ರೂಟ್ ಬಸ್ಸಿನಂತೆ ಮದುವೆಗೆ ಬಳಕೆಯಾಯ್ತು ನಗು–ಮಗು ವಾಹನ

ಮೈಸೂರಿನ ಸರಕಾರಿ ಪ್ರಾಥಮಿಕ ಆರೋಗ್ಯ ಘಟಕದ ಸಿಬ್ಬಂದಿಯ ಮಗಳ ಮದುವೆ ಸಲುವಾಗಿ ನಗು-ಮಗು ವಾಹನವನ್ನು ರೂಟ್ ಬಸ್ಸಿನಂತೆ ಬಳಸಲಾಗಿದೆ. ಇಂಥದ್ದನ್ನೆಲ್ಲ ಯಾರೂ ಕೇಳೋರಿಲ್ವ?

ಮೈಸೂರು, ಮೇ 20 : ಆಂಬ್ಯುಲೆನ್ಸ್ ಅಂದರೆ ತುರ್ತು ಅಥವಾ ಅಪಘಾತದ ಸಂದರ್ಭದಲ್ಲಿ ನಾಗರಿಕರಿಗೆ ನೆರವಾಗುತ್ತದೆ ಎಂದು ನಮಗೆ ತಿಳಿದಿದೆ. ಆದರೆ ಕಷ್ಟ ಕಾಲದಲ್ಲಿ ನೆರವಾಗಬೇಕಿದ್ದ ಆಂಬುಲೆನ್ಸ್ ಅನ್ನು ಆಸ್ಪತ್ರೆಯೊಂದರ ಸಿಬ್ಬಂದಿ ಮಗಳ ಮದುವೆಗೆ ಸೈರನ್ ಬಳಸಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ವಿವಿ ಪುರಂನಲ್ಲಿರುವ ಸರಕಾರಿ ಪ್ರಾಥಮಿಕ ಆರೋಗ್ಯ ಘಟಕ, ಐಸಿಟಿಸಿ ಕೇಂದ್ರ ಲಕ್ಷ್ಮಿದೇವಮ್ಮ ಶಂಕರ‌ಶೆಟ್ಟಿ ಹೆರಿಗೆ ಆಸ್ಪತ್ರೆಯ ಸಿಬ್ಬಂದಿಯ ಮಗಳ‌ ಮದುವೆಗಾಗಿ ಇಲ್ಲಿನ ವೈದ್ಯರ ಸಮೂಹವು ನಗುಮಗು ಆಂಬುಲೆನ್ಸ್ ದುರ್ಬಳಕೆ ಮಾಡಿಕೊಂಡಿದೆ. ಗರ್ಭಿಣಿ- ಬಾಣಂತಿಯರ ಸೇವೆಗಾಗಿ ಇರುವ ಕೆಎ 09, ಜಿ 730 ಸಂಖ್ಯೆಯ ನಗು ಮಗು ತುರ್ತು ಚಿಕಿತ್ಸಾ ವಾಹನವನ್ನು ಆಸ್ಪತ್ರೆಯ ಸಿಬ್ಬಂದಿ‌ ಮದುವೆ ಸಮಾರಂಭಕ್ಕೆ ಸೈರನ್ ಸಹಿತ ಬಳಸಿದ್ದಾರೆ.[ಮೈಸೂರಿನ ಅಧಿಕಾರಿಗಳಿಗೆ ಗುಟುರು ಹಾಕಿದ ಸಿದ್ದರಾಮಯ್ಯ]

Ambulance

ಇನ್ನು, ಈ ವೇಳೆ ಆಸ್ಪತ್ರೆಯಲ್ಲಿ ಯಾರೂ ಇರಲಿಲ್ಲ. ಎಲ್ಲರೂ ಖಾಸಗಿ ರೆಸಾರ್ಟ್ ನಲ್ಲಿ ‌ನಡೆಯುತ್ತಿದ್ದ ಮದುವೆಯಲ್ಲಿದ್ದರು ಎಂದು ಆಪಾದಿಸಿದ್ದಾರೆ. ಈ ವಾಹನವನ್ನು ಬಾಣಂತಿಯರು,‌ ಮಕ್ಕಳ ಸೇವೆಗಾಗಿ ಇರಿಸಲಾಗಿದೆ. ಆದರೆ ಅದು ದುರ್ಬಳಕೆಯಾಗಿದೆ ಎಂಬುದು ಸಾರ್ವಜನಿಕರ ಆರೋಪ. ಒಟ್ಟಿನಲ್ಲಿ ಜನರಿಗೆ ಉಪಯೋಗವಾಗಬೇಕಿದ್ದ ವಾಹನ ದುರುಪಯೋಗ ಆಗಿರುವುದಂತೂ ಹೌದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+