ಮೈಸೂರು ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ

ಮೈಸೂರು, ಅ. 10 : ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಪಟ್ಟ ಜೆಡಿಎಸ್ ಮತ್ತು ಬಿಜೆಪಿ ಪಾಲಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಎರಡನೇ ಅವಧಿಗೆ ಪಾಲಿಕೆಯ ಅಧಿಕಾರವನ್ನು ಹಂಚಿಕೊಂಡಿವೆ.

ಮೈಸೂರು ಮಹಾನಗರ ಪಾಲಿಕೆಯ ಆವರಣದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಗುರುವಾರ ನಡೆದ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್‌ನ ಆರ್.ಲಿಂಗಪ್ಪ ಹಾಗೂ ಉಪ ಮೇಯರ್ ಆಗಿ ಬಿಜೆಪಿಯ ಮಹದೇವಮ್ಮ ಆಯ್ಕೆಯಾಗಿದ್ದಾರೆ. [ಮೈಸೂರು ಪಾಲಿಕೆ ಫಲಿತಾಂಶ]

Mysore City Corporation

ಪ್ರಾದೇಶಿಕ ಆಯುಕ್ತರಾದ ರಶ್ಮಿ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಆರ್.ಲಿಂಗಪ್ಪ 40 ಮತಗಳನ್ನು ಪಡೆದು, 27 ಮತಗಳನ್ನು ಪಡೆದ ಕಾಂಗ್ರೆಸ್ ಅಭ್ಯರ್ಥಿ ಆರ್.ಅನಂತು ಅವರನ್ನು ಸೋಲಿಸಿದರೆ, 39 ಮತಗಳನ್ನು ಪಡೆದ ಮದಹೇವಮ್ಮ ಅವರು ಕಾಂಗ್ರೆಸ್ ಅಭ್ಯರ್ಥಿ ಸಮೀನಾ ಜಬೀನ್ ಅವರನ್ನು ಸೋಲಿಸಿದರು. ಆರ್.ಲಿಂಗಪ್ಪ ಮತ್ತು ಮಹದೇವಮ್ಮ ಅವರ ಅಧಿಕಾರಾವಧಿ ಅ.9 2014ರಿಂದ ಅ.8,2015ರವರೆಗೆ ಇರುತ್ತದೆ.

ಬಿಜೆಪಿ-ಜೆಡಿಎಸ್ ದೋಸ್ತಿ : ಕಳೆದ ಬಾರಿಯ ಮೇಯರ್ ಚುನಾವಣೆಯಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ಗೆ ಅಧಿಕಾರ ಸಿಗದಂತೆ ಮಾಡಿದ್ದರುವು. ಈ ಬಾರಿಯೂ ಮೈತ್ರಿ ಮುಂದುವರೆದಿದ್ದು, ಅಧಿಕಾರವನ್ನು ಎರಡೂ ಪಕ್ಷಗಳು ಹಂಚಿಕೊಂಡಿವೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ನಿರಾಸೆಯಾಗಿದೆ.

ರೆಸಾರ್ಟ್ ರಾಜಕೀಯ : ಕಾಂಗ್ರೆಸ್ ಪಕ್ಷದವರು ಜೆಡಿಎಸ್ ಮತ್ತು ಬಿಜೆಪಿ ಸದಸ್ಯರನ್ನು ತಮ್ಮತ್ತ ಸೆಳೆಯಬಹುದೆಂದು ಹಿನ್ನೆಲೆಯಲ್ಲಿ ಸದಸ್ಯರು ಎರಡು ದಿನಗಳ ಮಟ್ಟಿಗೆ ರೆಸಾರ್ಟ್‌ಗೆ ತೆರಳಿದ್ದರು. ಬಿಜೆಪಿ ಮತ್ತು ಜೆಡಿಎಸ್‌ನ ಕೆಲವು ಸದಸ್ಯರು ನೇರವಾಗಿ ರೆಸಾರ್ಟ್‌ನಿಂದಲೇ ಮಹಾನಗರ ಪಾಲಿಕೆಗೆ ಆಗಮನಿಸಿ ಚುನಾವಣೆಯಲ್ಲಿ ಪಾಲ್ಗೊಂಡರು.

ಅಂದಹಾಗೆ 65 ಸದಸ್ಯ ಬಲದ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮಂಜುಳಾ ಮಾನಸ ಅವರು ಮಹಿಳಾ ಆಯೋಗದ ಅಧ್ಯಕ್ಷರಾಗಿ ಆಯ್ಕೆ ಆಗಿರುವುದರಿಂದ ಒಂದು ಸ್ಥಾನ ಖಾಲಿ ಇದೆ. ಕಾಂಗ್ರೆಸ್ 21, ಜೆಡಿಎಸ್ 20 ಮತ್ತು ಬಿಜೆಪಿ 12 ಸದಸ್ಯ ಬಲವನ್ನು ಪಾಲಿಕೆಯಲ್ಲಿ ಹೊಂದಿವೆ. ಎಸ್‌ಡಿಪಿಐ ಮೂರು, ಬಿಎಸ್ಆರ್‌ ಕಾಂಗ್ರೆಸ್ ಮತ್ತು ಕೆಜೆಪಿಯ ಒಬ್ಬರು ಸದಸ್ಯರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+