ಮೈಸೂರಿನಲ್ಲಿ ಕಾಲಾ ಬಿಡುಗಡೆಯಿಲ್ಲ: ಒಗ್ಗಟ್ಟಾದ ಚಿತ್ರಮಂದಿರಗಳ ಮಾಲೀಕರು

ಮೈಸೂರು, ಜೂನ್ 07 : ಕಳೆದ ಒಂದು ವಾರದಿಂದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಸಿನೆಮಾ ಬಿಡುಗಡೆ ಕುರಿತಾಗಿ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಂದು ಪ್ರದರ್ಶನಗೊಳ್ಳಬೇಕಿದ್ದ ಕಾಲಾ ಚಿತ್ರ ಬಿಡುಗಡೆಯಾಗಿಲ್ಲ.

ಕಾಲಾ ಚಲನಚಿತ್ರದ ಶೋ ಬುಕ್ ಮಾಡದ ಮಲ್ಟಿಫ್ಲೆಕ್ಸ್, ಕೆಲವು ಚಲನಚಿತ್ರ ಮಂದಿರಗಳ ಮಾಲೀಕರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

kala movie is not released in Mysore Today

ಒಂದು ವೇಳೆ ಪ್ರದರ್ಶನಕ್ಕೆ ಮುಂದಾದರೂ ಭದ್ರತಾ ಸಮಸ್ಯೆ ಉಂಟಾಗಬಹುದು. ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂಬ ಮುನ್ಸೂಚನೆ ಅರಿತು ಸ್ವಯಂ ಪ್ರೇರಣೆಯಿಂದ ಪ್ರದರ್ಶನಕ್ಕೆ ನಿರಾಸಕ್ತಿ ತೋರಿದ್ದಾರೆ.

kala movie is not released in Mysore Today

ಇಂದು ಮೈಸೂರಿನ ಡಿ.ಆರ್.ಸಿ. ಐನಾಕ್ಸ್, ಕೆಲವು ಚಿತ್ರಮಂದಿರಗಳಲ್ಲಿ ಕಾಲಾ ಚಿತ್ರದ ಪ್ರದರ್ಶನ ನಡೆಯಬೇಕಿತ್ತು. ಆದರೆ ಡಿ.ಆರ್.ಸಿ. ಮಲ್ಟಿಪ್ಲೆಕ್ಸ್ ಚಲನಚಿತ್ರ ಮಂದಿರದ ವ್ಯವಸ್ಥಾಪಕಿ ವೈಶಾಲಿ ಪದಕಿ ಈ ಕುರಿತು ಮಾತನಾಡಿ, ಈಗಾಗಲೇ ಕಾಲ ಚಿತ್ರದ ಲೈಸೆನ್ಸ್ ಪಡೆದುಕೊಳ್ಳಲಾಗಿದೆ. ಆದರೆ ಸದ್ಯಕ್ಕೆ ಪ್ರದರ್ಶನ ಮಾಡುತ್ತಿಲ್ಲ.

kala movie is not released in Mysore Today

ಕಾಲ ಚಿತ್ರ ಪ್ರದರ್ಶನದ ಬಗ್ಗೆಯೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಇಂದು ಮಾತ್ರ ಚಿತ್ರ ಬಿಡುಗಡೆ ಮಾಡುತ್ತಿಲ್ಲ. ಮುಂದಿನ ಬೆಳವಣಿಗೆಗಳ ಕುರಿತು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+