ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿಯಲ್ಲಿ ಪ್ರಸಕ್ತ ವರ್ಷದಿಂದ ಜಿಎಸ್ಟಿ ಕುರಿತು ಪಾಠ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಆಗಸ್ಟ್ 7: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಂ.ಕಾಂ. ಕೋರ್ಸ್ ಗೆ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ ಟಿ) ಹಾಗೂ ಅಬಕಾರಿ ಸುಂಕ ಪತ್ರಿಕೆಯನ್ನು ಹಾಗೂ ಬಿ.ಕಾಂ. ಕೋರ್ಸಿನ 5 ಮತ್ತು 6ನೇ ಸೆಮಿಸ್ಟರ್ ನಲ್ಲಿ ಜಿಎಸ್ ಟಿ ಪರಿಚಯ ಮಾಡುವ ಪರಿಷ್ಕೃತ ಪಠ್ಯಕ್ರಮ ಅನುಷ್ಠಾನಗೊಳಿಸಲು ಮೈಸೂರು ವಿವಿ ಸಿದ್ಧಗೊಳ್ಳುತ್ತಿದೆ.

ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?

ಜು.21ರಂದು ವಾಣಿಜ್ಯ ಅಧ್ಯಯನ ಮಂಡಳಿ ವಿಶೇಷ ಸಭೆ ನಡೆಸಿ ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್ ಟಿ ವಿಷಯವನ್ನು ಅಳವಡಿಸುವ ಸಲುವಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಬಿಸಿನೆಸ್ ಟ್ಯಾಕ್ಸೇಷನ್ ಮತ್ತು ಇಂಡೈರೆಕ್ಟ್ ಟ್ಯಾಕ್ಸ್ ಲಾ ಮತ್ತು ಪ್ರಾಕ್ಟೀಸ್ ಪತ್ರಿಕೆಗಳಿಗೆ ಕೆಲವೊಂದು ಬದಲಾವಣೆ ತರಲು ಮಾಡಿದ್ದ ಪ್ರಸ್ತಾವನೆಗೆ ಯಾವುದೇ ಚರ್ಚೆಯಿಲ್ಲದೆ ವಿವಿ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.

GST lessons to B.com students in Mysuru university

ಕೇಂದ್ರ ಸರಕಾರವು ಜಾರಿಗೊಳಿಸಿರುವ ಜಿಎಸ್ಟಿ ಕಾಯ್ದೆಯನ್ನು ವಿದ್ಯಾರ್ಥಿಗಳು ಕಲಿಯುಕೊಳ್ಳುವುದು ಅಗತ್ಯವಾಗಿದೆ. ಹಾಗಾಗಿ, ಹಾಲಿ ಇರುವ ಹಳೆಯ ತೆರಿಗೆ ಪದ್ಧತಿಯನ್ನು ಕಲಿಸುವ ಬದಲಾಗಿ, ಹೊಸ ತೆರಿಗೆ ಪದ್ಧತಿ ಬಗ್ಗೆ ಕಲಿಸಬೇಕು ಎಂಬ ತೀರ್ಮಾನದಡಿ ಈ ಪಠ್ಯವನ್ನು ಕಲಿಸಲು ವಿವಿ ಶಿಕ್ಷಕ ವರ್ಗ ತೀರ್ಮಾನಿಸಿದೆ.

ಜಿಎಸ್ ಟಿ ಕುರಿತ 7 ತಪ್ಪು ತಿಳಿವಳಿಕೆ: ಸತ್ಯ ಮತ್ತು ಮಿಥ್ಯ ಜಿಎಸ್ ಟಿ ಕುರಿತ 7 ತಪ್ಪು ತಿಳಿವಳಿಕೆ: ಸತ್ಯ ಮತ್ತು ಮಿಥ್ಯ

ಎಂ.ಕಾಂ ಕೋರ್ಸಿನಲ್ಲಿ ಹಾಲಿ ವಾಣಿಜ್ಯ ತೆರಿಗೆ ವಿಷಯವಿದ್ದು, ಅಂತರಾಷ್ಟ್ರೀಯ ಹಣಕಾಸು ಸಂಬಂಧಗಳ ಬಗ್ಗೆಯೂ ಕಲಿಸಲಾಗುವುದು. ವಿದ್ಯಾರ್ಥಿಗಳಿಗೆ ಇದರಿಂದ ಕಾಲಕ್ಕೆ ತಕ್ಕಂತೆ ಹೊಸ ಜ್ಞಾನವನ್ನು ಪಡೆಯುವುದು ಸಾಧ್ಯವಾಗುವ ಹಿನ್ನೆಲೆ ಪಠ್ಯದಲ್ಲಿ ಈ ವಿಷಯ ನೂತನವಾಗಿ ಸೇರ್ಪಡೆಗೊಳ್ಳಲಿದೆ ಎಂಬುದು ಸಂತಸಕರ ಸಂಗತಿ.

English summary
Mysuru university has prepared to introduce Goods and service tax in its syllabus for 5th-6th semesters of B.com students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X