ಟರ್ಕಿ ಪ್ರವಾಸ ಮುಗಿಸಿ ಬಂದಿದ್ದ ಮೈಸೂರಿನ ಅತಿಥಿ ಪ್ರಾಧ್ಯಾಪಕ ನಾಪತ್ತೆ
ಮೈಸೂರು, ಮಾರ್ಚ್ 12: ಇಲ್ಲಿನ ಮಾನಸ ಗಂಗೋತ್ರಿಯಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಪ್ರಾಧ್ಯಾಪಕರೊಬ್ಬರು ಕಳೆದ ತಿಂಗಳು ಟರ್ಕಿಗೆ ಪ್ರವಾಸಕ್ಕೆ ತೆರಳಿ ವಾಪಸ್ ಬಂದ ನಂತರ ನಾಪತ್ತೆ ಆಗಿರುವುದಾಗಿ ತಿಳಿದುಬಂದಿದೆ.
ಇಲ್ಲಿನ ಚದುರಂಗ ರಸ್ತೆಯಲ್ಲಿರುವ ಯೂನಿವರ್ಸಿಟಿ ಕ್ವಾಟ್ರರ್ಸ್ ನಿವಾಸಿ, ಪ್ರಾಧ್ಯಾಪಕ ಟಿ.ಆರ್. ಸ್ವರೂಪ್ (33) ಎಂಬುವರೇ ನಾಪತ್ತೆಯಾಗಿರುವವರು. ಫೆಬ್ರವರಿ 1ರಂದು ಅಧ್ಯಯನ ಪ್ರವಾಸಕ್ಕೆಂದು ಟರ್ಕಿಗೆ ತೆರಳಿದ್ದರು. ನಂತರ ಮಾರ್ಚ್ 2ರಂದು ವಾಪಸ್ಸಾಗಿದ್ದರು. ಅಂದಿನಿಂದ ಯಾರ ಜೊತೆಯಲ್ಲೂ ಸರಿಯಾಗಿ ಮಾತನಾಡದೇ ಮೌನಿಯಾಗಿದ್ದರು.

ಮಾರ್ಚ್ 7ರಂದು ಬೆಳಿಗ್ಗೆ ಡಿಪಾರ್ಟ್ಮೆಂಟ್ ಗೆ ಹೋಗುತ್ತೇನೆ ಎಂದು ಹೋದವರು ಮತ್ತೆ ವಾಪಸ್ಸಾಗಿಲ್ಲ ಎಂದು ಅವರ ಪತ್ನಿ ಎ.ಎಸ್. ಪುಣ್ಯಶ್ರೀ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications