Gruha Jyothi: ಉಚಿತ ವಿದ್ಯುತ್ ಸೌಲಭ್ಯದ ನಿರೀಕ್ಷೆಯಲ್ಲಿ ಮೈಸೂರಿನ 7.13 ಲಕ್ಷ ಮಂದಿ
ಮೈಸೂರು, ಆಗಸ್ಟ್ 05: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಿಗೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಈ ತಿಂಗಳಿನಿಂದ ಗೃಹ ಜ್ಯೋತಿ ಅನುಷ್ಠಾನಕ್ಕೆ ಬರುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ 7.13 ಲಕ್ಷ ಮಂದಿ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಜೂನ್ 25ರೊಳಗೆ ಯಾರೆಲ್ಲ ಗೃಹಜ್ಯೋತಿ ಯೋಜನೆ ಸೌಲಭ್ಯ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೋ ಅವರೆಲ್ಲರೂ ಆಗಸ್ಟ್ ತಿಂಗಳಲ್ಲಿ ಉಚಿತ ವಿದ್ಯುತ್ ಲಭಿಸಲಿದೆ. ಈ ತಿಂಗಳಿನಿಂದ ವಿದ್ಯುತ್ ಬಿಲ್ ಶೂನ್ಯವಾಗಿರಲಿದೆ. ಒಂದು ವೇಳೆ ಈ ಹಿಂದಿನ ಬಾಕಿ ಬಿಲ್ ಉಳಿಸಿಕೊಂಡಿದ್ದರಷ್ಟೇ ಶುಲ್ಕ ಪಾವತಿಸಬೇಕಾಗುತ್ತದೆ.

ಮಾಸಿಕ 200ಕ್ಕಿಂತ ಕಡಿಮೆ ಯೂನಿಟ್ ವಿದ್ಯುತ್ ಬಳಸಿರುವ ನೋಂದಾಯಿತ ಲಾನುಭವಿ ಗಳಿಗೆ ಗೃಹಜ್ಯೋತಿ ಯೋಜನೆ ಪ್ರಯೋಜನ ದೊರೆಯಲಿದೆ. ಒಂದು ವರ್ಷದಲ್ಲಿ ಮನೆಯಲ್ಲಿ ಬಳಸಲಾಗಿರುವ ಸರಾಸರಿ ಯೂನಿಟ್ ಲೆಕ್ಕ ಮಾಡಿ ಆ ಸರಾಸರಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದೆ.
ಗೃಹಜ್ಯೋತಿಗೆ ಹೊಸ ರೂಪದ ಬಿಲ್
ಗೃಹಜ್ಯೋತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಪ್ರಸ್ತುತ ಮೈಸೂರು ಸೆಸ್ಕ್ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಪ್ರತ್ಯೇಕ ಬಿಲ್ ಸಹ ಸಿದ್ಧಗೊಳ್ಳುತ್ತಿದೆ. ಅಂದರೆ ಲಾಭ ಜಿಲ್ಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ದಲ್ಲಿ ಐದು ವಿಭಾಗಗಳಿವೆ.
ಎನ್.ರ್ಆ.ಮೊಹಲ್ಲಾ, ವಿ.ವಿ.ಮೊಹಲ್ಲಾದಲ್ಲಿ, ನಂಜನಗೂಡು, ಹುಣಸೂರು, ಕೆ.ರ್ಆ.ನಗರ ವಿಭಾಗಗಳ ವ್ಯಾಪ್ತಿಯಲ್ಲಿ ಒಟ್ಟು 9,78,857 ಮನೆ ಬಳಕೆಯ ವಿದ್ಯುತ್ ಸ್ಥಾವರಗಳು (ಮೀಟರ್‌ಗಳು) ಇವೆ. ಇದರಲ್ಲಿ ಈವರೆಗೆ ಒಟ್ಟು 7,13,631 ಮೀಟರ್‌ಗಳ ಮಾಲೀಕರು ತಮ್ಮ ಹೆಸರನ್ನು ಗೃಹಜ್ಯೋತಿ ಯೋಜನೆಗಾಗಿ ನೋಂದಾಯಿಸಿಕೊಂಡಿದ್ದಾರೆ. ಹೀಗೆ ನೋಂದಾಯಿಸಿಕೊಂಡಿರುವವರ ಮೀಟರ್ ಕಳೆದ ಒಂದು ವರ್ಷದಲ್ಲಿ ಸರಾಸರಿಯಾಗಿ 200 ಮೀಟರ್ ಒಳಗೇ ಓಡಿದ್ದರೆ ಅವರೆಲ್ಲರೂ ಯೋಜನೆಯ ಸೌಲಭ್ಯ ಪಡೆಯಲಿದ್ದಾರೆ. ಒಂದು ವೇಳೆ ಮನೆಯ ಮೀಟರ್ ವರ್ಷದಲ್ಲಿ ಸರಾಸರಿ 200 ಯೂನಿಟ್ ಮೀರಿದ್ದರೆ ಅಂಥ ವರಿಗೆ ಯೋಜನೆ ಉಚಿತ ಸೌಲಭ್ಯ ದೊರೆಯಲಾರದು.
ತಾಲೂಕುವಾರು ಮೀಟರ್, ನೋಂದಣಿ
ಮೈಸೂರು ತಾಲೂಕಿನಲ್ಲಿ ಒಟ್ಟು 5,05,841 ಮೀಟರ್‌ಗಳಿದ್ದು, 3,60,061 ಮೀಟರ್‌ಗಳ ಮಾಲೀಕರು ತಮ್ಮ ಹೆಸರನ್ನು ಗೃಹಜ್ಯೋತಿ ಯೋಜನೆಗಾಗಿ ನೋಂದಾಯಿಸಿಕೊಂಡಿದ್ದು, ತಾಲೂಕಿನಲ್ಲಿ ಶೇ.71.18ರಷ್ಟು ಮಂದಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
ನಂಜನಗೂಡು ತಾಲೂಕಿನಲ್ಲಿ 1,07,093 ಮೀಟರ್‌ಗಳಿದ್ದು, 81,860 ಮಂದಿ ಹೆಸರು ನೋಂದಾಯಿಸಿದ್ದು, ಶೇ.76.44 ರಷ್ಟು ಪ್ರಗತಿಯಾಗಿದೆ. ತಿ.ನರಸೀಪುರದಲ್ಲಿ 77,072 ಮೀಟರ್‌ಗಳಿದ್ದು, 59,768 ಮಂದಿ ನೋಂದಾಯಿಸಿದ್ದು, ತಾಲೂಕಿನಲ್ಲಿ ಶೇ.77.55ರಷ್ಟು ಮಂದಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
ಎಚ್.ಡಿ.ಕೋಟೆಯಲ್ಲಿ 36,350 ಮೀಟರ್‌ಗಳಿದ್ದು, 26,606 ಮಂದಿ ಹೆಸರು ನೋಂದಾಯಿಸಿಕೊಂಡಿದ್ದು, ತಾಲೂಕಿನಲ್ಲಿ ಶೇ.73.19ರಷ್ಟು ಮಂದಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಸರಗೂರಿನಲ್ಲಿ 31,737 ಮೀಟರ್‌ಗಳಿದ್ದು, 22,900 ಮಂದಿ ಹೆಸರು ನೋಂದಾಯಿಸಿಕೊಂಡಿದ್ದು, ಶೇ.72.16 ರಷ್ಟು ಗುರಿ ತಲುಪಿದೆ.
ಹುಣಸೂರಿನಲ್ಲಿ 83,779 ಮೀಟರ್‌ಗಳಿದ್ದು, 59,483 ಮಂದಿ ಹೆಸರು ನೋಂದಾಯಿಸಿದ್ದು, ತಾಲೂಕಿನಲ್ಲಿ ಶೇ.71ರಷ್ಟು ಮಂದಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಕೆ.ರ್ಆ.ನಗರದಲ್ಲಿ 41,917 ಮೀಟರ್‌ಗಳಿದ್ದು, 34,117 ಮಂದಿ ಹೆಸರು ನೋಂದಾಯಿಸಿದ್ದು, ಶೇ.81.38ರಷ್ಟು ಅರ್ಜಿ ಸಲ್ಲಿಕೆಯಾಗಿದೆ.
ಸಾಲಿಗ್ರಾಮದಲ್ಲಿ 28,003 ಮೀಟರ್‌ಗಳಿದ್ದು, 21642 ಮಂದಿ ಹೆಸರು ನೋಂದಾಯಿಸಿದ್ದು, ಶೇ. 77.28ರಷ್ಟು ಗುರಿ ತಲುಪಿದೆ. ಪಿರಿಯಾಪಟ್ಟಣದಲ್ಲಿ 67065 ಮೀಟರ್‌ಗಳಿದ್ದು, 47194 ಮಂದಿ ತಮ್ಮ ಹೆಸರು ನೋಂದಾಯಿಸಿದ್ದು, ಶೇ.70.37ರಷ್ಟು ಗುರಿತಲುಪಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ.72.90ರಷ್ಟು ಮಂದಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.












Click it and Unblock the Notifications