ಸಚಿವೆ ಉಮಾಶ್ರೀ ಪಿಎಚ್ ಡಿ ವಿವಾದ ಅಂತ್ಯ

ಮೈಸೂರು, ಏ. 29 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರ ಪಿಎಚ್ ಡಿ ವ್ಯಾಂಸಗದ ಕುರಿತು ಎದಿದ್ದ ವಿವಾದಗಳಿಗೆ ಸೋಮವಾರ ತೆರೆ ಎಳೆಯಲಾಗಿದೆ. ಪಿಎಚ್ ಡಿ ಪ್ರವೇಶ ಪ್ರಕ್ರಿಯೆಯ ನಿಯಮಾವಳಿಗಳನ್ನು ಸಡಿಲಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಎರಡು ವಿವಾದಾತ್ಮಕ ನಿರ್ಧಾರಗಳನ್ನು ಹಿಂಪಡೆದಿದೆ.

ಪ್ರಭಾವಿ ರಾಜಕಾರಣಿಗಳ ಪಿಎಚ್ ಡಿ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡಲು ಪ್ರವೇಶ ಪ್ರಕ್ರಿಯೆಯ ನಿಯಮಾವಳಿಗಳನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸಡಿಲಿಸಿದೆ ಎಂಬ ಬಗ್ಗೆ ಭಾರೀ ವಿವಾದ ಎದ್ದಿತ್ತು. ಈ ಕುರಿತು ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ವಿವಿಯ ಕುಲಾಧಿಪತಿ, ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಹೇಳಿದ್ದರು.

Umashree

ಸೋಮವಾರ ಮೈಸೂರಿನಲ್ಲಿ ವಿವಿ ಕುಲಪತಿ ಪ್ರೊ.ಎಂ.ಜಿ.ಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಿಎಚ್ ಡಿ ಪ್ರವೇಶ ಪ್ರಕ್ರಿಯೆಯ ಕುರಿತು ವಿಶ್ವವಿದ್ಯಾಲಯ ಕೈಗೊಂಡಿದ್ದ ಎರಡು ನಿರ್ಧಾರಗಳನ್ನು ವಾಪಸ್ ಪಡೆಯಲು ತೀರ್ಮಾನ ಕೈಗೊಳ್ಳಲಾಗಿದೆ. ಆದ್ದರಿಂದ ಸಚಿವೆ ಉಮಾಶ್ರೀ ಅವರ ಪಿಎಚ್ ಡಿ ಕನಸಿಗೆ ತಾಂತ್ರಿಕ ತೊಂದರೆ ಎದುರಾಗಿದೆ. [ಮೈಸೂರು ವಿವಿ ಪರೀಕ್ಷೆ ಬರೆದ ಹಿಂಡಲಗಾ ಕೈದಿಗಳು]

ವಿವಾದಗಳ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವೆ ಉಮಾಶ್ರೀ, "ಈ ವರ್ಷ ಸಾಧ್ಯವಾಗದಿದ್ದರೆ ಮುಂದಿನ ವರ್ಷವಾದರೂ ಪಿಎಚ್ ಡಿ ಪಡೆಯಲು ಪ್ರಯತ್ನಿಸುತ್ತೇನೆ. ಅದು ನನ್ನ ಕನಸು ಎಂದು ಹೇಳಿದ್ದಾರೆ. ಪಿಎಚ್ ಡಿ ಪಡೆಯಲು ಯಾವುದೇ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ವಿವಾದವೇನು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸ್ನಾತಕ ಪದವಿ ಮಾಡದೆ, ನೇರ ಸ್ನಾತಕೋತ್ತರ ಪದವಿ ಮಾಡಿದವರನ್ನು ಇದೊಂದು ವರ್ಷದ ಮಟ್ಟಿಗೆ ಪಿಎಚ್ ಡಿ ಸಂಶೋಧನ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುವುದು ಹಾಗೂ ಪ್ರವೇಶ ಪರೀಕ್ಷೆಯಲ್ಲಿ ಶೇ. 40 ಅಂಕ ಗಳಿಸಿದವರನ್ನೂ ಯಶಸ್ವಿ ಅಭ್ಯರ್ಥಿಗಳ ಮೆರಿಟ್ ಪಟ್ಟಿಗೆ ಸೇರಿಸಬೇಕೆಂಬ ಎರಡು ನಿರ್ಧಾರಗಳನ್ನು ಕೈಗೊಂಡಿತ್ತು.

ಸೋಮವಾರ ನಡೆದ ವಿವಿ ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ಸಿಂಡಿಕೇಟ್ ಸದಸ್ಯರಾದ ಗೋ. ಮಧುಸೂದನ್, ಸಂದೇಶ್ ನಾಗರಾಜ್ ಮುಂತಾದವರು ಪಿಎಚ್ ಡಿ ನಿಯಮಾವಳಿಗೆ ತಂದಿರುವ ತಿದ್ದುಪಡಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹಲವಾರು ಸುತ್ತಿನ ಚರ್ಚೆಗಳ ಬಳಿಕ ವಿವಾದಾತ್ಮಕ ನಿರ್ಧಾರಗಳನ್ನು ಹಿಂದಕ್ಕೆ ಪಡೆದು ಮೊದಲಿನ ನಿಯಮದಂತೆ ಪಿಎಚ್ ಡಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.

ಉಮಾಶ್ರೀ ಪಾತ್ರವೇನು : ಮಾಜಿ ಸಚಿವ ಸಿಟಿ ರವಿ ಮತ್ತು ಹಾಲಿ ಸಚಿವೆ ಉಮಾಶ್ರೀ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ವ್ಯಾಸಂಗ ಮಾಡುತ್ತಿದ್ದಾರೆ. ಸಚಿವೆ ಉಮಾಶ್ರೀ ತಮ್ಮ ಪ್ರಭಾವ ಬಳಸಿ ಒಂದು ವರ್ಷದ ಮಟ್ಟಿಗೆ ಪಿಎಚ್ ಡಿ ಪ್ರವೇಶ ಪ್ರಕ್ರಿಯೆಯ ನಿಯಮವನ್ನು ಬದಲಾವಣೆ ಮಾಡಿಸಿದ್ದಾರೆ ಎಂಬ ಕಾರಣಕ್ಕೆ ವಿವಾದ ಉಂಟಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+