ಮೈಸೂರಿನ ಜೈಲಿಗೆ ಮರಳಿ ಬಾರದೆ ಕೈದಿ ಪರಾರಿ
ತಂದೆಯ ಅನಾರೋಗ್ಯ ಕಾರಣದಿಂದ ಪೆರೋಲ್ ಮೇಲೆ ಜೈಲಿನಿಂದ ಹೊರ ಬಂದಿದ್ದ ಕೈದಿ ಮತ್ತೆ ಜೈಲಿಗೆ ಮರಳಿ ಬಾರದೆ ಪರಾರಿಯಾಗಿರುವುದು ಮೈಸೂರಿನ ಜೈಲರಿಗೆ ಫಜೀತಿಗೀಡು ಮಾಡಿದೆ.
ಮೈಸೂರು ,ಫೆಬ್ರವರಿ 6 : ತಂದೆಯ ಆನಾರೋಗ್ಯ ಹಿನ್ನೆಲೆಯಲ್ಲಿ ಪೆರೋಲ್ ಮೇಲೆ ಜೈಲಿನಿಂದ ಹೊರ ಬಂದಿದ್ದ ಕೈದಿಯೊಬ್ಬ ನಾಪತ್ತೆಯಾಗಿರುವ ಘಟನೆ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಕಿಶನ್ ಎಂಬಾತ ನಾಪತ್ತೆಯಾಗಿರುವ ಕೈದಿ. ಮೈಸೂರು ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಈತ ತಂದೆಯ ಅನಾರೋಗ್ಯದ ಹಿನ್ನಲೆಯಲ್ಲಿ ಪೆರೋಲ್ ಪಡೆದಿದ್ದ. ಹೀಗಾಗಿ ನವೆಂಬರ್ 4 ರಿಂದ ಫೆ.03 ರವರೆಗೆ ಪೆರೋಲ್ ಮೇಲೆ ಕಿಶನ್ ಹೊರ ಬಂದಿದ್ದ. ಫೆ. 3ರಂದು ಕಿಶನ್ ವಾಪಸ್ಸಾಗಬೇಕಿತ್ತು.[ಕೈದಿಗಳಿಗೆ ಮನೆಗಿಂತ ಮಂಗಳೂರು ಜೈಲೇ ಬಲು ಇಷ್ಟ]

ಆದರೆ ಫೆ.06 ಆದರೂ ಕಿಶನ್ ವಾಪಸ್ ಬಂದಿಲ್ಲ. ಕಿಶನ್ಗೆ ಅಣ್ಣ ಸುರೇಶ್ ಕುಮಾರ್ ಶ್ಯೂರಿಟಿ ನೀಡಿದ್ದರು.ಪೆರೋಲ್ ಅವಧಿ ಮುಗಿದರೂ ಕಿಶನ್ ಜೈಲಿಗೆ ಬಾರದ ಹಿನ್ನಲೆಯಲ್ಲಿ ಶ್ಯೂರಿಟಿದಾರ ಅಣ್ಣ ಸುರೇಶ್ಕುಮಾರ್ ವಿರುದ್ಧ ಜೈಲು ಮುಖ್ಯ ಅಧೀಕ್ಷಕ ಆನಂದ್ ರೆಡ್ಡಿ ದೂರು ದಾಖಲಿಸಿದ್ದಾರೆ. ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೈದಿಗಳು ಜೈಲಿನಿಂದ ಸೌಜನ್ಯತೆಯ ಆಧಾರದ ಮೇಲೆ ತನ್ನ ತಂದೆಯನ್ನು ನೋಡಲು ಹೊರ ಬಂದು ಹೀಗೆ ಮಾಡಿದರೆ, ಬೇರೆ ಕೈದಿಗಳಿಗೆ ನೀಡುವ ಅವಕಾಶ ಹೇಗೆ ತಾನೇ ನೀಡುತ್ತಾರೆ ಎಂಬುದು ನಾಗರಿಕರ ಮಾತು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications