• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಬಾಂಗ್ಲಾ ಪ್ರಜೆಗಳು ಅನಧಿಕೃತ ವಾಸ: ಇಬ್ಬರು ವಶಕ್ಕೆ

By ಮೈಸೂರು ಪ್ರತಿನಿಧಿ
|

ಮೈಸೂರು, ಮಾರ್ಚ್ 02: ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾ ಪ್ರಜೆಗಳು ಅನಧಿಕೃತವಾಗಿ ವಾಸವಾಗಿರುವ ಶಂಕೆ ವ್ಯಕ್ತವಾಗಿದೆ.

30 ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಅನಧಿಕೃತವಾಗಿ ನೆಲೆಸಿರುವ ಬಗ್ಗೆ ಮಾಹಿತಿ ದೊರೆತಿದೆ. ಮೂರು ದಿನಗಳ ಹಿಂದೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಭಾರತದ ಮುಸ್ಲಿಮರು ಬರುವ ಆತಂಕ: ಬಾಂಗ್ಲಾ ಗಡಿಯಲ್ಲಿ ಮೊಬೈಲ್ ಸ್ಥಗಿತ

ಬಾಂಗ್ಲಾದೇಶದ ಅಬ್ದುಲ್ಲಾ (26), ಮೊಹಮದ್ ಹಬೀಬುಲ್ಲಾ(22) ಎಂಬ ಇಬ್ಬರು 2018 ರಲ್ಲಿ ಭಾರತಕ್ಕೆ ಅನಧಿಕೃತವಾಗಿ ಬಂದಿದ್ದರು. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದಲ್ಲಿ ವಾಸವಿದ್ದರು.

ತಾಂಡ್ಯ ಕೈಗಾರಿಕಾ ಪ್ರದೇಶದ ಚೀಲ ತಯಾರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಈ ಬಾಂಗ್ಲಾ ವಲಸಿಗರ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇವೆ.

"ಬಾಂಗ್ಲಾದೇಶದಿಂದ ಒಬ್ಬರನ್ನೂ ಅಸ್ಸಾಂ ಒಳಗೆ ಬಿಟ್ಟುಕೊಳ್ಳುವುದಿಲ್ಲ"

ಪಶ್ಚಿಮ ಬಂಗಾಳದ ಗಡಿ ಮೂಲಕ ನುಸಳಿ ಬಂದಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಬಾಂಗ್ಲಾ, ಆಫ್ಘಾನಿಸ್ತಾನ, ಪಾಕಿಸ್ತಾನದಿಂದ ಬಂದಿರುವ ಶಂಕೆ ಮಾಹಿತಿ ದೊರೆತಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ನಂಜನಗೂಡು ಪೊಲೀಸರು ಚುರುಕುಗೊಳಿಸಿದ್ದಾರೆ.

English summary
Immigration of illegal Bangladesh residents in Nanjangud industrial area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X