Breaking; ಮೈಸೂರು-ಹುಬ್ಬಳ್ಳಿ ವಿಮಾನ ಸೇವೆಗೆ ಚಾಲನೆ

ಮೈಸೂರು, ಮೇ 03; ಸಾಂಸ್ಕೃತಿಕ ನಗರಿ ಮೈಸೂರು ಮತ್ತು ಉತ್ತರ ಕರ್ನಾಟಕದ ಹುಬ್ಬಳ್ಳಿ ಸಂಪರ್ಕಿಸುವ ವಿಮಾನ ಸೇವೆಗೆ ಮಂಗಳವಾರ ಚಾಲನೆ ಸಿಕ್ಕಿದೆ. ವಾರದಲ್ಲಿ ಮೂರು ದಿನ ಈ ವಿಮಾನ ಸಂಚಾರ ನಡೆಸಲಿದೆ.

ಮಂಗಳವಾರ ಸಂಜೆ ಮೈಸೂರು ವಿಮಾನ ನಿಲ್ದಾಣದಲ್ಲಿ ಸಂಸದ ಪ್ರತಾಪ್ ಸಿಂಹ, ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಮೈಸೂರು ವಿಮಾನ ನಿಲ್ದಾಣದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂಸದ ಪ್ರತಾಪ್ ಸಿಂಹ ಫೇಸ್‌ಬುಕ್‌ ಪೋಸ್ಟ್‌ನಲ್ಲಿ, "ವಾರದಲ್ಲಿ ಮೂರು ದಿನ ಮೈಸೂರು ಮತ್ತು ಹುಬ್ಬಳ್ಳಿ ನಡುವೆ ವಿಮಾನಯಾನ ಸೇವೆಗೆ ಚಾಲನೆ ನೀಡಲಾಯಿತು. ಮೈಸೂರು ಮತ್ತು ಹುಬ್ಬಳ್ಳಿ ನಡುವೆ ವಾರದಲ್ಲಿ 3 ದಿನ ವಿಮಾನಯಾನ ಸೇವೆ ಇಂದಿನಿಂದ ಆರಂಭವಾಗಿದ್ದು, ಇದಕ್ಕೆ ಮೂಲ ಕಾರಣೀಭೂತರಾದ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಲ್ಹಾದ ಜೋಶಿರವರಿಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.

Hubballi And Mysuru Flight Service Launched

ವೇಳಾಪಟ್ಟಿ; ಉಭಯ ನಗರಗಳ ನಡುವೆ ಈ ವಿಮಾನ ಮಂಗಳವಾರ, ಗುರುವಾರ, ಶನಿವಾರ ಇಂಡಿಗೋ ವಿಮಾನ ಸಂಚಾರ ನಡೆಸಲಿದೆ. ಸಂಜೆ 5.05ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ ಸಂಜೆ 6.05ಕ್ಕೆ ಮೈಸೂರು ತಲುಪಲಿದೆ.

ಸಂಜೆ 6.25ಕ್ಕೆ ಮೈಸೂರಿನಿಂದ ಹೊರಡುವ ವಿಮಾನ 7.40ಕ್ಕೆ ಹುಬ್ಬಳ್ಳಿ ತಲುಪಲಿದೆ. ಸದ್ಯ ವಾರದಲ್ಲಿ ಮೂರು ದಿನ ವಿಮಾನ ಹಾರಾಟ ನಡೆಸಲಿದ್ದು, ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+