ಮೈಸೂರು : ಪ್ರವಾಸಿ ಸ್ಥಳಗಳ ಭೇಟಿಗೆ ಕೆಎಸ್ಆರ್‌ಟಿಸಿ ದರ್ಶಿನಿ ಪ್ಯಾಕೇಜ್
ಮೈಸೂರು, ಮೇ 19 : ಮೈಸೂರಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಕೆಎಸ್ಆರ್‌ಟಿಸಿ 'ದರ್ಶಿನಿ ಪ್ಯಾಕೇಜ್' ಎಂಬ ಪ್ಯಾಕೇಜ್ ಘೋಷಣೆ ಮಾಡಿದೆ. ವಿವಿಧ ಪ್ರವಾಸಿ ಸ್ಥಳಗಳನ್ನು ಪ್ಯಾಕೇಜ್‌ನಡಿ ವೀಕ್ಷಣೆ ಮಾಡಬಹುದಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಮೈಸೂರು ನಗರ ಸಾರಿಗೆ ವಿಭಾಗದ ವತಿಯಿಂದ ಪ್ರವಾಸಿಗರ ಅನುಕೂಲಕ್ಕಾಗಿ 'ದರ್ಶಿನಿ ಪ್ಯಾಕೇಜ್' ಆರಂಭಿಸಲಾಗಿದೆ. ಮೇ 17 ರಂದು ಪ್ಯಾಕೇಜ್‌ಗೆ ಚಾಲನೆ ಸಿಕ್ಕಿದೆ.
ಮೈಸೂರು ನಗಗರ ಸ್ಥಳೀಯ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗಾಗಿ ಈ ಪ್ಯಾಕೇಜ್ ಆರಂಭಿಸಲಾಗಿದೆ. ಕರ್ನಾಟಕ ಸಾರಿಗೆ ಮತ್ತು ಹವಾನಿಯಂತ್ರಿತ (ವೋಲ್ವೋ) ಬಸ್‌ಗಳಲ್ಲಿ ಜನರು ಪ್ರಯಾಣ ಮಾಡುವ ಮೂಲಕ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದು.

ಸಾಮಾನ್ಯ ಸಾರಿಗೆ ಬಸ್‌ನಲ್ಲಿ ತಲಾ ರೂ.200 ಹಾಗೂ ನಗರ ಸಾರಿಗೆ ವೋಲ್ವೊ ಬಸ್‌ನಲ್ಲಿ ರೂ. 300 ಪಾವತಿಸಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ಇದೇ ಕೇಂದ್ರದಲ್ಲಿ ಮೈಸೂರಿನ ನಗರ ಪ್ಯಾಪ್ತಿಯಲ್ಲಿ ಪ್ರಯಾಣಿಸುವ ದೈನಂದಿನ ಪಾಸ್‍ಗಳ ವಿತರಣಾ ಕೇಂದ್ರವನ್ನು ಸಹ ಉದ್ಘಾಟಿಸಲಾಗುತ್ತದೆ.
ಯಾವ-ಯಾವ ಪ್ರದೇಶಗಳು : ಈ ದರ್ಶಿನಿ ಪ್ಯಾಕೇಜ್‍ನಲ್ಲಿ ಚಾಮುಂಡಿಬೆಟ್ಟ, ಮರಳು ಕಲೆಗಳ ಸಂಗ್ರಹಾಲಯ, ಪ್ರಾಕೃತೀಕ ಮತ್ತು ಐತಿಹಾಸಿಕ ಸಂಗ್ರಹಾಲಯ, ಮೃಗಾಲಯ, ಮೈಸೂರು ಅರಮನೆ, ಮತ್ತು ಕೃಷ್ಣರಾಜ ಬೃಂದಾವನನ್ನು ವೀಕ್ಷಿಸಲು ಅವಕಾಶವಿದೆ.











Click it and Unblock the Notifications