ಬೈಲಕುಪ್ಪೆ ಗೋಲ್ಡನ್ ಟೆಂಪಲ್ ಪ್ರವಾಸಿಗರಿಗೆ ಮುಕ್ತ

ಮೈಸೂರು, ಡಿಸೆಂಬರ್ 24 : ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿರುವ ಗೋಲ್ಡನ್ ಟೆಂಪಲ್‌ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ. ಪ್ರತಿದಿನ ಬೆಳಗ್ಗೆ 7 ರಿಂದ ಸಂಜೆ 7ರ ತನಕ ಪ್ರವಾಸಿಗರು ಭೇಟಿ ನೀಡಬಹುದಾಗಿದೆ.

ನವೀಕರಣ ಕಾಮಗಾರಿಗಾಗಿ ಸುಮಾರು 6 ತಿಂಗಳಿನಿಂದ ಗೋಲ್ಡನ್ ಟೆಂಪಲ್‌ಗೆ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿತ್ತು. ಈಗ ಕಾಮಗಾರಿ ಪೂರ್ಣಗೊಂಡಿದ್ದು ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗಿದೆ.

Golden Temple at Periyapatna now open for public

'ಗೋಲ್ಡನ್ ಟೆಂಪಲ್ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ. ಪ್ರತಿಮೆಗಳಿಗೆ ನೂತನ ಅಲಂಕಾರಿಕ ಕೆಲಸ, ಟೈಲ್ಸ್ ಹಾಕುವ ಕಾಮಗಾರಿ ಮುಕ್ತಾಯವಾಗಿದೆ' ಎಂದು ಸಂಸ್ಥೆ ಮುಖ್ಯ ಕಾರ್ಯದರ್ಶಿ ತುಲಕ್ ಚೌಧರಿ ಹೇಳಿದ್ದಾರೆ.

ಪ್ರವಾಸಿಗರು ಪ್ರತಿದಿನ ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯ ತನಕ ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಬಹುದಾಗಿದೆ. ಆರು ತಿಂಗಳ ಕಾಲ ದೇವಾಲಯ ಮುಚ್ಚಿದ್ದರಿಂದ ಪ್ರವಾಸಿಗರು ಸಂಖ್ಯೆ ಕಡಿಮೆಯಾಗಿತ್ತು.

ಒಂದು ಕಾಲದಲ್ಲಿ ಚೀನಾದಿಂದ ನಿರಾಶ್ರಿತರಾಗಿ ಬಂದು ಬೈಲುಕುಪ್ಪೆಯ ಬೆಂಗಾಡಿನಲ್ಲಿ ನೆಲೆ ನಿಂತ ಟಿಬೆಟಿಯನ್ನರು ಆ ಸ್ಥಳವನ್ನು ಅಭಿವೃದ್ಧಿಗೊಳಿಸಿ ವಿಶ್ವಮಟ್ಟದಲ್ಲಿ ಗಮನಸೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+