Lok Sabha Election 2024; ಮೈಸೂರಿಂದ 26 ಲಕ್ಷ ಇಂಕ್ ಬಾಟಲ್
ಬೆಂಗಳೂರು, ಫೆಬ್ರವರಿ 23; ಲೋಕಸಭೆ ಚುನಾವಣೆ 2024ಕ್ಕೆ ಚುನಾವಣಾ ಆಯೋಗ ಸಿದ್ಧತೆಗಳನ್ನು ನಡೆಸುತ್ತಿದೆ. ಮಾರ್ಚ್ 2ನೇ ವಾರದಲ್ಲಿ ಚುನಾವಣಾ ವೇಳಾಪಟ್ಟಿ ಘೋಷಣೆಯಾಗುವ ನಿರೀಕ್ಷೆ ಇದೆ. ಇದರ ನಡುವೆಯೇ ಮತದಾನಕ್ಕೆ ಅಗತ್ಯವಿರುವ ಅಳಿಸಲಾಗದ ಶಾಹಿಗೆ ಆಯೋಗ ಬೇಡಿಕೆ ಸಲ್ಲಿಕೆ ಮಾಡಿದೆ.
ದೇಶ ಮತ್ತು ವಿದೇಶದಲ್ಲಿ ಚುನಾವಣೆ ನಡೆದಾಗ ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಳಿಸಲಾಗದ ಶಾಹಿಯನ್ನು ಪೂರೈಕೆ ಮಾಡುತ್ತದೆ. ಚುನಾವಣಾ ಆಯೋಗ ಎಷ್ಟು ಬಾಟಲ್ ಇಂಕ್ ಬೇಕು ಎಂದು ಬೇಡಿಕೆಯನ್ನು ಸಲ್ಲಿಸುತ್ತದೆ.

ಸುಮಾರು 10 ಎಂ. ಎಲ್. ಇಂಕ್ ಬಾಟಲ್‌ಗಳನ್ನು ತಯಾರು ಮಾಡಲಾಗುತ್ತದೆ. ಒಂದು ಬಾಟಲ್‌ನಿಂದ ಸುಮಾರು 700 ಬೆರಳುಗಳಿಗೆ ಇಂಕ್ ಹಚ್ಚಬಹುದು. ಈ ಬಾರಿಯ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಇಂಕ್ ಹಚ್ಚಲಾಗುತ್ತದೆ.
ಎಷ್ಟು ಬಾಟಲ್ ಇಂಕ್?: ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್‌ಗೆ 26 ಲಕ್ಷ ಇಂಕ್ ಬಾಟಲ್ ಪೂರೈಕೆ ಮಾಡುವಂತೆ ಚುನಾವಣಾ ಆಯೋಗ ಬೇಡಿಕೆ ಇಟ್ಟಿದೆ. ಮತದಾನ ಮಾಡಿದವರನ್ನು ಗುರುತಿಸಲು ಬೆರಳುಗಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುತ್ತದೆ.
ಕರ್ನಾಟಕ ಸರ್ಕಾರದ ಸ್ವಾಮ್ಯದಲ್ಲಿರುವ ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ 1962ರಿಂದಲೂ ಚುನಾವಣೆಗೆ ಬೇಕಾದ ಶಾಹಿಯನ್ನು ಪೂರೈಕೆ ಮಾಡುತ್ತದೆ. ದೇಶದಲ್ಲಿ ಮಾತ್ರವಲ್ಲ ಅಮೆರಿಕದಲ್ಲಿ ಚುನಾವಣೆ ನಡೆದಾಗಲೂ ಶಾಹಿ ಪೂರೈಕೆ ಮಾಡಲಾಗಿತ್ತು.
ರಾಜ್ಯ ಮತ್ತು ದೇಶದಲ್ಲಿ ಚುನಾವಣೆ ಬಂದರೆ ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್‌ನಲ್ಲಿ ಚಟುವಟಿಕೆ ಜೋರಾಗುತ್ತದೆ. ಕೇವಲ ಸಾಮಾನ್ಯ ಚುನಾವಣೆಗಳು ಮಾತ್ರವಲ್ಲ ರಾಷ್ಟ್ರಪತಿ ಚುನಾವಣೆ ಸಹ ಎಂಪಿವಿಎಲ್‌ನಿಂದಲೂ ಅಳಿಸಲಾಗದ ಶಾಹಿ ಪೂರೈಕೆಯಾಗುತ್ತದೆ.
