ಫೇಸ್‌ಬುಕ್‌ನಲ್ಲಿ ಯುವತಿಯರಿಗೆ ವಂಚಸಿದ್ದವನ ಬಂಧನ
ಮೈಸೂರು, ಅ. 9: ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಂಡು ಯುವತಿಯರ ಸ್ನೇಹ ಸಂಪಾದಿಸಿ ಕಿರುತೆರೆಯಲ್ಲಿ ನಟಿಸಲು ಅವಕಾಶ ಕೊಡುವುದಾಗಿ ಹೇಳಿ ಹಣ ಪಡೆದು ವಂಚಿಸುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಯಶವಂತಪುರ ನಿವಾಸಿ ನಿಶಾಂತ್ ಬಂಧಿತ ಆರೋಪಿ. ಗೋಣಿಕೊಪ್ಪ ಮೂಲದ ಇಬ್ಬರು ಯುವತಿಯರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಫೇಸ್‌ಬುಕ್ ನಲ್ಲಿ ನಿಶಾಂತ್ ಪರಿಚಯವಾಗಿದೆ. ಇಬ್ಬರಿಂದಲೂ ಒಂದು ಕಾಲು ಲಕ್ಷ ರೂ. ಪಡೆದು ಮತ್ತಷ್ಟು ಹಣ ನೀಡುವಂತೆ ನಿಶಾಂತ್ ಬೇಡಿಕೆ ಇಟ್ಟಿದ್ದಾನೆ.
ನಟನೆಗೆ ಅವಕಾಶ ಸಿಗದಿದ್ದಾಗ ಅನುಮಾನಗೊಂಡ ಯುವತಿಯರು ಮನೆಗೆ ವಿಷಯ ತಿಳಿಸಿದ್ದಾರೆ.[ಸಿಐಡಿ ಸೀರಿಯಲ್ ನೋಡಿ ಕಿಡ್ನಾಪ್, ಕೊಲೆ]
ನಂತರ ಹಣ ನೀಡುತ್ತೇವೆ ಮೈಸೂರಿಗೆ ಬನ್ನಿ ಎಂದು ನಿಶಾಂತ್‌ಗೆ ತಿಳಿಸಿದ್ದಾರೆ. ಅಲ್ಲದೇ ಲಷ್ಕರ್ ಠಾಣೆ ಪಿಎಸ್‌ಐ ಯೋಗಾನಂಜಪ್ಪ ಅವರಿಗೂ ಮಾಹಿತಿ ನೀಡಲಾಗಿದೆ. ಅದರಂತೆ ಹಣ ಪಡೆಯಲು ಮೈಸೂರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಆಗಮಿಸಿದ ನಿಶಾಂತ್‌ನನ್ನು ಬಂಧಿಸಲಾಗಿದೆ.












Click it and Unblock the Notifications