ಮೈಸೂರಿನ ಹಲವೆಡೆ ಉತ್ತಮ ಮಳೆ ದಾಖಲು
ಮೈಸೂರು, ನವೆಂಬರ್ 6: ರಾಜ್ಯದ ಹಲವೆಡೆ ನ.5ರ ಗುರುವಾರ ಸಂಜೆ ಮಳೆಯಾಗಿದ್ದು, ಮೈಸೂರು ಜಿಲ್ಲೆಯಲ್ಲಿಯೂ ಉತ್ತಮ ಮಳೆ ದಾಖಲಾಗಿದೆ.
ಕೆಲವು ದಿನಗಳಿಂದ ಮಳೆ ಬಿಡುವು ನೀಡಿತ್ತು. ಗುರುವಾರ ಸಂಜೆ ಏಕಾಏಕಿ ಮತ್ತೆ ಮಳೆಯಾಗಿದೆ. ಮೈಸೂರು ನಗರ ಸೇರಿದಂತೆ ಕೆ.ಆರ್.ನಗರ, ನಂಜನಗೂಡು, ಎಚ್.ಡಿ. ಕೋಟೆ. ಹುಣಸೂರಿನಲ್ಲಿ ಉತ್ತಮ ಮಳೆ ದಾಖಲಾಗಿದೆ. ಉಳಿದ ತಾಲೂಕುಗಳಲ್ಲಿಯೂ ಸಾಧಾರಣ ಮಳೆಯಾಗಿದೆ.
ಮೈಸೂರಿನ ಬೀರಿಹುಂಡಿ ಹಾಗೂ ಹಿನಕಲ್ ಭಾಗದಲ್ಲಿ 3 ಸೆಂ.ಮೀ. ಮಳೆಯಾಗಿದೆ. ಮೈಸೂರು ನಗರ ಭಾಗದಲ್ಲಿ ಒಂದೂವರೆ ಸೆ.ಮೀ. ನಷ್ಟು ಮಳೆಯಾಗಿದ್ದು, ಬೋಗಾದಿ, ಸಿದ್ದಲಿಂಗಪುರ, ಮರಟಿಕ್ಯಾತನಹಳ್ಳಿ ವ್ಯಾಪ್ತಿಯಲ್ಲಿ 2.ಸೆಂ.ಮೀ ಮಳೆ ದಾಖಲಾಗಿದೆ. ನಂಜನಗೂಡು ತಾಲೂಕಿನ ತಾಯೂರು, ಚಿಕ್ಕಯ್ಯನ ಛತ್ರ, ತಾಂಡವಪುರ, ಹುಳಿಮಾವು, ರಾಂಫುರ, ಕುಡ್ಲಾಪುರ ಭಾಗಗಳಲ್ಲಿ 2 ಸೆಂ.ಮೀ ಮಳೆ ದಾಖಲಾಗಿದೆ.

ತಿ.ನರಸೀಪುರದ ಬೆಳಕನಹಳ್ಳಿ, ದೊಡ್ಡೇಬಾಗಿಲು, ತಲಕಾಡು, ಕಿರಗಸೂರು, ಎಚ್.ಡಿ.ಕೋಟೆಯ ಹುಣಸೂರು ಹಾಗೂ ಕೆ.ಆರ್. ನಗರದಲ್ಲಿ ಉತ್ತಮ ಮಳೆಯಾಗಿದೆ. ಹಲವು ದಿನಗಳಿಂದ ಬಿಡುವು ಪಡೆದುಕೊಂಡಿದ್ದ ಮಳೆ ನಿನ್ನೆ ಬಿರುಸು ಪಡೆದುಕೊಂಡಿತ್ತು. ಕರ್ನಾಟಕದ 14 ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಗುರುವಾರ ಮಾಹಿತಿ ನೀಡಿದೆ.












Click it and Unblock the Notifications