ಮೈಸೂರು ವಿವಿಯಲ್ಲಿ ಉದ್ಯೋಗ ಇಂದೇ ಅರ್ಜಿ ಹಾಕಿ
ಮೈಸೂರು, ಅ.23: ಮೈಸೂರು ವಿಶ್ವವಿದ್ಯಾಲಯದ ಮೈಕ್ರೋ ಬಯಾಲಜಿ ವಿಭಾಗದ ಪ್ರಯೋಗಾಲಯ ಹಾಗೂ ಕಚೇರಿ ಸಹಾಯಕ ಹುದ್ದೆ, ಹಾಗೂ ಸಮಾಜ ಕಾರ್ಯ ಅಧ್ಯಯನ ವಿಭಾಗದ ಸಂಶೋಧನಾ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.. ಕಲೆ, ಮಾನವ ಶಾಸ್ತ್ರ, ಶಿಕ್ಷಣ, ಅನ್ವಯ ವಿಜ್ಞಾನ ಸೇರಿದಂತೆ ಅನೇಕ ವಿಭಾಗಗಳಲ್ಲಿ ಮೈಸೂರು ವಿವಿ ಕೋರ್ಸ್ ಗಳನ್ನು ನಡೆಸುತ್ತಿದೆ.
ಹುದ್ದೆಯ ಸಂಖ್ಯೆ: 1
ಹುದ್ದೆ ಹೆಸರು: ಕಚೇರಿ ಸಹಾಯಕ
ಸಂಬಳ ವಿವರ: ಆಯ್ಕೆಯಾದ ಅಭ್ಯರ್ಥಿಗೆ 5,000 ಪ್ರತಿ ತಿಂಗಳಿನಂತೆ ಸಂಬಳ ಸಿಗಲಿದೆ.
ವಯೋಮಿತಿ ವಿವರ: ಅಭ್ಯರ್ಥಿ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು 40 ವರ್ಷದೊಳಗಿರಬೇಕು. ನಿಯಮಕ್ಕನುಸಾರ ವಯೋಮಿತಿ ಸಡಿಲ ಸಾಧ್ಯತೆಯಿದೆ.

ವಿದ್ಯಾರ್ಹತೆ: ಬಿಎಸ್ ಸಿ(ಜೀವ ವಿಜ್ಞಾನ ವಿಷಯ) ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ: ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿ ನಂತರ ಸಂದರ್ಶನ ನಡೆಸಲಾಗುತ್ತದೆ.
ಅರ್ಜಿ ಹಾಕುವುದು ಹೇಗೆ?: ಮೇಲ್ಕಂಡ ನಿಯಮಗಳ ಅನ್ವಯ ಅಭ್ಯರ್ಥಿಗಳು ತಮ್ಮ ಸ್ವ ವಿವರವುಳ್ಳ ಬಯೋಡಾಟಾ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಕೆಳಗಿನ ವಿಳಾಸಕ್ಕೆ ಕಳಿಸತಕ್ಕದ್ದು.
ಅರ್ಜಿ ಕಳಿಸಬೇಕಾದ ವಿಳಾಸ:
ಪ್ರೊ. ವಿ ರವಿಶಂಕರ್ ರೈ,
DOS ಮೈಕ್ರೋಬಯಾಲಜಿ
ಮೈಸೂರು ವಿಶ್ವವಿದ್ಯಾಲಯ
ಮಾನಸ ಗಂಗೋತ್ರಿ
ಮೈಸೂರು -570006
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 25, 2014.
ಸಂಶೋಧನಾ ಸಹಾಯಕ ಹುದ್ದೆ: (Research Assistant)
ಹುದ್ದೆ ಸಂಖ್ಯೆ : 2
ಸಂಬಳ: 12,000 ರಿಂದ 14,000 ರು
ಅರ್ಹತೆ: ಯಾವುದೇ ವಿಶ್ವವಿದ್ಯಾಲಯದಿಂದ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಪಾಸಾಗಿರಬೇಕು.
* ಕಂಪ್ಯೂಟರ್ ಜ್ಞಾನ, ಕನ್ನಡ ಮತ್ತು ಇಂಗ್ಲೀಷ್ ಭಾಷಾ ಜ್ಞಾನ, ಕೌಶಲ್ಯ ತರಬೇತಿ ಅನುಭವವುಳ್ಳವರಿಗೆ ಆದ್ಯತೆ.
ಅರ್ಜಿ ಸಲ್ಲಿಸುವುದು ಹೇಗೆ: ಸ್ವವಿವರ, ಅಗತ್ಯ ಶೈಕ್ಷಣಿಕ ದಾಖಲೆಗಳ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಸಲ್ಲಿಸತಕ್ಕದ್ದು
ವಿಳಾಸ: ಅಧ್ಯಕ್ಷರು, ಸಮಾಜಕಾರ್ಯ ವಿಭಾಗ ಅಧ್ಯಯನ ವಿಭಾಗ
ಮಾನಸ ಗಂಗೋತ್ರಿ, ಮೈಸೂರು - 570006
ಹೆಚ್ಚಿನ ವಿವರಗಳಿಗೆ ಸಮಾಜಕಾರ್ಯ ವಿಭಾಗ ಅಧ್ಯಯನ ವಿಭಾಗ ಕಚೇರಿ ಅಥವಾ ವೆಬ್ ತಾಣವನ್ನು ವೀಕ್ಷಿಸಬಹುದು.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 27/10/2014 ಸಂಜೆ












Click it and Unblock the Notifications