Karnakata election 2023: ಮೈಸೂರು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತದಾರರ ವಿವರ, ಇಲ್ಲಿದೆ ಮಾಹಿತಿ
ಮೈಸೂರು, ಮೇ, 09: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣಗೆ ಆರಂಭವಾಗಿದೆ. ಈಗಾಗಲೇ ಆಯಾ ಜಿಲ್ಲಾವಾರು ಮತದಾರರ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ನೀಡಿದ್ದು, ಇದೀಗ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಮತದಾರರ ವಿವರನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಮೈಸೂರು, ಪಿರಿಯಾಪಟ್ಟಣ ಮತದಾರರ ವಿವರ
ಜಿಲ್ಲೆಯಲ್ಲಿ ಒಟ್ಟು 2,905 ಮತಗಟ್ಟೆಗಳಿದ್ದು, 13,17,121 ಪುರುಷ ಮತದಾರರು, 13,38,637 ಮಹಿಳಾ ಮತದಾರರು ಹಾಗೂ 230 ಇತರೆ ಮತದಾರರಿದ್ದು, ಒಟ್ಟು 26,55,988 ಮತದಾರರಿದ್ದಾರೆ. ಇನ್ನು 210-ಪಿರಿಯಾಪಟ್ಟಣ ತಾಲೂಕಿನಲ್ಲಿ ಒಟ್ಟು 235 ಮತಗಟ್ಟೆಗಳಿದ್ದು, 98,106 ಪುರುಷ, 97,345 ಮಹಿಳಾ ಹಾಗೂ 7 ಇತರೆ ಮತದಾರರಿದ್ದು, ಒಟ್ಟು 1,95,458 ಮತದಾರರಿದ್ದಾರೆ.

ಕೃಷ್ಣರಾಜನಗರ, ಹುಣಸೂರು ಮತದಾರರು
211-ಕೃಷ್ಣರಾಜನಗರ ತಾಲೂಕಿನಲ್ಲಿ ಒಟ್ಟು 250 ಮತಗಟ್ಟೆಗಳಿದ್ದು, 1,08,118 ಪುರುಷ, 1,09,649 ಮಹಿಳಾ ಹಾಗೂ 19 ಇತರೆ ಮತದಾರರಿದ್ದು ಒಟ್ಟು 2,17,786 ಮತದಾರರಿದ್ದಾರೆ. 212-ಹುಣಸೂರು ತಾಲೂಕಿನಲ್ಲಿ 273 ಮತಗಟ್ಟೆಗಳಿದ್ದು, 1,21,217 ಪುರುಷ ಮತದಾರರು, 1,21,525 ಮಹಿಳಾ ಮತದಾರರು ಹಾಗೂ 14 ಇತರೆ ಮತದಾರರಿದ್ದು ಒಟ್ಟು 2,42,756 ಮತದಾರರಿದ್ದಾರೆ.
ಹೆಚ್ ಡಿ.ಕೋಟೆ, ನಂಜನಗೂಡು ಮತದಾರರು
213- ಹೆಚ್ ಡಿ.ಕೋಟೆ ತಾಲೂಕಿನಲ್ಲಿ 282 ಮತಗಟ್ಟೆಗಳಿದ್ದು, 1,13,263 ಪುರುಷ ಮತದಾರರು, 1,12,512 ಮಹಿಳಾ ಮತದಾರರು ಹಾಗೂ 12 ಇತರೆ ಮತದಾರರಿದ್ದು ಒಟ್ಟು 225784 ಮತದಾರರಿದ್ದಾರೆ. 214-ನಂಜನಗೂಡು ತಾಲೂಕಿನಲ್ಲಿ ಒಟ್ಟು 249 ಮತಗಟ್ಟೆಗಳಿದ್ದು, 1,09,887 ಪುರುಷ, 1,10,500 ಮಹಿಳಾ ಮತದಾರರು ಹಾಗೂ 6 ಇತರೆ ಸೇರಿದಂತೆ ಒಟ್ಟು 2,20,393 ಮತದಾರರಿದ್ದಾರೆ.
