ಚುನಾವಣೆಗೆ ಬಂತು ಮೈಸೂರಿನಿಂದ ಬಾಟಲ್ ಶಾಹಿ: ಇದರ ಖರ್ಚುವೆಚ್ಚದ ಲೆಕ್ಕ ಹೀಗಿದೆ..!

ಮೈಸೂರು, ಏಪ್ರಿಲ್‌ 27: ಮೇ 10 ರಂದು ರಾಜ್ಯ ವಿಧಾನಸಭೆ ಚುನಾವಣೆ ನಿಗದಿಯಾಗಿದ್ದು, ಚುನಾವಣಾ ಆಯೋಗದ ಸೂಚನೆ ಮೇರೆಗೆ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆಯು ಸುಮಾರು 1.30 ಲಕ್ಷ ಬಾಟಲ್ ಅಳಿಸಲಾಗದ ಶಾಯಿಯನ್ನು ಪೂರೈಸಿದೆ.

ದೇಶದಲ್ಲಿ ಎಲ್ಲಿಯೇ ಚುನಾವಣೆ ನಡೆಯಲಿ ಒಂದು ವೇಳೆ ವಿದೇಶಗಳಲ್ಲಿ ನಡೆದರೂ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್)ಗೆ ಬಿಡುವಿಲ್ಲದ ಕೆಲಸವಂತೂ ಇದ್ದೇ ಇರುತ್ತದೆ. ಏಕೆಂದರೆ ಇಲ್ಲಿನ ಶಾಯಿಗೆ ಎಲ್ಲೆಡೆಯಿಂದಲೂ ಬೇಡಿಕೆ ಬರುತ್ತದೆ. ದೇಶದಲ್ಲಿ ಏಲ್ಲೇ ಚುನಾವಣೆ ನಡೆದರೂ ಅದಕ್ಕೆ ಬೇಕಾದ ಶಾಯಿಯನ್ನು ಪೂರೈಸುವ ಜವಾಬ್ದಾರಿ ಮೈಲ್ಯಾಕ್ ನದ್ದಾಗಿದೆ.

Karnataka assembly election: EC Has Ordered 1,500 Litres Of Indelible Ink For Rs 24 Crore

ಚುನಾವಣಾ ಆಯೋಗದ ಆದೇಶದಂತೆ‌ ಸುಮಾರು 1.30 ಲಕ್ಷ ಬಾಟಲ್ ಅಳಿಸಲಾಗದ ಶಾಯಿ ತಯಾರಿಸಲಾಗಿದೆ. ಈ ಶಾಯಿಯನ್ನು ಪಾರದರ್ಶಕ ಮತದಾನಕ್ಕಾಗಿ ಕೈ ಬೆರಳಿಗೆ ಹಾಕಲಾಗುತ್ತದೆ. ಇದರ ಜೊತೆಗೆ 3,90,000 ಅರಗು ಸ್ಟಿಕ್ ತಯಾರಿಕೆಗೂ ಸೂಚನೆ ನೀಡಲಾಗಿದೆ. 10 ಮಿ.ಲೀ ಹಾಗೂ 5 ಮಿ.ಲೀ ಅಳಿಸಲಾಗದ ಶಾಯಿ ಬಾಟಲ್​ ತಯಾರಿಕೆಗೆ ಸೂಚಿಸಲಾಗಿದೆ. 10 ಮಿ.ಲೀ ಬಾಟಲಿನ ಶಾಯಿಯನ್ನು 600 ಜನಕ್ಕೆ ಹಾಕಬಹುದು.

ಐತಿಹಾಸಿಕ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯಲ್ಲಿ ಉತ್ಪಾದನೆ ಶುರುವಾಗಿದೆ. ನೇಪಾಳ, ಶ್ರೀಲಂಕಾ ಸೇರಿದಂತೆ ಪ್ರಪಂಚದ ಹಲವು ದೇಶಗಳಿಗೆ ಅಳಿಸಲಾಗದ ಶಾಯಿಯನ್ನು ಮೈಸೂರಿನ ಮೈಲ್ಯಾಕ್​ ಕಂಪನಿ ಸರಬರಾಜು ಮಾಡುತ್ತದೆ. ಪಾರ್ಲಿಮೆಂಟ್‌ನಿಂದ ಪಂಚಾಯಿತಿವರೆಗೆ ದೇಶದ ಎಲ್ಲ ಚುನಾವಣೆಗಳಿಗೂ ಮೈಸೂರಿನಿಂದಲೇ ಶಾಯಿ ಉತ್ಪಾದನೆಯಾಗುತ್ತದೆ. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಲ್ಯಾಕ್​ ಕಾರ್ಖಾನೆ ಸ್ಥಾಪನೆಯಾಯಿತು.

ಐದು ದಶಕಗಳ ಹಿಂದೆಯೇ ಮತದಾನದಲ್ಲಿ ನಡೆಯುವ ಅಕ್ರಮ ತಡೆಯಲು ಚುನಾವಣಾ ಆಯೋಗ ಮತದಾರನ ಬೆರಳಿಗೆ ಕಪ್ಪು ಶಾಯಿ (ಮಸಿ) ಬಳಸುವ ವಿಧಾನವನ್ನು ಜಾರಿಗೆ ತಂದಿತ್ತು. ಅಲ್ಲಿಂದ ಇಲ್ಲಿಯವರೆಗೂ ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಮೈಸೂರಿನಿಂದಲೇ ಶಾಯಿಯನ್ನು ಸರಬರಾಜು ಮಾಡಲಾಗುತ್ತಿರುವುದು ವಿಶೇಷವಾಗಿದೆ. ಸ್ವಾತಂತ್ರ್ಯಾನಂತರ 1951, 57ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಾಗ ಇದರಲ್ಲಿ ಒಬ್ಬರೇ ಹಲವು ಬಾರಿ ಮತ ಚಲಾಯಿಸಿದ ಆರೋಪ ಕೇಳಿ ಬಂದಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಚುನಾವಣಾ ಆಯೋಗ ಮತದಾರರ ಬೆರಳಿಗೆ ಕಪ್ಪು ಮಸಿ ಅಥವಾ ಶಾಯಿ ಹಾಕುವ ನಿರ್ಧಾರ ಕೈಗೊಂಡಿತು.

Karnataka assembly election: EC Has Ordered 1,500 Litres Of Indelible Ink For Rs 24 Crore

ಚುನಾವಣಾ ಆಯೋಗದ ಸೂಚನೆಯಂತೆ ಈಗಾಗಲೇ ಅಂದಾಜು 24 ಕೋಟಿ ವೆಚ್ಚದಲ್ಲಿ ಶಾಹಿಯನ್ನು ಪೂರೈಕೆ ಮಾಡಲಾಗಿದೆ. ಇದರೊಂದಿಗೆ ಜುಲೈನಲ್ಲಿ ಕಾಂಬೋಡಿಯಾದಲ್ಲಿ ನಡೆಯುವ ಚುನಾವಣೆಗೂ ಆರ್ಡರ್ ಬಂದಿದೆ. ಅದನ್ನು ರಪ್ತು ಮಾಡಲು ಎಲ್ಲಾ ಸಿದ್ಧತೆ ನಡೆಯುತ್ತಿದೆ ಎಂದು ಮೈಲ್ಯಾಕ್ ಎಂಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+