ಆರ್.ಆರ್.ಬಿ ಪರೀಕ್ಷೆ ವೇಳೆ ಮಹಿಳೆಯರಿಗೆ ತಾಳಿ, ಓಲೆ, ಬಳೆ ತೆಗೆದಿಡುವಂತೆ ತಾಕೀತು
ಮೈಸೂರು, ಅಕ್ಟೋಬರ್. 31: ರೈಲ್ವೆ ಇಲಾಖೆಯ ಆರ್.ಆರ್.ಬಿಯಿಂದ 'ಡಿ' ಗ್ರೂಪ್ ಗೆ ಇಂದು ಬುಧವಾರ ಪರೀಕ್ಷೆ ನಡೆಯುತ್ತಿದೆ. ಆದರೆ ಪರೀಕ್ಷೆ ಬರೆಯಲೆಂದು ಹೋದ ಮಹಿಳಾ ಪರಿಕ್ಷಾರ್ಥಿಗಳ ತಾಳಿ, ಓಲೆ, ಬಳೆ, ಒಡವೆಗಳನ್ನು ಬಿಚ್ಚಿಸಿಡಲಾಗಿದೆ. ರೈಲ್ವೆ ಇಲಾಖೆಯ ಇಂತಹ ನಿಯಮಾವಳಿಗೆ ಇದೀಗ ತೀವ್ರ ವಿರೋಧ ವ್ಯಕ್ತವಾಗಿದೆ.
ಮೈಸೂರು ಹೆಬ್ಬಾಳದಲ್ಲಿ ರೈಲ್ವೆ ರಿಕ್ರೂಟ್ ಮೆಂಟ್ ಬೋರ್ಡ್ ನಿಂದ ಡಿಗ್ರೂಪ್ ಗೆ ಪರೀಕ್ಷೆ ನಡೆಸಲಾಗುತ್ತಿದ್ದು, ಪರೀಕ್ಷೆ ಬರೆಯಲು ಬಂದ ಮಹಿಳೆಯರಿಗೆ ತಾಳಿ, ಓಲೆ, ಬಳೆ, ಒಡವೆಗಳನ್ನು ಬಿಚ್ಚಿಸಿಟ್ಟು, ನಂತರ ಪರೀಕ್ಷಾ ಕೊಠಡಿ ಒಳಗೆ ಪ್ರವೇಶಕ್ಕೆ ಅನುಮತಿ ನೀಡಿದ್ದಾರೆ.
ತಾಳಿ, ಓಲೆ, ಬಂಗಾರದ ಒಡವೆಗಳಲ್ಲಿ ಮೈಕ್ರೋಫೋನ್, ಮೈಕ್ರೋ ಕ್ಯಾಮೆರಾ ಹಾಕಿಕೊಂಡು ನಕಲು ಮಾಡಲಾಗುತ್ತದೆ ಎಂಬ ಅನುಮಾನದಿಂದ ಈ ಪರೀಕ್ಷಾ ನಿಯಮಾವಳಿ ಜಾರಿಗೆ ತಂದಿದ್ದು, ಪರೀಕ್ಷೆ ಬರೆಯಲು ಹೋದ ಮಹಿಳಾ ಅಭ್ಯರ್ಥಿಗಳಿಗೆ ಕಿರಿಕಿರಿ ಉಂಟಾಗಿದೆ.

ಈ ಬಗ್ಗೆ ನೊಟೀಸ್ ಬೋರ್ಡ್ ನಲ್ಲೇ ಗೈಡ್ ಲೈನ್ ಪ್ರಕಟಿಸಿ ಆರ್ ಆರ್ ಬಿ ತಾಕೀತು ಮಾಡಿದೆ. ಆದರೆ ರೈಲ್ವೆ ಇಲಾಖೆಯ ನಿಯಮಾವಳಿ ವಿರುದ್ಧ ಮಹಿಳಾ ಅಭ್ಯರ್ಥಿಗಳು ಮೈಸೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications