ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ಐಟಿ ದಾಳಿ

Recommended Video

      ದರ್ಶನ್ ಗೆ ಐಟಿ ಶಾಕ್ | ಮೈಸೂರಿನ ಫಾರ್ಮ್ ಹೌಸ್ ಮೇಲೆ ಐಟಿ ದಾಳಿ | Oneindia Kannada

      ಮೈಸೂರು, ಏಪ್ರಿಲ್ 15 : ಕರ್ನಾಟಕದಲ್ಲಿ ಐಟಿ ಇಲಾಖೆಯ ಕಾರ್ಯಚರಣೆ ಮುಂದುವರೆದಿದೆ. ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದರ್ಶನ್ ಸುಮಲತಾ ಅವರ ಪರವಾಗಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

      ಸೋಮವಾರ ಮೈಸೂರಿನ ಟಿ.ನರಸೀಪುರ ರಸ್ತೆಯಲ್ಲಿರುವ ನಟ ದರ್ಶನ್ ಫಾರ್ಮ್ ಹೌಸ್ 'ತೂಗುದೀಪ ಫಾರಂ' ಮೇಲೆ ದಾಳಿ ನಡೆಸಲಾಗಿದೆ. ಕೆಲವು ಕಾಲ ಅಧಿಕಾರಿಗಳು ಪರಿಶೀಲನೆ ನಡೆಸಿ ವಾಪಸ್ ತೆರಳಿದ್ದಾರೆ.

      IT raid on actor Darshan farm house in Mysuru

      ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರವನ್ನು ನಡೆಸುತ್ತಿದ್ದಾರೆ. ದಾಳಿಯ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, 'ಪ್ರಾಣಿ, ಪಕ್ಷಿಗಳನ್ನು ನೋಡಿಕೊಂಡು ಹೋಗಲಿ ಬಿಡಿ' ಎಂದು ಹೇಳಿದರು.

      ಬೆಳಗ್ಗೆ ದಾಳಿ ನಡೆಸಿದ್ದ ಅಧಿಕಾರಿಗಳು ಪರಿಶೀಲನೆ ಮುಗಿಸಿ ವಾಪಸ್ ತೆರಳಿದ್ದಾರೆ. ದಾಳಿ ನಡೆಸಿದ್ದು ಐಟಿ ಅಧಿಕಾರಿಗಳೋ? ಚುನಾವಣಾ ಅಧಿಕಾರಿಗಳೋ ಎಂಬ ಚರ್ಚೆ ಈಗ ಆರಂಭವಾಗಿದೆ.

      ಮಂಡ್ಯದಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿರುವ ದರ್ಶನ್, 'ನಾನು ಜಿಎಸ್‌ಟಿ ಸೇರಿ ಎಲ್ಲಾ ತೆರಿಗೆ ಕಟ್ಟಿದ್ದೀನಿ. ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದರೆ ಏನು ಸಿಗುತ್ತದೆ?. ಪ್ರಾಣಿ, ಪಕ್ಷಿಗಳನ್ನು ನೋಡಿಕೊಂಡು ಹೋಗಲಿ ಬಿಡಿ' ಎಂದು ಹೇಳಿದರು.

      ಮಂಡ್ಯ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ದರ್ಶನ್ ಅವರ ಪರವಾಗಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಮಂಗಳವಾರ ಬಹಿರಂಗ ಪ್ರಚಾರಕ್ಕೆ ಕೊನೆ ದಿನ. ಏಪ್ರಿಲ್ 18ರಂದು ಮತದಾನ ನಡೆಯಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+