸುವ ಗುಣವಿರುವ ವ್ಯಕ್ತಿ.

Minister V Somanna Supporters Meeting In Mysuru

ಕೇಂದ್ರ ಮತ್ತು ರಾಜ್ಯ ವರಿಷ್ಠರು ಅವರನ್ನು ಉಳಿಸಿಕೊಂಡು 150 ಸ್ಥಾನಗಳನ್ನು ಗೆಲ್ಲಲು ಅವರ ಶಕ್ತಿಯನ್ನು ಬಳಸಿಕೊಳ್ಳಬೇಕು. ಸೋಮಣ್ಣ ಅವರಿಗೆ ಬೆನ್ನುಲುಬಾಗಿ, ಅವರೊಂದಿಗೆ ನಾವು ಇರುತ್ತೇವೆ. ಸೋಮಣ್ಣ ಕೂಡ ಬಿಜೆಪಿ ಬಿಡುವ ಯೋಚನೆ ಮಾಡಬಾರದು ಎಂದು ಹೇಳಿದರು.

ಎಸ್‌ಎಂಪಿ ಫೌಂಡೇಶನ್ ಸಂಸ್ಥಾಪಕ ಎಸ್.ಎಂ.ಶಿವಪ್ರಕಾಶ್ ಮಾತನಾಡಿ, "ಸಂಘಟನಾ ಚತುರರಾಗಿರುವ ವಿ.ಸೋಮಣ್ಣ ಅವರ ಮನಸ್ಸಿನಲ್ಲಿ ಬಿಜೆಪಿ ಬಿಡುವ ಆಲೋಚನೆಯೇ ಇಲ್ಲ. ಚಾಮರಾಜನಗರಕ್ಕೆ 1200 ಕೋಟಿ ರೂ. ಅನುದಾನ ತರುವ ನಿಟ್ಟಿನಲ್ಲಿ ಪ್ರಸ್ತಾಪ ಮಾಡಿದ್ದರು. ಆದರೆ, ಬಜೆಟ್‌ನಲ್ಲಿ ಇದನ್ನು ಸೇರಿಸಲಿಲ್ಲ. ಹೀಗಾಗಿ ಸ್ವಲ್ಪ ಬೇಸರವಾಗಿದ್ದರು.

ಈ ಬೇಸರದ ಜೊತೆಗೆ ಆರೋಗ್ಯ ಸಮಸ್ಯೆ ಇದ್ದ ಕಾರಣದಿಂದ ಜನಸಂಕಲ್ಪ ಯಾತ್ರೆಯಿಂದ ದೂರ ಉಳಿದಿದ್ದರು. ಅನೇಕ ಉಪ ಚುನಾವಣೆಯಲ್ಲಿ ಸೋಮಣ್ಣ ಅವರು ಪಕ್ಷ ತಮಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. 45 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಅವರು ಬಿಜೆಪಿ ತೊರೆಯುವ ನಿರ್ಣಯ ಕೈಗೊಳ್ಳುವುದಿಲ್ಲ" ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಮೈಸೂರು- ಚಾಮರಾಜನಗರ ಭಾಗದ ಸೋಮಣ್ಣ ಅಭಿಮಾನಿಗಳು, ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು, ಮುಖಂಡರು ವಿ.ಸೋಮಣ್ಣ ಅವರ ಭಾವಚಿತ್ರಗಳು, ವಿ.ಸೋಮಣ್ಣ ಅವರೊಂದಿಗೆ ನಾವೆಲ್ಲರೂ ಎಂಬ ಫಲಕಗಳನ್ನು ಪ್ರದರ್ಶಿಸಿ ಅವರನ್ನು ಬಿಜೆಪಿಯಲ್ಲಿಯೇ ಉಳಿಸಿಕೊಳ್ಳಬೇಕೆಂದು ಘೋಷಣೆ ಕೂಗಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+