ಮೈಸೂರು : ಆಟೋ ಚಾಲಕರಿಗೆ ಡಿಸ್ ಪ್ಲೇ ಕಾರ್ಡ್ ಕಡ್ಡಾಯ

ಮೈಸೂರು, ಜೂ.13 : ಮೈಸೂರು ನಗರದಲ್ಲಿ ಆಟೋರಿಕ್ಷಾಗಳಿಗೆ ಚಾಲಕರ ವಿವರವಿರುವ ಡಿಸ್ ಪ್ಲೇ ಕಾರ್ಡ್ ಅಳವಡಿಸುವುದು ಕಡ್ಡಾಯವಾಗಿದೆ. ಈಗಾಗಲೇ ಡಿಸ್ ಪ್ಲೇ ಕಾರ್ಡ್ ಗಳನ್ನು ಸಂಚಾರಿ ಪೊಲೀಸರು ವಿತರಿಸುತ್ತಿದ್ದು, ಜೂ.25ರೊಳಗೆ ಕಾರ್ಡ್ ಹಾಕಿಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಟೋಗಳಲ್ಲಿ ಪ್ರಯಾಣಿಸುವ ಜನರ ಸುರಕ್ಷತೆ ದೃಷ್ಠಿಯಿಂದ ಆಟೋರಿಕ್ಷಾ ಚಾಲಕರ ಸೀಟಿನ ಹಿಂಭಾಗದಲ್ಲಿ ಚಾಲಕರ ವಿವರಗಳನ್ನು ಹೊಂದಿರುವ ಡಿಸ್ ಪ್ಲೇ ಕಾರ್ಡ್ ಗಳ ಅಳವಡಿಸುವುದು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಸಂಚಾರಿ ಪೊಲೀಸರು ಡಿಸ್ ಪ್ಲೇ ಕಾರ್ಡ್ ಗಳನ್ನು ಚಾಲಕರಿಗೆ ವಿತರಣೆ ಮಾಡುತ್ತಿದ್ದಾರೆ.

Autorickshaw

ಇದುವರೆಗೆ 8000 ಆಟೋರಿಕ್ಷಾ ಚಾಲಕರು ಮಾತ್ರ ಡಿಸ್‍ ಪ್ಲೇ ಕಾರ್ಡ್‍ಗಳನ್ನು ಪೊಲೀಸರಿಂದ ಪಡೆದಿದ್ದಾರೆ. ಎಲ್ಲಾ ಆಟೋರಿಕ್ಷಾ ಚಾಲಕರು ಜೂ.25ರೊಳಗೆ ಕಾರ್ಡ್ ಗಳನ್ನು ಪಡೆದು, ಅವರು ಚಾಲನೆ ಮಾಡುವ ಆಟೋರಿಕ್ಷಾಗಳ ಆಸನದ ಹಿಂಭಾಗದಲ್ಲಿ ಪ್ರಯಾಣಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ಅಂಬಾವಿಲಾಸ ಅರಮನೆ ಚಿನ್ನಲೇಪನದಲ್ಲಿ ಅಕ್ರಮ]

ಜೂ.25ರ ನಂತರ ಡಿಸ್ ಪ್ಲೇ ಕಾರ್ಡ್ ಆಳವಡಿಸದ ಆಟೋರಿಕ್ಷಾ ಚಾಲಕರ ವಿರುದ್ಧ ಕಾನೂನಿನ ಅನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ನೀಡಿರುವ ಅಂತಿಮ ಗಡುವಿನೊಳಗೆ ಆಟೋರಿಕ್ಷಾ ಚಾಲಕರು ಚಾಲಕರ ಡಿಸ್‍ ಪ್ಲೇ ಕಾರ್ಡ್‍ಗಳನ್ನು ಪಡೆದುಕೊಳ್ಳುವಂತೆ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+