ಕೊರೊನಾ ವಿರುದ್ಧ ಹೋರಾಟಕ್ಕೆ ಜೆಎಸ್ ಎಸ್ ನಿಂದ ಹೊಸ ತಂತ್ರಜ್ಞಾನ
ಮೈಸೂರು,
ಮೇ 08; ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನ ಸೋಂಕಿನ ವಿರುದ್ಧ ಹೋರಾಡಲು ಜಗತ್ತೇ ಒಂದಾಗಿದೆ. ಈ ಸೋಂಕಿಗೆ ಲಸಿಕೆ ಕಂಡುಹಿಡಿಯಲು ವಿವಿಧ ದೇಶಗಳು ಕೋಟಿಗಟ್ಟಲೆ ಹಣವನ್ನು ವೆಚ್ಚ ಮಾಡುತ್ತಿವೆ. ಹೋರಾಟದಲ್ಲಿ ಬಳಕೆಯಾಗುವ ವೆಂಟಿಲೇಟರ್ ಗಳು ದುಬಾರಿ ಆಗಿರುವುದರಿಂದ ಕಡಿಮೆ ದರದ ವೆಂಟಿಲೇಟರ್ ಗಳ ಆವಿಷ್ಕಾರವೂ ನಡೆದಿದೆ. id="toptextpromo"> id='are-slot-1' class='oiad oi-axt oiadv'>ನಮ್ಮ
ಮೈಸೂರಿನ ಜೆಎಸ್ ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಕೊರೊನಾಗೆ ಚಿಕಿತ್ಸೆ ನೀಡಲು ಉನ್ನತ ತಂತ್ರಜ್ಞಾನದ ಮೂಲಕ ಹಲವು ಸಂಶೋಧನೆಯಲ್ಲಿ ತೊಡಗಿದೆ. ಕೊರೊನಾ ವೈರಸ್ ಸೋಂಕನ್ನು ನಿರ್ನಾಮ ಮಾಡಲು ಮೂರು ಬಗೆಯ ತಂತ್ರಗಳನ್ನು ಬಳಸಿಕೊಳ್ಳಲು ಮುಂದಾಗಿದೆ. id='are-slot-2' class='oiad oi-axt oiadv'>
ಜೆಎಸ್ ಎಸ್ ನಿಂದ ಮೂರು ಬಗೆಯ ತಂತ್ರಜ್ಞಾನ
ಕೊರೊನಾ ಸೋಂಕನ್ನು ಕಡಿಮೆಗೊಳಿಸುವ ಮತ್ತು ಕೆಲವು ತಂತ್ರಜ್ಞಾನ ಪ್ರಗತಿಯ ಉಪಕ್ರಮಗಳಿಂದ ಹಾಗೂ ಪಿಡುಗಿನ ನಂತರದ ಅವಧಿಯಲ್ಲಿಯೂ ಸ್ಥಳೀಯವಾಗಿ ಜೀವನ ಶೈಲಿಯಲ್ಲಿನ ಬದಲಾವಣೆಗಳನ್ನು ಕಡಿಮೆ ವೆಚ್ಚದಲ್ಲಿ ಮತ್ತು ಮಾನವ ಕುಲಕ್ಕೆ ಲಭ್ಯವಾಗುವಂತೆ ಸಾಧ್ಯವಾಗಲು ಮೂರು ಬಗೆಯ ತಂತ್ರಜ್ಞಾನವನ್ನು ಜೆಎಸ್ ಎಸ್ ಸಂಸ್ಥೆ ಅಭಿವೃದ್ಧಿಪಡಿಸಿದೆ.
ಆಸ್ಟ್ರೇಲಿಯಾದಲ್ಲಿ ಅಗ್ಗದ ವೆಂಟಿಲೇಟರ್ ಸಂಶೋಧಿಸಿದ ಸೋಮವಾರಪೇಟೆ ವೈದ್ಯ

