ಕಾಂಗ್ರೆಸ್‌ನಿಂದ ಆಫರ್‌ ಬಂದಿದ್ಯಾ..?: ಬಿಜೆಪಿ ಅಭ್ಯರ್ಥಿ ಮುಂದೆಯೇ ಪ್ರತಾಪ್‌ ಸಿಂಹ ಹೇಳಿದ್ದೇನು..?

ಮೈಸೂರು, ಮಾರ್ಚ್ 18: ಈ ಬಾರಿ ಲೋಕಸಭಾ ಟಿಕೆಟ್‌ ಹಂಚಿಕೆಯಲ್ಲಿ ಬಿಜೆಪಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಹಲವಾರು ಹಾಲಿ ಶಾಸಕರಿಗೆ ಕೋಕ್‌ ನೀಡಿ ಹೊಸ ಮುಖಗಳಿಗೆ ಟಿಕೆಟ್‌ ನೀಡಿದೆ. ಈ ಪೈಕಿ ಮೈಸೂರು ಲೋಕಸಭಾ ಕ್ಷೇತ್ರ ಕೂಡ ಒಂದು. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರತಾಪ್‌ ಸಿಂಹಗೆ ಟಿಕೆಟ್‌ ನೀಡಿದ್ದು, ಯದುವೀರ್‌ ಒಡೆಯರ್‌ಗೆ ಟಿಕೆಟ್‌ ನೀಡಲಾಗಿದೆ.

ಟಿಕೆಟ್‌ ಕೈ ತಪ್ಪಿರುವ ಪ್ರತಾಪ್‌ ಸಿಂಹಗೆ ಕಾಂಗ್ರೆಸ್‌ ಪಕ್ಷದಿಂದ ಆಫರ್‌ ಬಂದಿದ್ಯಾ..? ಎನ್ನುವ ಪ್ರಶ್ನೆಗೆ ಸ್ವತಃ ಪ್ರತಾಪ್‌ ಸಿಂಹ ಉತ್ತರಿಸಿದ್ದು, ಬಿಜೆಪಿ ಪಕ್ಷ ನನಗೆ ತಾಯಿ ಎಂದು ಸ್ಪಷ್ಟಪಡಿಸಿದ್ದಾರೆ.

Lok Sabha Election 2024 Did Pratap Simha Receive An Offer From Congress

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೆ ಬಿಜೆಪಿ ಪಕ್ಷದಲ್ಲಿ ಟಿಕೆಟ್‌ ಕೊಡದೇ ಇದ್ದಿದ್ದರೆ, ನಾನು ಬರೆದುಕೊಂಡು ಅಲ್ಲೇ ಇರುತ್ತಿದ್ದೆ. ಪಕ್ಷ ನನಗೆ ಟಿಕೆಟ್‌ ಕೊಟ್ಟು ಹತ್ತು ವರ್ಷ ಎಂಪಿ ಮಾಡಿದೆ. ಪಕ್ಷ ತಾಯಿ ಇದ್ದ ಹಾಗೆ ಎಂದು ನಾವು ಬರಿ ಬಾಯಿ ಮಾತಿಗೆ ಹೇಳಲ್ಲ. ಪಕ್ಷ ನಿಜಕ್ಕೂ ನನಗೆ ತಾಯಿ. ಹೀಗಾಗಿ ಪಕ್ಷಕ್ಕೂ ದ್ರೋಹ ಬಗೆಯಲ್ಲ. ಪಕ್ಕದಲ್ಲಿದ್ದವರಿಗೂ ದ್ರೋಹ ಬಗೆಯಲ್ಲ ಎಂದು ಯದುವೀರ್‌ ಒಡೆಯರ್‌ ಅವರನ್ನು ಉದ್ದೇಶಿಸಿ ಹೇಳಿದ್ದಾರೆ.

ಇವತ್ತು ಬಿಜೆಪಿಯಲ್ಲಿರುವವರು ಮೂಲ ಬಿಜೆಪಿಗರು ಕಡಿಮೆ ಇದ್ದಾರೆ. ಆದರೆ ನನಗೆ ಹಿನ್ನೆಲೆ ಇದೆ. ನಮ್ಮ ಪಕ್ಷದ ಅಭ್ಯರ್ಥಿ ನಮ್ಮ ಜೊತೆಗಿದ್ದಾರೆ. ನಿಶ್ಚಿತವಾಗಿ ಅವರನ್ನು ಗೆಲ್ಲಿಸುತ್ತೇವೆ. ನಾನೇ ಎಲ್ಲೇ ನಿಂತರು ಗೆಲ್ಲುವ ಶಕ್ತಿಯನ್ನು ಮೈಸೂರಿನ ಕೊಡಗಿನ ಜನತೆ ನೀಡಿದ್ದಾರೆ. ಆದರೆ ನನ್ನ ನಿಲ್ಲಿಸಿ ನನಗೆ ಶಕ್ತಿ ಕೊಟ್ಟಿದ್ದು, ಭಾರತೀಯ ಜನತಾ ಪಾರ್ಟಿ ಎಂದಿದ್ದಾರೆ.

ನಾನು ಬಿಜೆಪಿ ಅಭ್ಯರ್ಥಿಯಾದರೂ ಸಹ ಎಲ್ಲಾ ಪಾರ್ಟಿಯಲ್ಲೂ ನನ್ನ ಹಿತವನ್ನು ಬಯಸುವವರು ಇದ್ದಾರೆ. ಸಾಮಾನ್ಯ ಜನ, ಹಿತೈಷಿಗಳು ಕುರುಬ ಸಮುದಾಯದವರು, ನಮ್ಮ ಪಾರ್ಟಿಗೆ ಬನ್ನಿ ನಮ್ಮ ಜೊತೆ ನಿಲ್ಲಿ ಎಂದು ಕೇಳಿದ್ದಾರೆ. ಅಷ್ಟೆ, ಕಾಂಗ್ರೆಸ್‌ ಆಫರ್‌ ವಿಚಾರವನ್ನು ಇಲ್ಲಿಗೆ ಬಿಡಿ ಎಂದು ಬೇರೆ ಪಕ್ಷದಿಂದ ಆಫರ್ ಬಂದ ಬಗ್ಗೆ ಪ್ರತಾಪ್‌ ಸಿಂಹ ಗೊಂದಲಮಯವಾಗಿ ಉತ್ತರಿಸಿದ್ದಾರೆ.

Lok Sabha Election 2024 Did Pratap Simha Receive An Offer From Congress

ಮಾತು ಮುಂದುವರಿಸಿದ ಅವರು,ಯದುವೀರ್‌ ಒಡೆಯರ್‌ ಅವರನ್ನು ಪಕ್ಷ ಅಭ್ಯರ್ಥಿ ಮಾಡಿದೆ. ನಾವು ನಾಮಪತ್ರ ಸಲ್ಲಿಕೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ರಾಜರಾಗಿ ನಾಡಿಗೆ ಪರಿಚಯ ಆಗಿದ್ದರೂ, ಅವರನ್ನು ಅಭ್ಯರ್ಥಿಯಾಗಿ ಮನವರಿಕೆ ಮಾಡಿಕೊಡಬೇಕು. ಇದು ತುಂಬಾ ದೊಡ್ಡ ಕ್ಷೇತ್ರ. ಕಡಕೊಳದಿಂದ ಕರ್ಕಿ 200 ಕಿ.ಮೀ. ಹೋಗಬೇಕು ಎಂದು ಚುನಾವಣಾ ಮುಂದಿನ ತಯಾರಿ ಬಗ್ಗೆ ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+