ಮೈಸೂರು-ಹುಣಸೂರು ರಸ್ತೆಯಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಮೂವರ ಸಾವು
ಮೈಸೂರು, ನವೆಂಬರ್ 14 : ಮೈಸೂರು - ಹುಣಸೂರು ರಸ್ತೆಯಲ್ಲಿ ನಡೆದ ಭೀಕರ ಅಪಘಾತ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹುಣಸೂರು ಬಳಿ ಇರುವ ಬಸರಿಕಟ್ಟೆ ಸಮೀಪದಲ್ಲಿ ಘಟನೆ ಸಂಭವಿಸಿದೆ.
14 ಮಂದಿಗೆ ಗಾಯಗಳಾಗಿವೆ. ಟೆಂಪೋ ಟ್ರಾವೆಲ್ ನಲ್ಲಿ ತೆರಳುತ್ತಿದ್ದ ಕುಟುಂಬ ಲಾರಿಯನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

ಮೃತ ದುರ್ದೈವಿಗಳನ್ನು ಅಬ್ದುಲ್(42), ಮಹಮದ್ ಇಕ್ಬಾಲ್ (37) ಹಾಗೂ ಶೇಕ್ ಹಕೀಬ್(11) ಎಂದು ಗುರುತಿಸಲಾಗಿದೆ. ಹುಣಸೂರು ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.













Click it and Unblock the Notifications