ಪ್ರತ್ಯೇಕತೆ -ಗಾಲಿಗಳ ಮೇಲಿನ ಚಿಕಿತ್ಸಾ ಘಟಕ
ಯಾವುದೇ ವಿಪತ್ತಾಗಲೀ ಅಥವಾ ಪಿಡುಗಾಗಲೀ ಸಂಭವಿಸಿದಲ್ಲಿ ಅಥವಾ ಅದು ಎಂತಹ ಸ್ಥಳವಾಗಲೀ ಅಲ್ಲಿಗೆ ತೆಗೆದುಕೊಂಡು ಹೋಗಬಹುದಾಗಿದ್ದು, ಇದರಿಂದಾಗಿ ರೋಗಿಗೆ ಸುವರ್ಣ ಸಮಯವೆಂದು ಹೇಳಲ್ಪಡುವ ಅವಧಿಯಲ್ಲಿ ಚಿಕಿತ್ಸೆ ನೀಡಲು ಇದು ಸಹಾಯಕ. ಈ ಪ್ರಗತಿಯಿಂದಾಗಿ ಹೆಚ್ಚಿನ ಆಸ್ಪತ್ರೆ, ಪ್ರತ್ಯೇಕತೆ ಮತ್ತು ತುರ್ತು ಚಿಕಿತ್ಸಾ ವೆಚ್ಚ ಕಡಿಮೆಯಾಗಿ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಸಾಧ್ಯ.

ಕಡಿಮೆ ವೆಚ್ಚದ ವೆಂಟಿಲೇಟರ್
ಕಡಿಮೆ ವೆಚ್ಚದ ಈ ವೆಂಟಿಲೇಟರ್ ಅನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದಾಗಿದ್ದು, ಇದರಲ್ಲಿ ಮರುಬಳಕೆ ಮಾಡದಂತಹ ಎಎಂಬಿಯು ಚೀಲ ಮತ್ತು ಉಸಿರಾಟಕ್ಕೆ ಬೇಕಾಗುವ ಸಾಧನ, ಸರಿಹೊಂದಬಹುದಾಗಿರುವ ಉಬ್ಬರವಿಳಿತದ ಪರಿಮಾಣ ಮತ್ತು ಇತರೆ ವೆಂಟಿಲೇಟರ್ ಗಳಲ್ಲಿರದ ಧನಾತ್ಮಕ ಅಂಶಗಳಿರುತ್ತವೆ. ಇದರ ಅಂದಾಜು ಮೌಲ್ಯದ ಮೂವತ್ತು ಸಾವಿರ ರೂಪಾಯಿಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಿದರೆ ದರ ಮತ್ತಷ್ಟು ಇಳಿಸಬಹುದು ಎಂದು ಸಂಸ್ಥೆ ಹೇಳಿದೆ.

ಸಂಚಾರಿ ಸಾಧನ ಡೆಂಟಿ ಸೇಫ್
ಈ ಉಪಕರಣದಿಂದಾಗಿ ದಂತ ವೈದ್ಯರಿಗೆ ಮತ್ತು ರೋಗಿಗಳಿಗೂ ಸುರಕ್ಷತೆ ದೊರಕುತ್ತದೆ. ಈ ಉಪಕರಣವನ್ನು ವೈಜ್ಞಾನಿಕವಾಗಿ ಸಂಚಾರಿ ಸಾಧನದಂತೆ ರೂಪಿಸಿದ್ದು, ಇದು ಡೆಂಟಲ್ ಕುರ್ಚಿಗಳನ್ನು ಮತ್ತು ಚಿಕಿತ್ಸೆ ನೀಡಿದ ಪ್ರದೇಶವನ್ನು 20 ನಿಮಿಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಕ್ರಿಮಿಗಳನ್ನು ನಾಶಗೊಳಿಸಿ ಸುರಕ್ಷತೆಗೆ ಒತ್ತು ನೀಡುತ್ತದೆ.












Click it and Unblock the Notifications