Karnataka Assembly election 2023: ಮೈಸೂರು ಜಿಲ್ಲೆಯಲ್ಲಿರುವ ಹೊಸ ಯುವ ಮತದಾರರ ವಿವರ ಇಲ್ಲಿದೆ

ಮೈಸೂರು ಜಿಲ್ಲೆಯಲ್ಲಿರುವ ಎಲ್ಲಾ ಹೊಸ ಮತದಾರರ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಮೈಸೂರು, ಮಾರ್ಚ್‌, 09: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಕ್ಕು ಚಲಾವಣೆ ಮಾಡಲು ಜಿಲ್ಲೆಯಲ್ಲಿ ಒಟ್ಟು 43,626 ಯುವ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಜಿಲ್ಲೆಯಲ್ಲಿ 18 ವರ್ಷ ಪೂರೈಸಿದ ಅಂದಾಜು 80,000 ಹೊಸ ಮತದಾರರಿದ್ದಾರೆ. ಜಿಲ್ಲಾಡಳಿತ ಇವರೆಲ್ಲರನ್ನೂ ನೋಂದಣಿ ಮಾಡಿಸಲು ಪಣ ತೊಟ್ಟಿದ್ದು, ಈಗಾಗಲೆ 43,626 ಮಂದಿಯನ್ನು ಪಟ್ಟಿಗೆ ಸೇರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Know see details of new youth voters in Mysuru district

ಜಿಲ್ಲೆಯಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೇ ನೈತಿಕ ಮತದಾನ(ಎಥಿಕಲ್ ವೋಟಿಂಗ್) ಮಾಡುವ ಪ್ರಮಾಣವನ್ನು ಹೆಚ್ಚಿಸುವುದು ಹಾಗೂ ಹೊಸ ಮತದಾರರನ್ನು ಹೆಚ್ಚಾಗಿ ನೋಂದಾಯಿಸುವುದನ್ನು ಮುಖ್ಯ ಗುರಿಯಾಗಿಸಿಕೊಂಡು ಜಿಲ್ಲಾಡಳಿತ ಕಾರ್ಯಾಚರಣೆ ಆರಂಭಿಸಿದೆ. ಮೈಸೂರು ನಗರ ಪ್ರದೇಶದಲ್ಲಿ ಅತೀ ಕಡಿಮೆ ಮತದಾನವಾಗುತ್ತಿದೆ. ಅದರಲ್ಲಿಯೂ ವಿದ್ಯಾವಂತರು ಹೆಚ್ಚಾಗಿ ವಾಸಿಸುವ ಬಡಾವಣೆಗಳಲ್ಲಿ ಶೇಕಡಾ 40ಕ್ಕಿಂತ ಕಡಿಮೆ ಮತದಾನವಾಗಿದೆ.

ಆಮಿಷಕ್ಕೆ ಒಳಗಾಗದಂತೆ ಸೂಚನೆ

ಹೀಗೆ ಬುದ್ಧಿವಂತರೇ ಚುನಾವಣೆ ಪ್ರಕ್ರಿಯೆಯಿಂದ ಇಷ್ಟು ಪ್ರಮಾಣದಲ್ಲಿ ದೂರ ಉಳಿಯುತ್ತಿರುವುದು ಅತ್ಯಂತ ಆತಂಕಕಾರಿಯಾಗಿದೆ. ಯೋಗ್ಯ ಜನಪ್ರತಿನಿಧಿಯ ಆಯ್ಕೆಗೆ ವಿದ್ಯಾವಂತರ ಮತದಾನ ಅತ್ಯಂತ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಈ ಬಾರಿ ಜಿಲ್ಲಾಡಳಿತ ಈ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅಷ್ಟೇ ಅಲ್ಲದೇ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

Know see details of new youth voters in Mysuru district

ಜಿಲ್ಲೆಯಲ್ಲಿರುವ ಮತದಾರರ ವಿವರ

ಮೈಸೂರು ಜಿಲ್ಲೆಯಲ್ಲಿ ಒಟ್ಟು 25,59,855 ಮತದಾರರು ಇದ್ದು, ಇದರಲ್ಲಿ 12,72,155 ಪುರುಷ, 12,87,502 ಮಹಿಳೆಯರು, 198 ತೃತೀಯ ಲಿಂಗಿ ಮತದಾರರಿದ್ದಾರೆ. ಜಿಲ್ಲಾ ಸ್ವೀಪ್ (ವೋಟರ್ಸ್‌ ಎಜುಕೇಷನ್ ಅಂಡ್ ಎಲೆಕಟ್ರೋಲ್ ಪಾರ್ಟಿಸಿಪೇಷನ್)ಸಮಿತಿ ನಾನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ.

ಈ ಮೂಲಕ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸಲಾಗುತ್ತಿದೆ. ಅದರಲ್ಲಿಯೂ ಈ ಬಾರಿ ವಿಶೇಷವಾಗಿ ಹೊಸದಾಗಿ ಮತದಾನದ ಹಕ್ಕನ್ನು ಪಡೆದುಕೊಂಡಿರುವ ಯುವ ಮತದಾರರ ನೋಂದಣಿಯನ್ನು ಮುಖ್ಯವಾಗಿ ಪರಿಗಣಿಸಿದೆ ಎಂದು ಜಿಲ್ಲಾ ಪಂಚಾಯತ್‌ ಸಿಇಒ ಕೆ.ಎಂ.ಗಾಯತ್ರಿ ತಿಳಿಸಿದರು.

ಆದಿವಾಸಿಗಳಿಗೆ ಮತದಾನದ ಜಾಗೃತಿ

ಆದಿವಾಸಿಗಳು ಹೆಚ್ಚಾಗಿರುವ ಎಚ್.ಡಿ.ಕೋಟೆ, ಹುಣಸೂರು ಮತ್ತು ಪಿರಿಯಾಪಟ್ಟಣ ಮತ್ತು ನಂಜನಗೂಡು ತಾಲೂಕುಗಳಲ್ಲಿ ಒಟ್ಟು 21995 ಜನರು ವಾಸವಿದ್ದಾರೆ. ಇದರಲ್ಲಿ 15061 ಜನ ಗಿರಿಜನರು ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ. ಇನ್ನುಳಿದವರು ಹೆಸರು ನೋಂದಾಯಿಸಿಕೊಂಡು ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

ಚುನಾವಣಾ ಧ್ಯೇಯ ಗೀತೆ ಪ್ರಸಾರ

ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗಳ ಡಿಜಿಟಲ್ ಗ್ರಂಥಾಲಯಗಳಲ್ಲಿ ಚುನಾವಣಾ ಧ್ಯೇಯ ಗೀತೆಯನ್ನು ಪ್ರಸಾರ ಮಾಡಲಾಗುತ್ತಿದೆ. ರೈಲಿನಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ, ನಗರ, ಗ್ರಾಮಾಂತರ ಪ್ರದೇಶದಲ್ಲಿ ಕಸ ಸಂಗ್ರಹಿಸುವ ವಾಹನಗಳಲ್ಲಿ, ಚಿತ್ರಮಂದಿರಗಳಲ್ಲಿ ಚುನಾವಣಾ ಧ್ಯೇಯಗೀತೆ ಹಾಗೂ ಡಿಜಿಟಲ್ ಬೋರ್ಡ್‌ಗಳಲ್ಲಿ ಮತದಾನದ ಜಿಂಗಲ್ಸ್‌ಗಳನ್ನು ಪ್ರಸಾರ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+