Mysuru Dasara: ಜಂಬೂ ಸವಾರಿಗಾಗಿ ಎರಡನೇ ಹಂತದಲ್ಲಿ ಅರಮನೆಗೆ ಬಂದ ಆನೆಗಳೆಷ್ಟು?

ನಾಡಹಬ್ಬ ದಸರಾ ಆಚರಣೆಗೆ ಮೈಸೂರು ಸಜ್ಜಾಗುತ್ತಿದೆ. ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲು ಸರ್ಕಾರ ನಿರ್ಧಾರ ಮಾಡಿದೆ. ಈಗಾಗಲೇ ಅಭಿಮನ್ಯು ಸಾರಥ್ಯದಲ್ಲಿ 9 ಆನೆಗಳು ಜಂಬೂ ಸವಾರಿಗಾಗಿ ತಾಲೀಮು ನಡೆಸುತ್ತಿವೆ. ಇಂದು ಮತ್ತೆ ಐದು ಆನೆಗಳು ಅರಮನೆಗೆ ಬಂದಿದ್ದು, ಜಂಬೂ ಸವಾರಿಯಲ್ಲಿ ಭಾಗವಹಿಸಲು ಸಿದ್ಧತೆ ಆರಂಭಿಸಲಿವೆ.

ಗುರುವಾರ ಮಹೇಂದ್ರ ನೇತೃತ್ವದಲ್ಲಿ ಐದು ಆನೆಗಳು ಅರಮನೆಗೆ ಬಂದಿದ್ದು, ದಸರಾ ಸಂಭ್ರಮ ಕಳೆಗಟ್ಟುತ್ತಿದೆ. ಅಂಬಾರಿ ಹೊರಲಿರುವ ಕ್ಯಾಪ್ಟನ್ ಅಭಿಮನ್ಯು ಸಹಿತ 9 ಆನೆಗಳು ಈಗಾಗಲೇ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದು, ಇದೀಗ ಐದು ಆನೆಗಳು ಕೂಡ ಸೇರಿಕೊಂಡಿವೆ.

Five More Elephants came to Mysuru Palace for Dasara Jambu Savari

ಎರಡನೇ ಹಂತದಲ್ಲಿ ಅರಮನೆಗೆ ಆಗಮಿಸಿದ ಐದು ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಗುರುವಾರ ಸ್ವಾಗತಿಸಲಾಯಿತು. ಎಲ್ಲಾ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕಾಂಶ ಇರುವ ಆಹಾರವನ್ನು ನೀಡಲಾಗುತ್ತಿದೆ. ನಿತ್ಯ ಅರಮನೆಯಿಂದ ಬನ್ನಿಮಂಟಪದವರೆಗೆ ಬೆಳಗ್ಗೆ ಸಂಜೆ ತಾಲೀಮು ನಡೆಸಲಾಗುತ್ತಿದೆ. ನಾಳೆಯಿಂದ ಎಲ್ಲಾ 14 ಆನೆಗಳು ತಾಲೀಮು ನಡೆಸುವ ಸಾಧ್ಯತೆ ಇದೆ.

ಕಿಟ್ ವಿತರಣೆ

ಅರ್ಚಕ ಪ್ರಹ್ಲಾದ್ ರಾವ್ ಐದು ಆನೆಗಳ ಪಾದ ಪೂಜೆ ಮಾಡಿದರು. ಬಳಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ, ಡಿಸಿಎಫ್‌ ಡಾ.ಐ.ಬಿ.ಪ್ರಭುಗೌಡ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರು ಆನೆಗಳಿಗೆ ಕಬ್ಬು, ಬೆಲ್ಲ, ಚಕ್ಕುಲಿ, ಕೋಡುಬಳೆ ನೀಡಿ ಸ್ವಾಗತಿಸಿದರು. ಮಾವುತರು, ಕಾವಾಡಿಗಳ ಕುಟುಂಬದವರಿಗೆ ಅರಮನೆ ಮಂಡಳಿ ವತಿಯಿಂದ ಪರಿಕರಗಳ ಕಿಟ್ ವಿತಣೆ ಮಾಡಲಾಯಿತು.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಮಾತನಾಡಿ, ದೊಡ್ಡಹರವೆ ಶಿಬಿರದಿಂದ ಲಕ್ಷ್ಮಿ ಆನೆ ಆಗಮಿಸಿದ್ದು, ಇದು ಅವಳಿಗೆ ಮೊದಲ ದಸರಾ ಮಹೋತ್ಸವವಾಗಿದೆ. ಇದು ಸರ್ಕಸ್ ಆನೆಯಾಗಿದ್ದು, 2015ರಲ್ಲಿ ಅರಣ್ಯ ಇಲಾಖೆಯ ವಶಕ್ಕೆ ಪಡೆದುಕೊಳ್ಳಲಾಗಿದೆ. ವಾಹನ ಮತ್ತು ಪಟಾಕಿ ಶಬ್ದಕ್ಕೆ ಲಕ್ಷ್ಮಿ ಹೆದರುವುದಿಲ್ಲ ಎಂದು ಹೇಳಿದರು.

ಎರಡನೇ ಹಂತದಲ್ಲಿ ಬಂದ ಆನೆಗಳ ತೂಕ, ವಯಸ್ಸು ವಿವರ

ಹೆಸರು: ಪ್ರಶಾಂತ
ತೂಕ: 4650 ಕೆ.ಜಿ.
ವಯಸ್ಸು: 51
ವಾಸ್ತವ್ಯ: ದುಬಾರೆ ಆನೆ ಶಿಬಿರ
ದಸರಾ ಅನುಭವ: 14 ವರ್ಷಗಳಿಂದಲೂ ಭಾಗಿ

ಆನೆ ಹೆಸರು: ಹಿರಣ್ಯ
ತೂಕ: 2800 ಕೆ.ಜಿ.
ವಯಸ್ಸು: 47
ವಾಸ್ತವ್ಯ: ರಾಮಪುರ ಆನೆ ಶಿಬಿರ
ದಸರಾ ಅನುಭವ: ಎರಡನೇ ಬಾರಿ ಭಾಗಿ.

ಆನೆ ಹೆಸರು: ಸುಗ್ರೀವ
ತೂಕ: 4800-5000 ಕೆ.ಜಿ
ವಯಸ್ಸು: 42
ವಾಸ್ತವ್ಯ: ದುಬಾರೆ ಆನೆ ಶಿಬಿರ
ದಸರಾ ಅನುಭವ: ಮೂರನೇ ಬಾರಿ ಭಾಗಿ.

ಆನೆ ಹೆಸರು: ದೊಡ್ಡಹರವೆ ಲಕ್ಷ್ಮಿ
ತೂಕ: 3000-3500 ಕೆ.ಜಿ.
ವಯಸ್ಸು: 53
ವಾಸ್ತವ್ಯ: ದೊಡ್ಡಹರವೆ ಆನೆ ಶಿಬಿರ
ದಸರಾ ಅನುಭವ: ಇದೇ ಮೊದಲ ಬಾರಿಗೆ ಭಾಗವಹಿಸುತ್ತಿದೆ.

ಮಹೇಂದ್ರ
ತೂಕ: 3150 ಕೆ.ಜಿ.
ವಯಸ್ಸ: 41
ವಾಸ್ತವ್ಯ: ಮತ್ತಿಗೋಡು ಆನೆ ಶಿಬಿರ
ದಸರಾ ಅನುಭವ: ಎರಡನೇ ಬಾರಿ ಭಾಗಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+