ಹುಣಸೂರು; ಚುನಾವಣಾ ಖರ್ಚಿಗೆ "ಕೈ" ಅಭ್ಯರ್ಥಿಗೆ ಹುಂಡಿ ಹಣ ನೀಡಿದ ಬಾಲಕಿ

ಮೈಸೂರು, ನವೆಂಬರ್ 23: ಹುಣಸೂರು ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ಮೂರು ಪಕ್ಷಗಳ ಅಭ್ಯರ್ಥಿಗಳ ಪರ ಪಕ್ಷದ ಮುಖಂಡರು ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ಅವರು ಪ್ರಚಾರಕ್ಕೆ ತೆರಳಿದ್ದ ಸಂದರ್ಭ ಚುನಾವಣಾ ಖರ್ಚಿಗೆಂದು ಬಾಲಕಿಯೊಬ್ಬಳು ಹಣ ನೀಡಿದ್ದು ಗಮನ ಸೆಳೆಯಿತು.

ತಾಲೂಕಿನ ಯಶೋಧಪುರದ ವರ್ಷಿಣಿ, ತಾನು ಕೂಡಿಟ್ಟಿದ್ದ ಗೋಲಕದ ಹಣವನ್ನು ಅಭ್ಯರ್ಥಿಗೆ ನೀಡಿದ್ದಾಳೆ.

ಇಂದು ಕಾಂಗ್ರೆಸ್ ಪಕ್ಷದ ಪರವಾಗಿ ಯು.ಟಿ.ಖಾದರ್ ಪ್ರಚಾರಕ್ಕಿಳಿಯಲಿದ್ದು, ಹುಣಸೂರಿನಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಸಲಿರುವ ಯು.ಟಿ.ಖಾದರ್, ಉಪ ಚುನಾವಣೆಗೆ ರಣತಂತ್ರ ರೂಪಿಸಲಿದ್ದಾರೆ.

Girl Gave Money To Congress Candidate In Hunsur For Election Expenses

ಇನ್ನೊಂದೆಡೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಸೋಮಶೇಖರ್‌ ಪರ ಸಂಸದ ಪ್ರಜ್ವಲ್ ರೇವಣ್ಣ ಪ್ರಚಾರದ ಅಖಾಡಕ್ಕಿಳಿಯಲಿದ್ದು, ತಾಲೂಕಿನ ಹನಗೂಡು ಹೋಬಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಇವರಿಬ್ಬರ ನಡುವೆ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಪ್ರಚಾರ ನಡೆಸಲಿದ್ದಾರೆ. ಹುಣಸೂರು ಪಟ್ಟಣದ ವಾರ್ಡ್ ನಂ 1ರಿಂದ ಪ್ರಚಾರ ಮಾಡಲಿದ್ದಾರೆ. ಹೀಗಾಗಿ ಇಂದು ಚುನಾವಣಾ ಪ್ರಚಾರ ಮತ್ತಷ್ಟು ರಂಗುಪಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+