ಚಾಮುಂಡೇಶ್ವರಿ, ಕೃಷ್ಣರಾಜ ಮತದಾರರು
215-ಚಾಮುಂಡೇಶ್ವರಿ ಕ್ಷೇತ್ರದಲ್ಲಿ 337 ಮತಗಟ್ಟೆಗಳಿದ್ದು, 1,64,151 ಪುರುಷ ಮತದಾರರು, 1,64,955 ಮಹಿಳಾ ಹಾಗೂ 35 ಇತರೆ ಸೇರಿದಂತೆ ಒಟ್ಟು 3,29,141 ಮತದಾರರಿದ್ದಾರೆ. 216- ಕೃಷ್ಣರಾಜ ಕ್ಷೇತ್ರದಲ್ಲಿ ಒಟ್ಟು 265 ಮತಗಟ್ಟೆಗಳಿದ್ದು, 1,22,442 ಪುರುಷ ಮತದಾರರು, 1,27,886 ಮಹಿಳಾ ಮತದಾರರು ಹಾಗೂ 29 ಇತರೆ ಮತದಾರರಿದ್ದು ಸೇರಿದಂತೆ ಒಟ್ಟು 2,50,357 ಮತದಾರರಿದ್ದಾರೆ.
ಚಾಮರಾಜ, ನರಸಿಂಹರಾಜ ಕ್ಷೇತ್ರಗಳ ಮತದಾರರು
217- ಚಾಮರಾಜ ಕ್ಷೇತ್ರದಲ್ಲಿ 244 ಮತಗಟ್ಟೆಗಳಿದ್ದು, 1,21,368 ಪುರುಷ, 1,24,844 ಮಹಿಳಾ ಹಾಗೂ 31 ಇತರೆ ಮತದಾರರು ಸೇದಂತೆ ಒಟ್ಟು 2,46,243 ಮತದಾರರಿದ್ದಾರೆ. 218- ನರಸಿಂಹರಾಜ ಕ್ಷೇತ್ರದಲ್ಲಿ 282 ಮತಗಟ್ಟೆಗಳಿದ್ದು, 1,39,994 ಪುರುಷ, 1,48,667 ಮಹಿಳಾ ಮತದಾರರು ಹಾಗೂ 49 ಇತರೆ ಮತದಾರರು ಸೇರಿದಂತೆ ಒಟ್ಟು 2,88,710 ಮತದಾರರಿದ್ದಾರೆ.
ವರುಣ, ತಿ ನರಸೀಪುರ ಕ್ಷೇತ್ರಗಳ ಮತದಾರರು
219- ವರುಣ ಕ್ಷೇತ್ರದಲ್ಲಿ 261 ಮತಗಟ್ಟೆಗಳಿದ್ದು, 1,17,155 ಪುರುಷ ಮತದಾರರು, 1,17,365 ಮಹಿಳಾ ಮತದಾರರು ಹಾಗೂ 13 ಇತರೆ ಮತದಾರರು ಸೇರಿದಂತೆ ಒಟ್ಟು 2,34,533 ಮತದಾರರಿದ್ದಾರೆ. 220- ತಿ ನರಸೀಪುರ ಕ್ಷೇತ್ರದಲ್ಲಿ 227 ಮತಗಟ್ಟೆಗಳಿದ್ದು, 1,01,420 ಪುರುಷ ಮತದಾರರು, 1,03,389 ಮಹಿಳಾ ಮತದಾರರು ಹಾಗೂ 15 ಇತರೆ ಮತದಾರರಿದ್ದು ಒಟ್ಟು 2,04,824 ಮತದಾರರಿದ್ದಾರೆ.
ಮದಾನ ಮಾಡಿದ ಹಿರಿಯರು
ಹಾಗೆಯೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಕಲಚೇತನ ವ್ಯಕ್ತಿಗಳಿಗೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಚಲಾವಣೆ ಮಾಡಿಸಲಾಗಿದೆ. ನಮೂನೆ 12 ಡಿ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ ಮತದಾರರಿಗೆ ಅವರವರ ಮನೆಗಳಿಗೆ ತೆರಳಿ ಅಂಚೆ ಮತಪತ್ರದ ಮೂಲಕ ಮತಚಾಲವಣೆಗೆ ಏ.29 ರಿಂದ ಮೇ 4ವರೆಗೆ ಅವಕಾಶ ಕಲ್ಪಿಸಿ ಮತಚಲಾವಣೆ ಮಾಡಿಸಲಾಗಿರುತ್ತದೆ. ಈ ಸೌಲಭ್ಯದ ಮೂಲಕ ಜಿಲ್ಲೆಯಲ್ಲಿ 2667 ಮತದಾರರು ಮತಚಾಲಾಯಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications