• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಲ್ಲಿ ಮೆಡಿಕಲ್ ಶಾಪ್ ಗೆ 5,000 ರೂ. ದಂಡ

By ಮೈಸೂರು ಪ್ರತಿನಿಧಿ
|

ಮೈಸೂರು, ಮಾರ್ಚ್ 23: ಮೈಸೂರಿನ ಎನ್.ಆರ್ ಮೊಹಲ್ಲಾದಲ್ಲಿರುವ ಔಷಧಿ ಅಂಗಡಿಯೊಂದರಲ್ಲಿ ಸಾರ್ವಜನಿಕರಿಗೆ ಮಾಸ್ಕ್ ನ್ನು 10 ರುಪಾಯಿ ಬದಲಿಗೆ 25 ರುಪಾಯಿಗೆ ಮಾರಾಟ ಮಾಡಿದ್ದಕ್ಕೆ 5 ಸಾವಿರ ರೂ. ದಂಡ ವಿಧಿಸಲಾಗಿದೆ.

   Increased immunity from coconut oil | coconut oil benefits Oneindia kannada

   ಅದೇ ರೀತಿ ಸ್ಯಾನಿಟೈಸರ್ ನ್ನು 50 ರೂ. ಬದಲಿಗೆ 210 ರೂ. ಗಳಿಗೆ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಾನೂನು ಮಾಪನಾಶಾಸ್ತ್ರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು.

   ಕೊರೊನಾ ವೈರಸ್ ಭೀತಿಯಲ್ಲಿರುವ ಜನರು ಈಗ ಮಾಸ್ಕ್ ಹಾಗೂ ಸ್ಯಾನಿಟೈಸರ್ ನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಡಿರುವ ಔಷಧಿ ಅಂಗಡಿಯವರು ಎಂಆರ್ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

   ಔಷಧಿ ಅಂಗಡಿಗೆ 5,000 ರೂ. ದಂಡ ವಿಧಿಸಲಾಗಿದ್ದು, ಕಾನೂನು ಮಾಪನಶಾಸ್ತ್ರದ ಇಲಾಖೆಯ ಸಹಾಯಕ ನಿಯಂತ್ರಕರಾದ ಕೆ.ಎಮ್. ಮಹಾದೇವಸ್ವಾಮಿ ಸಿಬ್ಬಂದಿಗಳಾದ ನಿತ್ಯಾನಂದ್, ರಾಜೇಂದ್ರ ಅವರ ನೇತೃತ್ವದಲ್ಲಿ ಸೋಮವಾರ ಈ ದಾಳಿ ಮಾಡಲಾಯಿತು.

   English summary
   5000 Rs Fine Imposed for selling the mask to the public for 25 rupees instead of 10 rupees in Mysuru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X