ಹಾನಗಲ್ ಹಾಲಿ MLAಗೆ ಟಿಕೆಟ್ ನಿರಾಕರಣೆ, ಸಿಎಂ ಮನೆ ಮುಂದೆ ಪ್ರತಿಭಟನೆ
ಮೈಸೂರು, ಏಪ್ರಿಲ್ 17: ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕು ಹಾಲಿ ಶಾಸಕ ಮನೋಹರ್ ತಹಶೀಲ್ದಾರ್ ಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿರುವುದರಿಂದ ಸಿಟ್ಟಿಗೆದ್ದಿರುವ ಅವರ ಬೆಂಬಲಿಗರು ಇಂದು ಮುಖ್ಯಮಂತ್ರಿಗಳ ಮನೆಯ ಮುಂದೆ ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಮುಖ್ಯಮಂತ್ರಿಗಳ ನಿವಾಸದ ಮುಂದೆ ಜಮಾಯಿಸಿದ ಹಾನಗಲ್ ಶಾಸಕ ಮನೋಹರ್ ತಹಶೀಲ್ದಾರ್ ಅವರ ಅಭಿಮಾನಿಗಳು ಕಾಂಗ್ರೆಸ್ ವಿರುದ್ಧ ಮತ್ತು ಸಿದ್ದರಾಮಯ್ಯ ವಿರುದ್ಧವೇ ಘೋಷಣೆಗಳನ್ನು ಕೂಗಿದರು. ಹಾನಗಲ್ ಕ್ಷೇತ್ರಕ್ಕೆ ಶಾಸಕರ ಬದಲಿಗೆ ಶ್ರೀನಿವಾಸ್ ಮಾನೆ ಎಂಬುವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಮನೆಯ ಮುಂದೆ ಪ್ರತಿಭಟನೆ ನಡೆಯುತ್ತಿದ್ದರೂ ಸಹ ಅವರನ್ನು ನಿರ್ಲಕ್ಷಿಸಿ ಪ್ರಚಾರಕ್ಕಾಗಿ ಸಿಎಂ ತೆರಳಿದರು. ಇದರಿಂದ ಮತ್ತಷ್ಟು ಬೇಸರಗೊಂಡ ಮನೋಹರ್ ತಹಶೀಲ್ದಾರ್ ಬೆಂಬಲಿಗರು ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಮಗೆ ನ್ಯಾಯ ಸಿಗುವ ವರೆಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿರುವ ಮನೋಹರ್ ತಹಶೀಲ್ದಾರ್ ಬೆಂಬಲಿಗರು. ಸಿಎಂ ಪ್ರಚಾರ ನಡೆಸುವ ಸ್ಥಳದಲ್ಲೇ ಪ್ರತಿಭಟನೆ ನಡೆಸಲು ನಿರ್ಧಾರಿಸಿದ್ದಾರೆ.












Click it and Unblock the Notifications