ಕೆಎಸ್ಆರ್‌ಟಿಸಿಯಿಂದ ದಸರಾ ವಿಶೇಷ ಪ್ಯಾಕೇಜ್ ಟೂರ್

ಮೈಸೂರು, ಅಕ್ಟೋಬರ್ 14 : ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಮಂಗಳವಾರ ಚಾಲನೆ ಸಿಕ್ಕಿದೆ. ದಸರಾ ಅಂಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಸಹ ಪ್ರವಾಸಿಗರ ಅನುಕೂಲಕ್ಕಾಗಿ ಪ್ಯಾಕೇಜ್ ಟೂರ್ ವ್ಯವಸ್ಥೆಯನ್ನು ಮಾಡಲಾಗಿದೆ. [ವೈಭವದ ಮೈಸೂರು ದಸರಾ 2015 : ಚಿತ್ರಸಂಪುಟ]

ಈ ವಿಶೇಷ ಪ್ಯಾಕೇಜ್ ಟೂರ್‌ ಮೂಲಕ ಪ್ರವಾಸಿಗರು ಅ.18 ರಿಂದ ನವೆಂಬರ್ 1 ರವರೆಗೆ ಮೈಸೂರು ಸುತ್ತ-ಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಪ್ಯಾಕೇಜ್ ಟೂರ್ ಗಳಿಗೆ ಪ್ರವಾಸಿಗರಿಗೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. [ದಸರಾಕ್ಕೆ ಚಾಲನೆ ನೀಡಿದ ಪುಟ್ಟಯ್ಯ]

ksrtc

ಕೆಎಸ್ಆರ್‌ಟಿಸಿಯ ಮೈಸೂರು ಕೇಂದ್ರಿಯ ಬಸ್ ನಿಲ್ದಾಣ ಮತ್ತು ಕೆಎಸ್ಆರ್‌ಟಿಸಿ ಖಾಸಗಿ ಬುಕ್ಕಿಂಗ್ ಕೌಂಟರ್ ಹಾಗೂ ಆನ್‍ಲೈನ್ ಮುಖಾಂತರವೂ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. [KSRTC ವೆಬ್ ಸೈಟ್]

ಪ್ಯಾಕೇಜ್ ವಿವರಗಳು [ಮೈಸೂರು ಹತ್ತಿರದ ಸ್ಥಳಗಳು (ವಾರಾಂತ್ಯದ ರಜಾ ತಾಣಗಳು)]

* ಗಿರಿ ದರ್ಶಿನಿ ಪ್ಯಾಕೇಜ್ : ಬೆಳಗ್ಗೆ 6.30ಕ್ಕೆ ಹೊರಡುವ ಬಸ್ಸಿನ 'ಗಿರಿ ದರ್ಶಿನಿ' ಪ್ಯಾಕೇಜ್ ಮೂಲಕ 325 ಕಿ.ಮೀ. ಸಂಚಾರ ನಡೆಸಬಹುದು. ಈ ಪ್ಯಾಕೇಜ್‌ನಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಹಾಗೂ ಚಾಮುಂಡಿ ಬೆಟ್ಟವನ್ನು ವೀಕ್ಷಿಸಬಹುದು. ಈ ಬಸ್ಸಿನಲ್ಲಿ ವಯಸ್ಕರಿಗೆ ರೂ. 350 ಮತ್ತು ಮಕ್ಕಳಿಗೆ 175 ರೂ. ಪ್ರಯಾಣ ದರವಿದೆ.

* ಜಲದರ್ಶಿನಿ ಪ್ಯಾಕೇಜ್ : 'ಜಲ ದರ್ಶಿನಿ' ಪ್ಯಾಕೇಜ್‌ ಮೂಲಕ 350 ಕಿ.ಮೀ. ಸಂಚಾರ ನಡೆಸಬಹುದು. ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ, ನಿಸರ್ಗಧಾಮ. ಅಬ್ಬಿ ಜಲಪಾತ, ರಾಜಾಸೀಟ್, ಹಾರಂಗಿ ಜಲಾಶಯವನ್ನು ಈ ಪ್ಯಾಕೇಜ್‌ನಲ್ಲಿ ವೀಕ್ಷಿಸಬಹುದು. ಬೆಳಗ್ಗೆ 6.30ಕ್ಕೆ ಬಸ್ ಹೊರಡಲಿದ್ದು, ವಯಸ್ಕರಿಗೆ ರೂ. 375 ಮತ್ತು ಮಕ್ಕಳಿಗೆ 190 ರೂ. ಪ್ರಯಾಣ ದರವಿರುತ್ತದೆ.

* ದೇವ ದರ್ಶಿನಿ : 250 ಕಿ.ಮೀ. ಸಂಚಾರ ನಡೆಸುವ 'ದೇವ ದರ್ಶಿನಿ' ಪ್ಯಾಕೇಜ್ ಟೂರ್ ಮೂಲಕ ನಂಜನಗೂಡು, ತಲಕಾಡು, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣವನ್ನು ವೀಕ್ಷಿಸಬಹುದು. ಈ ಬಸ್ ಬೆಳಗ್ಗೆ 6.30ಕ್ಕೆ ಹೊರಡಲಿದ್ದು, ಪ್ರಯಾಣ ದರ ವಯಸ್ಕರಿಗೆ ರೂ.275 ಮತ್ತು ಮಕ್ಕಳಿಗೆ 140 ರೂ. ನಿಗದಿಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+