ಎಟಿಎಂ ವಾಹನ ಅಪಹರಣ : ವ್ಯಾನ್ ಸಿಕ್ತು, ಹಣ ಎಲ್ಲಿ ?

ಮೈಸೂರು, ಏ.3 : ಬೆಂಗಳೂರಿನಿಂದ ಮಂಗಳವಾರ ಮಧ್ಯಾಹ್ನ ವ್ಯಾನ್ ಮತ್ತು 66 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದ ಎಟಿಎಂಗೆ ಹಣ ತುಂಬುವ ವಾಹನದ ಚಾಲಕ ಇನ್ನೂ ಪತ್ತೆಯಾಗಿಲ್ಲ. ಆದರೆ, ಮೈಸೂರಿನಲ್ಲಿ ಶುಕ್ರವಾರ ವಾಹನ ಪತ್ತೆಯಾಗಿದೆ. ಹಣ ಇಡುವ ಪೆಟ್ಟಿಗೆ ಮತ್ತು ಬಂದೂಕು ವ್ಯಾನ್‌ನಲ್ಲಿದೆ.

ಮಾ.31ರ ಮಂಗಳವಾರ ಮಧ್ಯಾಹ್ನ ಎಟಿಎಂಗೆ ಹಣ ತುಂಬುವ ವಾಹನದ ಚಾಲಕ ಜೇಮ್ಸ್ ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಬಳಿಯಿಂದ ವಾಹನ ಮತ್ತು 66 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದ. ಜೇಮ್ಸ್ ಬಗ್ಗೆ ಸರಿಯಾದ ಮಾಹಿತಿ ದೊರಕದೇ ಇರುವುದರಿಂದ ಆತನನ್ನು ಹುಡುಕುವುದು ಪೊಲೀಸರಿಗೂ ಸವಾಲಾಗಿದೆ.

atm

ಶುಕ್ರವಾರ ಮೈಸೂರಿನಲ್ಲಿ ಜೇಮ್ಸ್ ಪರಾರಿಯಾಗಿದ್ದ ವಾಹನವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಣ ತುಂಬುವ ಪೆಟ್ಟಿಗೆ ಮತ್ತು ಭದ್ರತಾ ಸಿಬ್ಬಂದಿಯ ಬಂದೂಕು ವ್ಯಾನ್‌ನಲ್ಲಿದೆ. ಆದರೆ, ಅದರಲ್ಲಿದ್ದ ಹಣ ಮತ್ತು ಜೇಮ್ಸ್ ನಾಪತ್ತೆಯಾಗಿದ್ದಾರೆ. [ಮಿತಿ ಮೀರಿದ ಎಟಿಎಂ ಬಳಕೆ ಕೈ ಕಚ್ಚಲಿದೆ]

ಇಂಡಿಯನ್ ಮತ್ತು ಎಸ್‌ಬಿಐ ಬ್ಯಾಂಕುಗಳ ಎಟಿಎಂಗೆ ಹಣ ತುಂಬುವ ಗುತ್ತಿಗೆ ಪಡೆದಿದ್ದ ಸಂಸ್ಥೆಯ ಚಾಲಕ ಜೇಮ್ಸ್ ಮಂಗಳವಾರ ಭದ್ರತಾ ಸಿಬ್ಬಂದಿ ಕಣ್ಣುತಪ್ಪಿಸಿ ಹಣದೊಂದಿಗೆ ಪರಾರಿಯಾಗಿದ್ದ. ಕಲಾಸಿಪಾಳ್ಯ ಪೊಲೀಸರಿಗೆ ಈ ಕುರಿತು ಸಂಸ್ಥೆ ದೂರು ನೀಡಿದ್ದು, ವಾಹನದಲ್ಲಿ 66 ಲಕ್ಷ ಹಣವಿತ್ತು ಎಂದು ತಿಳಿಸಿತ್ತು.

ನಕಲಿ ವಿಳಾಸ : ಕೇರಳ ಮೂಲದವನು ಎಂದು ಹೇಳಿಕೊಂಡ ಜೇಮ್ಸ್ ಕೇವಲ ಐದು ದಿನಗಳ ಹಿಂದೆ ಸಂಸ್ಥೆಗೆ ಕೆಲಸಕ್ಕೆ ಸೇರಿದ್ದ. ಆತನಿಂದ ಸಂಸ್ಥೆಯವರು ಸರಿಯಾದ ಮಾಹಿತಿ ಮತ್ತು ದಾಖಲೆಗಳನ್ನು ಪಡೆದುಕೊಂಡಿರಲಿಲ್ಲ. ಆದ್ದರಿಂದ ಪೊಲೀಸರಿಗೂ ಆತನನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+