ಕೋವಿಡ್ ಪರಿಸ್ಥಿತಿ; ಮೈಸೂರು ಜೈಲಿನಿಂದ 46 ಕೈದಿಗಳು ಬಿಡುಗಡೆ
ಮೈಸೂರು, ಮೇ 17; ಕೊರೊನಾ ಎರಡನೇ ಅಲೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಕೇಂದ್ರ ಕಾರಾಗೃಹದ 46 ಕೈದಿಗಳನ್ನು 90 ದಿನಗಳು ಪರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಇನ್ನೂ 9 ಮಂದಿ ಬಿಡುಗಡೆಯಾಗಲಿದ್ದಾರೆ.
ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸುಪ್ರಿಂಕೋರ್ಟ್ ರಾಜ್ಯಗಳ ವಿವಿಧ ಕೇಂದ್ರ, ಜಿಲ್ಲಾ, ಬಯಲು, ತಾಲ್ಲೂಕು ಕಾರಾಗೃಹಗಳ ಸಜಾ ಬಂಧಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿತ್ತು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರ ನೇತೃತ್ವದ ಉನ್ನತಾಧಿಕಾರದ ಸಮಿತಿಯು ಕೈದಿಗಳನ್ನು ಪರೋಲ್ ಮೇಲೆ ಬಿಡುಗಡೆ ಮಾಡುವ ಕುರಿತು ಎಲ್ಲ ರಾಜ್ಯದ ವಿವಿಧ ಕೇಂದ್ರ, ಜಿಲ್ಲಾ, ಬಯಲು, ತಾಲ್ಲೂಕು ಕಾರಾಗೃಹಗಳ ನಡವಳಿಗಳನ್ನು ಸೂಚಿಸಿರುವ ಹಿನ್ನೆಲೆಯಲ್ಲಿ 90 ದಿನಗಳ ಪರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.

ಮೈಸೂರು ಕೇಂದ್ರ ಕಾರಾಗೃಹದಲ್ಲಿ 50 ಮಂದಿ ಶಿಕ್ಷೆಗೆ ಗುರಿಯಾದವರು ಸೇರಿದಂತೆ ಒಟ್ಟು 800 ಮಂದಿ ಕೈದಿಗಳು ಇದ್ದು, ಈ ಪೈಕಿ 46 ಕೈದಿಗಳನ್ನು 90 ದಿನಗಳ ಪರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಪೈಕಿ 9 ಮಂದಿ ಮಹಿಳೆಯರಾಗಿದ್ದಾರೆ. ಇನ್ನು 9 ಮಂದಿ ಬಿಡುಗಡೆಯಾಗಲು ಸಿದ್ಧರಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕಿ ದಿವ್ಯಶ್ರೀ, "46 ಕೈದಿಗಳನ್ನು 90 ದಿನಗಳ ಪರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಪೈಕಿ 9 ಮಂದಿ ಮಹಿಳೆಯರಾಗಿದ್ದಾರೆ. ಇನ್ನು 9 ಮಂದಿ ಪರೋಲ್ ಮೇಲೆ ಬಿಡುಗಡೆಯಾಗಲು ಅರ್ಹರಾಗಿದ್ದಾರೆ. ಇವರುಗಳನ್ನು ನಿಯಮಾವಳಿ ಅನ್ವಯ ಬಿಡುಗಡೆ ಮಾಡಲಾಗುವುದು" ಎಂದು ಹೇಳಿದ್ದಾರೆ.












Click it and Unblock the Notifications