ಮೈಸೂರು ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ

ಮೈಸೂರು, ಫೆಬ್ರವರಿ 20: ಸುಡು ಬಿಸಿಲನ್ನೂ ಲೆಕ್ಕಿಸದೇ ಸರತಿ ಸಾಲಿನಲ್ಲಿ ಬಯೋಡೇಟಾ ಹಿಡಿದು ನಿಂತಿದ್ದ ಸಾವಿರಾರು ಉದ್ಯೋಗಾಕಾಂಕ್ಷಿಗಳು, ಸೂಕ್ತ ಅಭ್ಯರ್ಥಿಯ ಹುಡುಕಾಟದೊಂದಿಗೆ ಸಂದರ್ಶನ ನಡೆಸುತ್ತಿದ್ದ ಹತ್ತಾರು ಸಂಸ್ಥೆಗಳು, ಸ್ವಾವಲಂಬಿ ಬದುಕು ಸಾಗಿಸಲು ಉದ್ಯೋಗ ಹರಸಿ ಬಂದಿದ್ದ ವಿಕಲಚೇತನರು. ಈ ಎಲ್ಲಾ ಸನ್ನಿವೇಶಗಳಿಗೆ ಮೈಸೂರಿನಲ್ಲಿ ನಡೆಯುತ್ತಿರುವ ಪ್ರಾದೇಶಿಕ ಉದ್ಯೋಗ ಮೇಳ ಸಾಕ್ಷಿಯಾಯಿತು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಪಂ, ವತಿಯಿಂದ ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿದ್ದ ಎರಡು ದಿನಗಳ ಬೃಹತ್ ಉದ್ಯೋಗ ಮೇಳದ ಮೊದಲ ದಿನವಾದ ಬುಧವಾರ ಸಾವಿರಾರು ಮಂದಿ ಉದ್ಯೋಗಾಂಕ್ಷಿಗಳು ಬಂದಿದ್ದರು.

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಡಿಪ್ಲೊಮಾ ಸೇರಿದಂತೆ ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಕೆಲಸ ಗಿಟ್ಟಿಸಿಕೊಳ್ಳುವ ನಿರೀಕ್ಷೆಯೊಂದಿಗೆ ನಾನಾ ಕಂಪನಿಗಳ ಕೌಂಟರ್ ಗಳ ಮುಂದೆ ಅರ್ಜಿ ಹಿಡಿದು ನಿಂತಿದ್ದ ದೃಶ್ಯ, ಉದ್ಯೋಗ ಒತ್ತಡಕ್ಕೆ ಸಾಕ್ಷಿಯೆನಿಸಿತು.

Good Response To Mysuru Job Fair

ಎರಡು ದಿನಗಳ ಪ್ರಾದೇಶಿಕ ಉದ್ಯೋಗ ಮೇಳದಲ್ಲಿ ಇನ್ಫೊಸಿಸ್, ವಿಪ್ರೊ, ಎಲ್ಐಸಿ, ಕೋಟಕ್ ಮಹೀಂದ್ರ, ಯುರೇಕಾ ಫೋರ್ಬ್ಸ್, ಉಬರ್, ಸ್ವಿಗ್ಗಿ, ಹೋಂಡ ಮೋಟರ್ಸ್, ಜಾನ್ಸನ್ ಲಿಫ್ಟ್, ಕೆಫೆ ಕಾಫಿ ಡೇ, ಜಸ್ಟ್ ಡಯಲ್, ಬಿಸ್ಲೆರಿ, ಹೋಂಡಾ ಮೋಟರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಕಂಪನಿ, ಅಕ್ಷಯ ಬಯೋಟೆಕ್ ಸೇರಿದಂತೆ ೧೦೦ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದವು.

7 ನೇ ತರಗತಿಯಿಂದ ಉನ್ನತ ಶ್ರೇಣಿ ವಿದ್ಯಾಭ್ಯಾಸ ಹೊಂದಿರುವ 18 ರಿಂದ 35 ವರ್ಷ ವಯೋಮಿತಿಯವರಿಗೆ ಮೇಳದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಹೀಗಾಗಿ ಮೈಸೂರು, ಮಂಡ್ಯ, ಕೊಡಗು ಜಿಲ್ಲೆಯ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದರು.

ಉದ್ಯೋಗ ಮೇಳಕ್ಕೆ ಆಗಮಿಸಿದ ಉದ್ಯೋಗಾಕಾಂಕ್ಷಿಗಳ ನೋಂದಣಿಗೆ ೧೦ ಕ್ಕೂ ಹೆಚ್ಚು ಕೌಂಟರ್ ಗಳನ್ನು ತೆರೆಯಲಾಗಿತ್ತು. ಐಟಿ ಬಿಟಿ, ಆಟೋಮೊಬೈಲ್, ಮೆಕ್ಯಾನಿಕಲ್, ಕಟ್ಟಡ ನಿರ್ಮಾಣ, ಮಾರ್ಕೆಟಿಂಗ್, ಸೇಲ್ಸ್ ಆಂಡ್ ರೀಟೇಲ್, ಟೆಲಿಕಾಂ, ಬಿಪಿಒ, ಟೆಕ್ಸ್ ಟೈಲ್ಸ್, ಬ್ಯಾಂಕಿಂಗ್, ಫೈನಾನ್ಸ್, ಇನ್ಸೂರೆನ್ಸ್, ಹಾಸ್ಪಿಟಲ್, ಫಾರ್ಮಸ್ಯುಟಿಕಲ್, ಹೆಲ್ತ್ಕೇರ್, ಮ್ಯಾನುಫ್ಯಾಕ್ಚರಿಂಗ್, ಟ್ರಾನ್ಸ್ಪೋರ್ಟ್, ಸರ್ವೀಸಸ್, ಆಹಾರ ಸಂಸ್ಕರಣೆ, ಹೋಟೆಲ್ ನಿರ್ವಹಣೆ, ಗಾಮೆಂಟ್ಸ್, ಸೆಕ್ಯುರಿಟಿ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+