ಇಲ್ಲಿ ಅಳಿಸಲಾಗದ ಶಾಹಿಯನ್ನು ತಯಾರು ಮಾಡಿ ಸಂಗ್ರಹ ಮಾಡುವುದಿಲ್ಲ. ಇಂತಿಷ್ಟು ಎಂದು ಬೇಡಿಕೆ ಬಂದ ಮೇಲೆಯೇ ತಯಾರು ಮಾಡಿ ಸರಬರಾಜು ಮಾಡಲಾಗುತ್ತದೆ. ವಿಶೇಷ ರಾಸಾಯನಿಕಗಳನ್ನು ಬಳಕೆ ಮಾಡಿಕೊಂಡು ಈ ಅಳಿಸಲಾಗದ ಶಾಹಿಯನ್ನು ತಯಾರು ಮಾಡಲಾಗುತ್ತದೆ.
2023ರ ವಿಧಾನಸಭೆ ಚುನಾವಣೆಗೆ ಸುಮಾರು 1.30 ಲಕ್ಷ ಬಾಟಲ್ ಅಳಿಸಲಾಗದ ಶಾಹಿಯನ್ನು ತಯಾರು ಮಾಡಲಾಗಿತ್ತು. ಗ್ರಾಮ ಪಂಚಾಯಿತಿಯಿಂದ ಪಾರ್ಲಿಮೆಂಟ್ ತನಕ ಯಾವುದೇ ಚುನಾವಣೆ ನಡೆದರೂ. ಭಾರತ ಮಾತ್ರವಲ್ಲ ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳ ಚುನಾವಣೆಗೆ ಅಳಿಸಲಾಗದ ಶಾಹಿ ಪೂರೈಕೆಯಾಗುತ್ತದೆ.
ಸ್ವಾತಂತ್ರ್ಯಾನಂತರ 1951, 57ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಾಗ ಒಬ್ಬರೇ ಹಲವು ಬಾರಿ ಮತ ಚಲಾಯಿಸಿದ ಆರೋಪ ಕೇಳಿ ಬಂದಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಚುನಾವಣಾ ಆಯೋಗ ಮತದಾರರ ಬೆರಳಿಗೆ ಕಪ್ಪು ಮಸಿ ಅಥವಾ ಶಾಯಿ ಹಾಕುವ ನಿರ್ಧಾರ ಕೈಗೊಂಡಿತು. ಸುಲಭವಾಗಿ ಅಳಿಸಲಾಗದ ಶಾಹಿ ಇದಾಗಿದೆ.
26.55 ಲಕ್ಷ ಅಳಿಸಲಾಗದ ಶಾಹಿಯನ್ನು ಮಾರ್ಚ್ 15ರೊಳಗೆ ದೇಶದ ಎಲ್ಲಾ ರಾಜ್ಯಗಳ ಚುನಾವಣಾ ಆಯುಕ್ತರ ಕಛೇರಿಗಳಿಗೆ ಪೂರೈಕೆ ಮಾಡಬೇಕು ಎಂದು ಚುನಾವಣಾ ಆಯೋಗ ಹೇಳಿದೆ. 2023ರ ಡಿಸೆಂಬರ್‌ನಲ್ಲಿಯೇ ಶಾಹಿಗಾಗಿ ಬೇಡಿಕೆ ಸಲ್ಲಿಕೆಯಾಗಿತ್ತು. ಆದರೆ ಎಷ್ಟು ಎಂದು ಮಾತ್ರ ಈಗ ಮಾಹಿತಿ ನೀಡಲಾಗಿದೆ.
ಈ ಶಾಹಿಯ ಪೂರೈಕೆಯಿಂದಾಗಿ ಮೈಲ್ಯಾಕ್‌ಗೆ 55 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿದೆ. 1989ರಿಂದ ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಉತ್ಪಾದನೆಯನ್ನು ಆರಂಭಿಸಿದೆ. ವಿಶ್ವದ 30 ರಾಷ್ಟ್ರಗಳ ಚುನಾವಣೆಗೆ ಕಾರ್ಖನೆ ಅಳಿಸಲಾಗದ ಶಾಹಿ ಪೂರೈಕೆ ಮಾಡಿ ಹಿರಿಮೆಯನ್ನುಗಳಿಸಿದೆ.












Click it and Unblock the Notifications