ಕೆಆರ್ ಎಸ್ ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ ಖಚಿತ: ಸಾರಾ ಮಹೇಶ್

ಮೈಸೂರು, ಜನವರಿ 1 : ಕೆಆರ್ ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಗೆ ಕಾನೂನು ಪರಿಧಿಯಲ್ಲೇ ಸರ್ವ ಪ್ರಯತ್ನ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಾ.ರಾ.ಮಹೇಶ್ ಅವರು ಕೆಆರ್ ಎಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ಈಗಾಗಲೇ ಗಣಿಗಾರಿಕೆ, ಮತ್ತಿತರ ಉದ್ಯಮಗಳು ನಡೆಯುತ್ತಿಲ್ಲವೇ? ಎಂದು ಪ್ರಶ್ನಿಸಿದರು.

ಆರ್‍ಟಿಐ ಪ್ರಕಾರ ಆ ವ್ಯಾಪ್ತಿಯ 22 ಗ್ರಾಮಗಳ ಸರಹದ್ದಿನಲ್ಲಿ ಗಣಿಗಾರಿಕೆ, ಹೋಟೆಲ್ ಉದ್ಯಮ, ಏಟಿಯಾ ಸಂಸ್ಥೆಯ ಪವರ್ ಪ್ರಾಜೆಕ್ಟ್ ಇತ್ಯಾದಿ ಯೋಜನೆಗಳು ಸುಮಾರು 15 ವರ್ಷಗಳಿಂದ ನಡೆಯುತ್ತಿವೆ. ಆದರೆ, ಈಗ ಸೂಕ್ಷ್ಮ ಪರಿಸರ ವಲಯ ಎಂದು ಪ್ರಚಾರ ಆಗುತ್ತಿರುವುದು ಅನುಮಾನ ಮೂಡಿಸಿದೆ ಎಂದರು.

Disneylands construction in KRS is sure:Sa Ra Mahesh

ಸಾರ್ವಜನಿಕ ಹಿತಾಸಕ್ತಿಯಿಂದ ಕೆಆರ್ ಎಸ್ ಸುತ್ತಲಿನ 300 ಎಕರೆ ಪ್ರದೇಶ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಅಡ್ಡಿಪಡಿಸುತ್ತಿರುವುದು ವಿಪರ್ಯಾಸ. ಆದರೆ ಕಾನೂನಿನಲ್ಲಿ ಇರಬಹುದಾದ ಅವಕಾಶದ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡುತ್ತೇವೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದರು.

ಪರಿಸರ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮ ಹಾಗೂ ಜಲ ಪ್ರವಾಸೋದ್ಯಮಗಳೂ ಇವೆ. ಅವಕ್ಕೆ ಕಾನೂನಿನಲ್ಲಿ ವಿಶೇಷ ಅವಕಾಶಗಳಿರುತ್ತವೆ ಎನ್ನಲಾಗಿದೆ. ಹಾಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಡಿಸ್ನಿಲ್ಯಾಂಡ್ ಮಾದರಿ ನಿರ್ಮಾಣಕ್ಕೆ ದಾರಿಗಳ ಹುಡುಕಾಟ ನಡೆಸಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+